Advertisement

ಮೊಣಕೈ ಗಾಯದ ನಡುವೆ ಈ ಬಾರಿ ಐಪಿಎಲ್ ಆಡಿದ್ದೆ: ಸ್ಟೀವ್ ಸ್ಮಿತ್

05:19 PM Jul 04, 2021 | Team Udayavani |

ಸಿಡ್ನಿ: ನನ್ನ ಮೊಣಕೈ ಗಾಯದ ನಡುವೆ ನಾನು ಈ ಬಾರಿ ಐಪಿಎಲ್ ಆಡಿದ್ದೆ. ಕೂಟ ಮುಂದುವರಿದಂತೆ ಗಾಯದ ಸಮಸ್ಯೆ ಹೆಚ್ಚಾಗಿತ್ತು ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್ ಹೇಳಿದ್ದಾರೆ.

Advertisement

ಐಪಿಎಲ್ ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಪರವಾಗಿ ಆಡುವ ಸ್ಟೀವ್ ಸ್ಮಿತ್ ಈ ಬಾರಿ ಅರ್ಧದಲ್ಲಿ ನಿಂತ ಐಪಿಎಲ್ ನಲ್ಲಿ ಕಳಪೆ ಪ್ರದರ್ಶನ ತೋರಿದ್ದರು. 26ರ ಸರಾಸರಿಯಲ್ಲಿ ಸ್ಮಿತ್ ಕೇವಲ 104 ರನ್ ಮಾತ್ರ ಗಳಿಸಿದ್ದರು.

ಇದನ್ನೂ ಓದಿ:ಇಂಗ್ಲೆಂಡ್ ನಲ್ಲಿ ಭಾರತ ತಂಡಕ್ಕೆ ಸರಣಿ ಜಯಿಸುವ ಉತ್ತಮ ಅವಕಾಶವಿದೆ: ಇಯಾನ್ ಚಾಪೆಲ್

ನಾನು ಐಪಿಎಲ್ ವೇಳೆ ಪೂರ್ಣ ಪ್ರಮಾಣದಲ್ಲಿ ಫಿಟ್ ಆಗಿರಲಿಲ್ಲ. ನೋವು ನಿವಾರಕ ಮಾತ್ರೆಗಳನ್ನು ಸೇವಿಸಿ ನಾನು ಬ್ಯಾಟಿಂಹ್ ಮಾಡಲು ಹೋಗುತ್ತಿದ್ದೆ ಎಂದು ಸ್ಮಿತ್ ಹೇಳಿದ್ದಾರೆ.

ಗಾಯದ ಸಮಸ್ಯೆಯ ಕಾರಣದಿಂದ ಸ್ಟೀವ್ ಸ್ಮಿತ್ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದಾರೆ. ಅಷ್ಟೇ ಅಲ್ಲದೆ ಮುಂಬರುವ ಟಿ20 ವಿಶ್ವಕಪ್ ಮತ್ತು ಐಪಿಎಲ್ ನಲ್ಲೂ ಸ್ಮಿತ್ ಆಡುವುದು ಬಹುತೇಕ ಅನುಮಾನ ಎನ್ನಲಾಗಿದೆ. ಮುಂಬರುವ ಆ್ಯಶಸ್ ಸರಣಿಗೆ ಫಿಟ್ ಆಗಬೇಕಿರುವ ಕಾರಣ ಸ್ಟೀವ್ ಸ್ಮಿತ್ ಈ ನಿರ್ಧಾರ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next