Advertisement

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸದಸ್ಯ ವಾಂಟೆಡ್ ಕ್ರಿಮಿನಲ್ ಪವನ್ ಸೋಲಂಕಿ ಗೋವಾದಲ್ಲಿ ಬಂಧನ

02:21 PM Mar 18, 2023 | Team Udayavani |

ಪಣಜಿ: ಜೋಧ್‍ಪುರದಲ್ಲಿರುವ ಜೆಸರಾಂ ಅವರ ಕಚೇರಿಗೆ ನುಗ್ಗಿದ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಲಕ್ಷಾಂತರ ರೂಪಾಯಿ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಂಟೆಡ್ ಕ್ರಿಮಿನಲ್ ಪವನ್ ಸೋಲಂಕಿಯನ್ನು ಪಣಜಿ ಪೊಲೀಸರು ಬಂಧಿಸಿದ್ದಾರೆ.

Advertisement

ಪಣಜಿ ಪೋಲಿಸ್ ಬಂಧಿಸಿದ ಈ ಅಪರಾಧಿಯನ್ನು ಸರ್ದಾರ್ ಪುರ ಪೊಲೀಸರು ಆತನನ್ನು ವಶಕ್ಕೆ ಪಡೆದು ಜೋಧಪುರಕ್ಕೆ ತೆರಳಿದ್ದಾರೆ ಎಂದು ಗೋವಾ ಪೊಲೀಸ್ ವರಿಷ್ಠಾಧಿಕಾರಿ ನಿಧಿನ್ ವಾಲ್ಸನ್ ತಿಳಿಸಿದ್ದಾರೆ. ಶಂಕಿತ ಆರೋಪಿ ಪವನ್ ಸೋಲಂಕಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸದಸ್ಯ ಎನ್ನಲಾಗಿದೆ.

ಈ ಗ್ಯಾಂಗ್ ನ ನಾಯಕನ ಸೂಚನೆ ಮೇರೆಗೆ ಜೋಡುಪಾಲದಲ್ಲಿ ಸುಲಿಗೆ, ಲೂಟಿ, ಕಳ್ಳತನ ಮುಂದುವರಿದಿದೆ. ಮಾರ್ಚ್ 4 ರಂದು ಗ್ಯಾಂಗ್‍ನ ಕೆಲವು ಸದಸ್ಯರು ಮುಖವಾಡ ಧರಿಸಿ ಜೆಸರಾಂ ಕಚೇರಿಗೆ ಪ್ರವೇಶಿಸಿದ್ದರು. ಆತನನ್ನು ಥಳಿಸಿ, ಕೈಕಾಲು ಕಟ್ಟಿ ಕಛೇರಿಯನ್ನು ದೋಚಿದ್ದರು. ಸರ್ದಾರ್ ಪುರ ಪೊಲೀಸರು ಈ ಪ್ರಕರಣದಲ್ಲಿ ಗ್ಯಾಂಗ್ ಯಾರನ್ನೂ ಬಂಧಿಸಲಿಲ್ಲ, ಆದರೆ ಪವನ್ ಓಡಿಬಂದು ಗೋವಾದಲ್ಲಿ ಆಶ್ರಯ ಪಡೆದಿದ್ದ.

ಈತನಿಗಾಗಿ ಹುಡುಕಾಟ ನಡೆಸಿದಾಗ ಸರ್ದಾರ್ ಪುರ ಪೋಲಿಸರಿಗೆ ಗೋವಾದಲ್ಲಿ ಆರೋಪಿಯು  ಕ್ಯಾಸಿನೋದಲ್ಲಿ ಜೂಜಾಡಲು ಹೋಗುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಈ ಮಾಹಿತಿಯನ್ನಾಧರಿಸಿ ಗೋವಾ ಪೋಲಿಸರ ಸಹಕಾರದೊಂದಿಗೆ ಗೋವಾದಲ್ಲಿ ಕಾರ್ಯಾಚರಣೆ ನಡೆಸಿ ಶಂಕಿತ ಆರೋಪಿಯನ್ನು ಬಂಧಿಸುವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಸರ್ದಾರಪುರ ಪೋಲಿಸರು ವಶಕ್ಕೆ ಪಡೆದಿದ್ದಾರೆ ಎಂದು ಗೋವಾ ಪೋಲಿಸರು ಮಾಹಿತಿ ನೀಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next