Advertisement
ನಗರದ ಕುಂಟಿಕಾನದಲ್ಲಿರುವ ಎ.ಜೆ. ಅಡಿಟೋರಿಯಂನಲ್ಲಿ ಗುರುವಾರ ಏರ್ಪಡಿಸಲಾದ ಲಕ್ಷ್ಮೀ ಮೆಮೋರಿಯಲ್ ಕಾಲೇಜ್ ಆಫ್ ನರ್ಸಿಂಗ್‌ನ ಘಟಿಕೋತ್ಸವ ಹಾಗೂ ವಾರ್ಷಿಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ನರ್ಸಿಂಗ್ ಕಲೆ ಹಾಗೂ ವಿಜ್ಞಾನ ಒಳಗೊಂಡಿದೆ. ತಮಗೆ ಏನೇ ಸಮಸ್ಯೆಗಳಿದ್ದರೂ ಅದನ್ನು ಎದುರಿಸಿ ನರ್ಸ್‌ಗಳು ಸೇವೆ ನೀಡಬೇಕಾಗಿದೆ. ರೋಗಿಗಳೊಂದಿಗೆ ಬೆರೆತು ಅವರ ನೋವು ಮರೆಸಬೇಕು. ಅಲ್ಲದೇ, ತಾವು ಕಾರ್ಯನಿರ್ವಹಿಸುವ ಸಂಸ್ಥೆ, ಒಡಹುಟ್ಟಿದವರು ಹಾಗೂ ಸಮಾಜಕ್ಕೆ ನಿಷ್ಠರಾಗಿರಬೇಕು. ನರ್ಸಿಂಗ್ ಶ್ರೇಷ್ಠ ವೃತ್ತಿಯಾಗಿದ್ದು, ನರ್ಸ್‌ಗಳಿಗೆ ಯಾರೂ ಪರ್ಯಾಯವಾಗಲು ಸಾಧ್ಯವಿಲ್ಲ. ಸೇವೆಯಲ್ಲಿ ತಮ್ಮ ಜ್ಞಾನ, ಮನಸ್ಸು ಬಳಕೆಯಾಗಬೇಕು. ಪ್ರತಿದಿನ ಹೊಸತು ಅರಿಯುವಂತಾಗಬೇಕಲ್ಲದೇ, ಜ್ಞಾನ ಬೆಳೆಸಿಕೊಂಡು ಸಕ್ರಿಯರಾಗಿ ಕಾರ್ಯನಿರ್ವಹಿಸಬೇಕು ಎಂದರು.
ಲಕ್ಷ್ಮೀ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್‌ನ ಉಪಾಧ್ಯಕ್ಷ ಪ್ರಶಾಂತ್ ಶೆಟ್ಟಿ ಮಾತನಾಡಿ, ಕಠಿನ ಅಭ್ಯಾಸ, ನಿಷ್ಠೆ ಹಾಗೂ ಸೇವಾ ಮನೋಭಾವ ಅಳವಡಿಸಿಕೊಂಡು ಸಮಾಜಕ್ಕೆ ಪೂರಕ ಸೇವೆ ನೀಡುವಲ್ಲಿ ನರ್ಸ್‌ಗಳು ತೊಡಗಿಸಿಕೊಳ್ಳಬೇಕು. ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು ಹಾಗೂ ಸಿಬಂದಿ ಕಾರ್ಯ ಶ್ಲಾಘನೀಯ ಎಂದರು. ಪ್ರತಿಭಾನ್ವಿತರಿಗೆ ಬಹುಮಾನ ವಿತರಿಸಲಾಯಿತು. ಎಂಎಸ್‌ಸಿ ನರ್ಸಿಂಗ್, ಬಿಎಸ್‌ಸಿ ನರ್ಸಿಂಗ್, ಪಿಸಿಬಿಎಸ್‌ಸಿ ನರ್ಸಿಂಗ್ ಹಾಗೂ ಜಿಎನ್‌ಎಂ ನರ್ಸಿಂಗ್ ಸೇರಿದಂತೆ ಒಟ್ಟು 118 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಕಾಲೇಜು ಪ್ರಾಂಶುಪಾಲೆ ಡಾ| ಲಾರಿಸ್ಸಾ ಮಾರ್ಥ ಸ್ಯಾಮ್ಸ್, ಉಪಪ್ರಾಂಶುಪಾಲೆ ಡಾ| ಥೆರೆಸಾ ಮೆಂಡೋನ್ಸಾ ಉಪಸ್ಥಿತರಿದ್ದರು.