ಕಲಕೇರಿ: ಮಕ್ಕಳಲ್ಲಿ ಒಳ್ಳೆ ಸಂಸ್ಕೃತಿ ಜೊತೆಗೆ ದೇಶಾಭಿಮಾನ, ಹಿರಿಯರಲ್ಲಿ ಗೌರವ, ಸಾಮರಸ್ಯದಂತಹ ವಿಚಾರಗಳು ಬೆಳೆಯಲು ಬಾಲ್ಯದ ಶಿಕ್ಷಣ ಅವಶ್ಯ. ಕಟ್ಟಡಕ್ಕೆ ಬುನಾದಿ ಎಷ್ಟು ಮುಖ್ಯವೋ ಮಗುವಿಗೆ ಶಿಕ್ಷಣ ಅಷ್ಟೇ ಮುಖ್ಯವಾಗಿದ್ದು ಪಾಲಕರು ಮತ್ತು ಶಿಕ್ಷಕರು ಮಕ್ಕಳಲ್ಲಿ ಮೌಲ್ಯಾಧಾರಿತ ಶಿಕ್ಷಣ ನೀಡಬೇಕು ಎಂದು ಪಿಎಸೈ ನಾಗರಾಜ ಕಿಲಾರೆ ಹೇಳಿದರು.
ಗ್ರಾಮದ ಪೀಸ್ ಇಂಟರ್‌ನ್ಯಾಷನಲ್ ಹಿರಿಯ ಪ್ರಾಥಮಿಕ ಶಾಲೆ 5ನೇ ವಾರ್ಷಿಕ ಸ್ನೇಹ ಸಮೇಳನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡಬೇಕು. ಪಠ್ಯ ಬೋಧನೆಯೊಂದಿಗೆ ಕರಾಟೆ, ಯೋಗ, ಗೀತ ಗಾಯನ ಸೇರಿದಂತೆ ಪಠ್ಯೇತರ ಚಟುವಟಿಕೆಗಳಿಗೂ ಮಹತ್ವ ನೀಡಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಬೇಕು.
ಪಾಲಕರು ಕೂಡಾ ಮಕ್ಕಳ ಮೇಲೆ ಕೇವಲ ಅಂಕಗಳಿಕೆಗೆ ಒತ್ತಡ ಹಾಕದೇ ಅವರವರ ಪ್ರತಿಭೆ, ಸಾಧನೆಗೆ ತಕ್ಕಂತೆ ಅವರು ಮುಂದುವರಿಯಲು ಬಿಡಬೇಕು. ಶಿಕ್ಷಕರು ಹಾಗೂ ಪಾಲಕರು ಉತ್ತಮ ಸಮಾಜ ನಿರ್ಮಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ವಿಜಯಪುರ ಆಲ್ ಅಮೀನ್ ಕಾಲೇಜಿನ ಪ್ರಾಧ್ಯಾಪಕ ಡಾ| ಜಿಲಾನಿ ಅವಟಿ ಮಾತಾನಾಡಿ, ವಿದ್ಯೆಗೆ ಕೊನೆಯೆಂಬುದಿಲ್ಲ, ಅದು ಹರಿಯುವ ನೀರಿದ್ದಂತೆ, ಪ್ರತಿಯೊಬ್ಬರೂ ಜ್ಞಾನ ಸಂಪಾದನೆಗೆ ಮುಂದಾಗಬೇಕು. ದೇಶದ ಮುಖ್ಯ ಕಸುಬಾದ ಕೃಷಿ ಕ್ಷೇತ್ರ ಬಲಶಾಲಿಯಾಗಬೇಕು. ನಮ್ಮ ಮಕ್ಕಳು ಎಂಜಿನಿಯರ್, ಡಾಕ್ಟರ್ ಆಗಬೇಕು ಅನ್ನೋ ಹಾಗೇನೆ ನನ್ನ ಮಗ ಕೃಷಿ ಪಂಡಿತರಾಗಬೇಕು ಎನ್ನುವ ಮನೋಭಾವ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಸಿಂದಗಿ ಬಿಜೆಪಿ ಮಂಡಲ ಅಧ್ಯಕ್ಷ ಸಿದ್ದು ಬುಳ್ಳಾ, ತಾಪಂ ಸದಸ್ಯ ಲಕ್ಕಪ್ಪ ಬಡಿಗೇರ ಮಾತನಾಡಿದರು. ಈ ವೇಳೆ ಸಂಸ್ಥೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ 2019ನೇ ಸಾಲಿನ ಪೀಸ್ ಪರ್ಲ್ ಅವಾರ್ಡ್, ವರ್ಷದ ಅತ್ಯುತ್ತಮ ವಿದ್ಯಾರ್ಥಿ ಅವಾರ್ಡ್ ಹಾಗೂ ಬಾಲವಿಜ್ಞಾನಿ ಅವಾರ್ಡ್ ನೀಡಿ ಗೌರವಿಸಲಾಯಿತು.
ಮೌಲಾನಾ ಮಹ್ಮದ್ ಇಸಾಕ್ ಮೋಮಿನ್ ಉಮ್ರಿ ಸಾನ್ನಿಧ್ಯ, ನಬಿಸಾಬ ದೊಡಮನಿ ಅಧ್ಯಕ್ಷತೆ ವಹಿಸಿದ್ದರು. ಅಕºರಸಾಬ ಮುಲ್ಲಾ, ಅಲ್ಲಾಭಕ್ಷ ಗೋಗಿ, ದಾವಲಸಾಬ ನಾಯ್ಕೋಡಿ,
ದಸ್ತಗೀರಸಾಬ ವಲ್ಲಿಭಾವಿ, ಹುಸೇನಸಾಬ ಹೊಟಗಿ, ಅಕ್ಬರಸಾಬ ಹೊಟಗಿ, ಎಲ್.ಎಂ. ಬಡಿಗೇರ, ಮಹಿಮೂದ್ ಕೆಂಭಾವಿ, ಈರಣ್ಣ ಕಡಕೋಳ, ಯಾಕೂಬ್ ಸಿರಸಗಿ, ದರಸಮಹ್ಮದ ಮುಲ್ಲಾ, ಮಶ್ಯಾಕಸಾಬ ವಲ್ಲಿಭಾವಿ, ಡಾ| ಕಾಶೀಮ ನಾಯ್ಕೋಡಿ, ಡಾ| ಮುನೀರಅಹ್ಮದ ನಾಯ್ಕೋಡಿ,
ದೇವಿಂದ್ರ ಬಡಿಗೇರ, ಚಾಂದಪಾಶಾ ಹವಾಲ್ದಾರ, ಶೃತಿ ಗಣಾಚಾರಿ, ನಾಗರತ್ನಾ ದೇವಾಡಿಗ, ವಿದ್ಯಾ ನಾಯಕ, ಮಂಜುಳಾ ಹಿರೇಮಠ ಇದ್ದರು.