Advertisement

ದಿಲ್ಲಿಯ ರೋಗಿಗಳ ಮೂತ್ರದಲ್ಲಿ ಸೀಸದ ಅಂಶ ಪತ್ತೆ

06:45 AM Dec 21, 2018 | |

ಹೊಸದಿಲ್ಲಿ:ರಾಷ್ಟ್ರ ರಾಜಧಾನಿಯ ರೋಗಿಗಳ ಮೂತ್ರದಲ್ಲಿ ಸೀಸ ಮತ್ತು ಅಪಾಯಕಾರಿ ಲೋಹಗಳು ಇರುವುದು ಪತ್ತೆಯಾಗಿದೆ. ಕಳೆದ ವರ್ಷ ದೀಪಾವಳಿ ಸಂದರ್ಭದಲ್ಲಿ ಪಟಾಕಿಯ ಹೊಗೆಯನ್ನು ಉಸಿರಾಡಿದ ರೋಗಿಗಳ ಮೂತ್ರದ ಮಾದರಿ ಪರೀಕ್ಷೆಗೆ ಒಳಪಡಿಸಿದ ಬಳಿಕ ಈ ಆಘಾತಕಾರಿ ಅಂಶ ಬಯಲಾಗಿದೆ. 

Advertisement

ಸೆಂಟರ್‌ ಫಾರ್‌ ಆಕ್ಯುಪೇಷನಲ್‌ ಆ್ಯಂಡ್‌ ಎನ್ವಿರಾನ್‌ಮೆಂಟ್‌ ಸಂಸ್ಥೆ 2017ರಲ್ಲಿ ನಡೆಸಿದ ಅಧ್ಯಯನದಲ್ಲಿ ಈ ಅಂಶ ಕಂಡು ಬಂದಿದೆ. ಸುಮಾರು 20 ಆಸ್ಪತ್ರೆಗಳಲ್ಲಿನ ರೋಗಿಗಳಲ್ಲಿ  ಬ್ಯಾರಿಯಂ, ಸೀಸ ಮತ್ತಿತರ ಅಪಾ ಯಕಾರಿ ಲೋಹಗಳ ಅಂಶ ಮಿತಿಗಿಂತ ಹೆಚಾjಗಿ ದೆ ಎಂದು ಹೇಳಲಾಗಿದೆ. ದೀಪಾವಳಿ ಬಳಿಕ ಆಸ್ಪತ್ರೆಗಳಲ್ಲಿ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾದವರ ಪ್ರಮಾಣ ಶೇ.45ರಷ್ಟು ಹೆಚ್ಚಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next