Advertisement

‘ನಾಯಕತ್ವ  ಶಿಬಿರ ಅಗತ್ಯ’

12:47 PM Nov 08, 2017 | |

ಮೂಲ್ಕಿ: ಬೆಳೆಯುವ ಯುವ ಶಕ್ತಿಯ ಪ್ರತಿಭೆಯನ್ನು ಹೊರತರಲು ನಾಯಕತ್ವದ ಬಗ್ಗೆ ನೀಡಲಾಗುವ ತರಬೇತಿ ಅತ್ಯಂತ ಪರಿಣಾಮಕಾರಿಯಾಗಿ ಯುವಕರನ್ನು ಜಾಗ್ರತಗೊಳಿಸಬಲ್ಲದು ಎಂದು ಮೂಲ್ಕಿ ನಾರಾಯಣ ಗುರು ಶಿಕ್ಷಣ ಸಂಸ್ಥೆಗಳ ಸಂಚಾಲಕ ಎಚ್‌. ವಿ.ಕೊಟ್ಯಾನ್‌ ಹೇಳಿದರು.

Advertisement

ಅವರು ಮೂಲ್ಕಿ ಯುವವಾಹಿನಿಯ ಘಟಕದ ಆಶ್ರಯದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಮೂಲಕ ಘಟಕದ ಪದಾಧಿಕಾರಿಗಳಿಗೆ ಹಮ್ಮಿಕೊಂಡ ಚೈತನ್ಯ-2017 ನಾಯಕತ್ವ ಶಿಬಿರವನ್ನು ಉದ್ಘಾಟಿಸಿದರು.

ಶಿಬಿರದ ಮುಖ್ಯ ಸಂಪನ್ಮೂಲ ವ್ಯಕ್ತಿ ರಾಜೇಂದ್ರ ಭಟ್‌ ಕಾರ್ಕಳ ಮಾತನಾಡಿ, ಯುವವಾಹಿನಿ ಎರಡೂವರೆ ದಶಕಗಳಿಂದ ಶ್ರೀ ನಾರಾಯಣ ಗುರುಗಳ ತತ್ವಗಳಡಿಯಲ್ಲಿ ಜಾತಿ, ಮತಗಳ ಅಂತರವಿಲ್ಲದೆ ಸಮಾಜ ಮುಖಿಯಾಗಿ ಮಾಡುತ್ತಿರುವ ಸೇವೆಗಾಗಿ ರಾಜ್ಯೋತ್ಸವ ಪ್ರಶಸ್ತಿಯ ಮೂಲಕ ಗೌರವ ಪಡೆದಿರುವುದು ಹೆಮ್ಮೆಯ ವಿಚಾರ ಎಂದರು.

ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಯಶವಂತ ಪೂಜಾರಿ, ಮೂಲ್ಕಿ ಘಟಕದ ಅಧ್ಯಕ್ಷೆ ರಕ್ಷಿತಾ ಯೋಗೀಶ್‌ ಕೋಟ್ಯಾನ್‌ ಉಪಸ್ಥಿತರಿದ್ದರು. ರಾಜೇಶ್‌ ಸುವರ್ಣ, ನರೇಶ್‌ ಕುಮಾರ್‌, ರಘುನಾಥ್‌ ಮಾಬಿಯಾನ್‌, ಉದಯ ಅಮೀನ್‌ ಮಟ್ಟು, ಅರುಣಾ ಪ್ರಕಾಶ್‌ ಸುವರ್ಣ ವೇದಿಕೆಯಲ್ಲಿದ್ದರು. ವಿಜಯ ಕುಮಾರ್‌ ಕುಬೆವೂರು ನಿರ್ವಹಿಸಿದರು. ಕಾರ್ಯದರ್ಶಿ ಸತೀಶ್‌ ಕಿಲ್ಪಾಡಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next