Advertisement

ತುಂಡಾದ ದಾರ ಒಂದಾದವು

06:00 AM Sep 27, 2018 | |

ಬೇಕಾಗುವ ಪರಿಕರ:
1. ಒಂದು ಮೀಟರ್‌ ಉದ್ದದ ದಾರ
2. ಕತ್ತರಿ

Advertisement

ಮಾಡುವ ವಿಧಾನ:
ದಾರದ ಎರಡೂ ತುದಿಗಳನ್ನು ಸೇರಿಸಿ ಒಂದು ಗಂಟನ್ನು ಹಾಕಿ, ಗಂಟು ಹಾಕಿದ ದಾರವನ್ನು ಚಿತ್ರದಲ್ಲಿ ತೋರಿಸಿರುವಂತೆ ಎರಡೂ ಕೈಗಳ ಕಿರು ಹಾಗು ಹೆಬ್ಬರಳಿಗೆ ಹಾಕಿ ಎರಡು ಸುತ್ತು ಬರುವಂತೆ ತಿರುಗಿಸಿ, ಈಗ ಕೈಗಳನ್ನು ತೆಗೆದು ತಿರುಗಿಸಿದ ಜಾಗವನ್ನು ಕೈಯಲ್ಲಿ ಹಿಡಿದು  ಕತ್ತರಿಸಲು ಹೇಳಿ. ಕತ್ತರಿಸಿದ ಎರಡು ತುದಿಗಳನ್ನು ಬಾಯಿಯಲ್ಲಿ ಇಟ್ಟು ತೆಗೆದಾಗ ದಾರ ಜೋಡಿಸಲ್ಪಟ್ಟಿರುತ್ತವೆ. ಅದನ್ನು ತೋರಿಸಿ ಜಾದುಗಾರ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಾನೆ.

ತಂತ್ರದ ರಹಸ್ಯ:
ದಾರವನ್ನು, ಚಿತ್ರ-2ಮತ್ತು ಚಿತ್ರ-3ರಲ್ಲಿ ತೋರಿಸಿರುವಂತೆ ಕೈಗೆ  ಸಿಕ್ಕಿಸಿಕೊಳ್ಳಿ. ನಂತರ 180 ಡಿಗ್ರೀ ಕೋನದಲ್ಲಿ ತಿರುಗಿಸಿ ಒಂದೇ ಕೈಗೆ ಬರುವಂತೆ ಸೇರಿಸಿ. ಈಗ ನೀವು ಗಮನಿಸಿದರೆ ಒಂದು ಭಾಗದಲ್ಲಿ ಸರಪಳಿಯಂತೆ ಬಂದಿರುತ್ತದೆ. ಈ ಸರಪಳಿಯನ್ನು ಪ್ರೇಕ್ಷಕರಿಗೆ ಕಾಣದಂತೆ  ಹೆಬ್ಬಟ್ಟಿನ ಸಹಾಯದಿಂದ ಮುಚ್ಚಿ ಅದರ ಮುಂದೆ ದಾರವನ್ನು ಕತ್ತರಿಸಿಲು ಕೊಡಿ(ಚಿತ್ರ-5). ಹಾಗೆ ಅವರು ಕತ್ತರಿಸಿದಾಗ, ಕತ್ತರಿಸಿದ ಭಾಗ ದಾರದ ಸರಪಳಿಯ ಸಣ್ಣ  ತುಂಡಾಗಿದ್ದು(ಚಿತ್ರ-6) ಅದಕ್ಕೂ ನಮ್ಮ ದಾರಕ್ಕೂ ಸಂಬಂಧವಿರುವುದಿಲ್ಲ. ಆ ಹೆಚ್ಚುವರಿ ತುಂಡನ್ನು ಬಾಯಿಯಲ್ಲಿ ಇಟ್ಟು ಹಲ್ಲು ಹಾಗು ನಾಲಗೆಯ ಸಹಾಯದಿಂದ (ಚಿತ್ರ-7)ಬಾಯಿಯೊಳಗೆ ನಿಧಾನವಾಗಿ ಆ ಸಣ್ಣ ತುಂಡನ್ನು ಎಳೆದುಕೊಳ್ಳಿ. ಈಗ ಗಿಲಿಗಿಲಿ ಪೂವ್ವಾ ಎಂದು ದಾರ ಹೊರ ತೆಗೆದು ತೋರಿಸಿ ಚಪ್ಪಾಳೆ ಗಿಟ್ಟಿಸಿಕೊಳ್ಳಿ.

ಜಾದುವನ್ನು ಇನ್ನು ನಿಖರವಾಗಿ ಹೇಗೆ ಮಾಡುವುದು ಎಂದು ತಿಳಿಯಲು ಇಲ್ಲಿ ಕೊಟ್ಟಿರುವ ವಿಡಿಯೋ ಲಿಂಕ್‌ಗೆ ಭೇಟಿ ಕೊಡಬಹುದು. 
goo.gl/j4PyE6

ನಿರೂಪಣೆ ಹಾಗೂ ಚಿತ್ರ: ಗಾಯತ್ರಿ ಯತಿರಾಜ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next