Advertisement

ದುಡಿಯುವ ವರ್ಗವೆಂದರೆ ನನಗೆ ಅಕ್ಕರೆ

11:56 AM May 13, 2020 | Suhan S |

ಬೆಳಗಾವಿ: ನರೇಗಾ ಕಾರ್ಮಿಕರು ಸೇರಿದಂತೆ ದುಡಿಯುವ ವರ್ಗವೆಂದರೆ ನನ್ನ ಹೃದಯಕ್ಕೆ ಬಹಳ ಹತ್ತಿರ. ಅವರನ್ನು ಕಂಡನೆ ನನಗೆ ಎಲ್ಲಿಲ್ಲದ ಅಕ್ಕರೆ, ಅನುಕಂಪ. ಅವರ ಸರ್ವಾಂಗೀಣ ವಿಕಾಸಕ್ಕಾಗಿ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದೇನೆ ಎಂದು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಟಾಳಕರ ಹೇಳಿದರು.

Advertisement

ಕ್ಷೇತ್ರ ಮತ್ತು ಕ್ಷೇತ್ರದ ಜನರೇ ತಮಗೆ ಸರ್ವಸ್ವ ಎಂದು ನಂಬಿರುವ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಟಾಳಕರ ಮಂಗಳವಾರ ಬೆಳಗಾವಿ ತಾಲೂಕಿನ ಮೋದಗಾ ಗ್ರಾಮದಲ್ಲಿ ತಮ್ಮ ಜನ್ಮದಿನವನ್ನು ವಿಶಿಷ್ಟವಾಗಿ ಆಚರಿಸಿಕೊಂಡು ಈ ಮಾತು ಹೇಳಿದರು. ಮೋದಗಾ ಗ್ರಾಮಕ್ಕೆ ಭೇಟಿ ನೀಡಿದ ಅವರು, ನರೇಗಾ ಯೋಜನೆಯಡಿ ದುಡಿಯುತ್ತಿರುವ ಕಾರ್ಮಿಕರಿಗೆ ಊಟೋಪಹಾರದ ವ್ಯವಸ್ಥೆ ಮಾಡಿದರು. ಅವರ ಆರೋಗ್ಯ,

ಯೋಗಕ್ಷೇಮ ವಿಚಾರಿಸಿದರು. ಕೋವಿಡ್ ಹಿನ್ನೆಲೆಯಲ್ಲಿ ನರೇಗಾ ಕಾರ್ಮಿಕರ ಕೆಲಸದ ಸಮಯದಲ್ಲಿ ವಿನಾಯಿತಿ ನೀಡಲು ಪ್ರಯತ್ನಿಸುತ್ತೇನೆ ಎಂದು ಹೆಬ್ಟಾಳಕರ ಭರವಸೆ ನೀಡಿದರು. ನರೇಗಾದಡಿ ದುಡಿಯುತ್ತಿರುವ ನನ್ನ ಸಹೋದರಿಯರಿಗೆ ಕೋವಿಡ್ ಅಟ್ಟಹಾಸದಿಂದ ಆರ್ಥಿಕವಾಗಿ ತೀವ್ರ ಹಿನ್ನಡೆಯಾಗಿದೆ. ಅವರ ಕಷ್ಟಗಳನ್ನು ತುಂಬಾ ಹತ್ತಿರದಿಂದ ನೋಡಿದ್ದೇನೆ. ಇವತ್ತಿನ ದುಡಿಮೆ ಇವತ್ತಿನ ಊಟ ಎನ್ನುವಂತಹ ಪರಿಸ್ಥಿತಿ ಇದೆ. ಅವರ ದುಡಿಮೆಯೇ ಕುಟುಂಬಕ್ಕೆ ಆಧಾರ. ಹೀಗಿರುವಾಗ ಈ ಎಲ್ಲ ಅಕ್ಕತಂಗಿಯರ ಜೊತೆ ಬೆರೆತು ಕಷ್ಟ, ಸುಖ ಹಂಚಿಕೊಳ್ಳುವುದರೊಂದಿಗೆ ಹುಟ್ಟುಹಬ್ಬವನ್ನು ಕೂಡ ಹಂಚಿಕೊಳ್ಳುತಿದ್ದೇನೆ ಎಂದು ಭಾವುಕರಾಗಿ ಹೇಳಿದರು.

ಕ್ಷೇತ್ರದಲ್ಲಿ ದುಡಿಯುತ್ತಿರುವವರನ್ನು ವಿಚಾರಿಸಿದ ಶಾಸಕರು, ಏನಾದರೂ ತೊಂದರೆ, ಅನಾನುಕೂಲತೆಗಳು ಇದ್ದರೆ ನನ್ನ ಗಮನಕ್ಕೆ ತನ್ನಿ. ನಿಮ್ಮೊಂದಿಗೆ ಸದಾಕಾಲವೂ ನಾನಿದ್ದೇನೆ ಎಂದು ಧೈರ್ಯ ತುಂಬಿದರು. ಈ ಸಂದರ್ಭದಲ್ಲಿ ಸಹೋದರ ಚನ್ನರಾಜ ಹಟ್ಟಿಹೊಳಿ, ಪುತ್ರ ಮೃಣಾಲ ಹೆಬ್ಟಾಳಕರ, ಯುವರಾಜ ಕದಂ, ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next