Advertisement

ಪಿಎಫ್ಐ ಪರ ಕೆಲಸ: ಕೇರಳ ಹೈಕೋರ್ಟ್ ವಕೀಲನನ್ನು ಬಂಧಿಸಿದ ಎನ್ ಐಎ

06:04 PM Dec 30, 2022 | Team Udayavani |

ಎರ್ನಾಕುಲಂ: ಕೇರಳದಲ್ಲಿ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾಗೆ ಸಂಬಂಧಿಸಿದ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ವಕೀಲನೊಬ್ಬನನ್ನು ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

Advertisement

ಗುರುವಾರ ರಾಜ್ಯದ 56 ಸ್ಥಳಗಳಲ್ಲಿ ನಡೆಸಿದ ಶೋಧದ ನಂತರ ಈ ಪ್ರಕರಣದಲ್ಲಿ ಬಂಧಿತರಾದ ಹದಿನಾಲ್ಕನೇ ವ್ಯಕ್ತಿ ಎರ್ನಾಕುಲಂ ಜಿಲ್ಲೆಯ ಎಡವನಕ್ಕಾಡ್ ನಿವಾಸಿ ಮೊಹಮ್ಮದ್ ಮುಬಾರಕ್ ಎ.ಐ.ಎಂದು ಫೆಡರಲ್ ಏಜೆನ್ಸಿಯ ವಕ್ತಾರರು ತಿಳಿಸಿದ್ದಾರೆ.

“ಮುಬಾರಕ್ ಪಿಎಫ್ಐ ಮಾರ್ಷಲ್ ಆರ್ಟ್ಸ್ ಮತ್ತು ಹಿಟ್ ಸ್ಕ್ವಾಡ್ ಟ್ರೈನರ್ ಆಗಿದ್ದು ಕೇರಳ ಹೈಕೋರ್ಟ್‌ನಲ್ಲಿ ವಕೀಲನಾಗಿ ಕಾರ್ಯನಿರ್ವಹಿಸುತ್ತಿದ್ದ ಎಂದು ಅಧಿಕಾರಿ ತಿಳಿಸಿದ್ದಾರೆ.

ತಪಾಸಣೆಯ ವೇಳೆ ಆತನ ಮನೆಯಿಂದ ಬ್ಯಾಡ್ಮಿಂಟನ್ ರಾಕೆಟ್ ಬ್ಯಾಗ್‌ನಲ್ಲಿ ಬಚ್ಚಿಟ್ಟಿದ್ದ ಕೊಡಲಿ, ಕತ್ತಿಗಳು ಸೇರಿದಂತೆ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.

“ಇತರ ಸಮುದಾಯಗಳ ನಾಯಕರು ಮತ್ತು ಸದಸ್ಯರನ್ನು ಗುರಿಯಾಗಿಸಲು ಪಿಎಫ್‌ಐ ವಿವಿಧ ರಾಜ್ಯಗಳು ಮತ್ತು ಜಿಲ್ಲೆಗಳಲ್ಲಿ ಹಿಟ್ ಸ್ಕ್ವಾಡ್‌ಗಳನ್ನು ಬೆಳೆಸಿ ತರಬೇತಿ ನೀಡುತ್ತಿದೆ ಮತ್ತು ನಿರ್ವಹಿಸುತ್ತಿದೆ ಎಂದು ತನಿಖೆಗಳು ದೃಢಪಡಿಸಿವೆ ಎಂದು ವಕ್ತಾರರು ಹೇಳಿದ್ದಾರೆ.

Advertisement

ಕೇರಳದಲ್ಲಿ ಪಿಎಫ್‌ಐ ವಿರುದ್ಧದ ಪ್ರಮುಖ ಕಾರ್ಯಾಚರಣೆಯಲ್ಲಿ ಎನ್‌ಐಎ12 ಜಿಲ್ಲೆಗಳ 56 ಸ್ಥಳಗಳಲ್ಲಿ ಏಳು ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ಪಿಎಫ್‌ಐನ ಹಲವು ವಲಯ ಮುಖ್ಯಸ್ಥರ ನಿವಾಸಗಳಲ್ಲಿ ಶೋಧ ನಡೆಸಿತ್ತು. 15 ದೈಹಿಕ ತರಬೇತಿ ಬೋಧಕರು ಕೃತ್ಯಗಳನ್ನು ನಡೆಸಲು ಶಸ್ತ್ರಾಸ್ತ್ರಗಳನ್ನು ಬಳಸುವಲ್ಲಿ ತರಬೇತಿ ಪಡೆದ ಏಳು ಸದಸ್ಯರ ಮನೆಗಳನ್ನು ಸಹ ಶೋಧಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಸೆಪ್ಟೆಂಬರ್ 19 ರಂದು ಸ್ವಯಂಪ್ರೇರಿತವಾಗಿ ದಾಖಲಿಸಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ 20 ಇತರ ಶಂಕಿತರನ್ನು ಈ ಕಾರ್ಯಾಚರಣೆಯು ಒಳಗೊಂಡಿದೆ. ಇದಕ್ಕೂ ಮೊದಲು, ಎನ್‌ಐಎ ಸೆಪ್ಟೆಂಬರ್ 22 ರಂದು ಪಿಎಫ್‌ಐ ಕಚೇರಿಗಳು ಮತ್ತು 13 ಆರೋಪಿಗಳ ನಿವಾಸಗಳು ಸೇರಿದಂತೆ ಕೇರಳದ 24 ಸ್ಥಳಗಳಲ್ಲಿ ಶೋಧ ನಡೆಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next