Advertisement

ಕಾನೂನುಗಳಂತೆ ವಕೀಲರೂ ಕ್ರಿಯಾಶೀಲರಾಗಲಿ

10:21 AM Feb 16, 2019 | Team Udayavani |

ಹರಿಹರ: ಕಾನೂನು ನಿಂತ ನೀರಲ್ಲ. ಪ್ರತಿಕ್ಷಣ ಬದಲಾಗುವ, ಬೆಳವಣಿಗೆ ಹೊಂದುವ ಕ್ರಿಯಾತ್ಮಕ ವಿಷಯವಾಗಿದ್ದು, ವಕೀಲರೂ ಸಹ ಕ್ರಿಯಾಶೀಲರಾಗಬೇಕು ಎಂದು ರಾಜ್ಯ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಎಚ್‌.ಬಿಲ್ಲಪ್ಪ ಹೇಳಿದರು.

Advertisement

ರಾಜ್ಯ ವಕೀಲರ ಪರಿಷತ್‌, ತಾಲೂಕು ವಕೀಲರ ಸಂಘ ಹಾಗೂ ಕಾನೂನು ಸೇವಾ ಸಮಿತಿ ಆಶ್ರಯದಲ್ಲಿ ನಗರದ ನ್ಯಾಯಾಲಯ ಸಂಕೀರ್ಣದಲ್ಲಿ ಆಯೋಜಿಸಿರುವ 3 ದಿನಗಳ ಕಾನೂನು ಕಾರ್ಯಾಗಾರಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಅವರು, ವಕೀಲರು ಕ್ರಿಯಾಶೀಲರಾಗಲು ಇಂತಹ ಕಾರ್ಯಾಗಾರ, ಉಪನ್ಯಾಸ ಮಾಲಿಕೆ ಅಗತ್ಯ ಎಂದರು. 

ರಾಜ್ಯಾದ್ಯಂತ ಆಯಾ ವಕೀಲರ ಸಂಘಗಳು ಕನಿಷ್ಟ ಎರಡು ತಿಂಗಳಿಗೊಮ್ಮೆಯಾದರೂ ಕಾರ್ಯಾಗಾರ ಆಯೋಜಿಸಬೇಕು. ವಕೀಲರ ಸಂಘ ಕ್ರಿಯಾಶೀಲವಾದರೆ ಗುಣಾತ್ಮಕ ವಕೀಲರ ಸಂಖ್ಯೆ ವೃದ್ಧಿಸುತ್ತದೆ. ಗುಣಾತ್ಮಕ ವಕೀಲರು ಕಕ್ಷಿದಾರರಿಗೆ ನ್ಯಾಯ ಕೊಡಿಸುವುದಲ್ಲದೆ
ಸಮಾಜಕ್ಕೂ ಕೊಡುಗೆ ನೀಡಬಲ್ಲರು ಎಂದರು. 

ಪರೀಕ್ಷೆಗಳಿಗೆ ತರಬೇತಿ: ರಾಜ್ಯ ವಕೀಲರ ಪರಿಷತ್‌ ಅಧ್ಯಕ್ಷ ಕೆ.ಬಿ. ನಾಯಕ್‌ ಮಾತನಾಡಿ, ರಾಜ್ಯಾದ್ಯಂತ ಸ್ಥಳೀಯ ವಕೀಲರ ಸಂಘಗಳಿಗೆ ನಿಯಮಿತವಾಗಿ ಕಾನೂನು ಉಪನ್ಯಾಸ ಮಾಲಿಕೆ ಆಯೋಜಿಸಲು ಕೋರಲಾಗಿದೆ. ಇದಲ್ಲದೆ ರಾಜ್ಯದ ಮೂರ್‍ನಾಲ್ಕು ಕಡೆ ವಕೀಲರ ಪರಿಷತ್‌
ನಿಂದ ನ್ಯಾಯಾಧೀಶರ, ಸರ್ಕಾರಿ ಅಭಿಯೋಜಕರ ಹುದ್ದೆಗಳಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಆಯೋಜಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಅಕ್ಟೋಬರ್‌ನಲ್ಲಿ ಸಮ್ಮೇಳನ: ರಾಜ್ಯ ವಕೀಲರ ಪರಿಷತ್‌ ಉಪಾಧ್ಯಕ್ಷ ಬಿ.ವಿ. ಶ್ರೀನಿವಾಸ್‌ ಮಾತನಾಡಿ, ವಕೀಲರ ಪರಿಷತ್‌ ಕಾರ್ಯ ವಿಧಾನಗಳನ್ನು ಡಿಜಿಟಲೀಕರಣಗೊಳಿಸುತ್ತಿದ್ದು, ಸದ್ಯದಲ್ಲೇ ಕಾಗದ ರಹಿತವಾಗಲಿದೆ. ಕ್ಷೇಮಾಭಿವೃದ್ಧಿ ನಿ ಧಿಯ ಮೊತ್ತವನ್ನು 8ರಿಂದ 10 ಲಕ್ಷಕ್ಕೆ ಹೆಚ್ಚಿಸಲಾಗುವುದು. ಅಕ್ಟೋಬರ್‌ ತಿಂಗಳಲ್ಲಿ ರಾಜ್ಯ ವಕೀಲರ ಸಮ್ಮೇಳನ ಆಯೋಜಿಸಲು ನಿರ್ಣಯಿಸಲಾಗಿದೆ ಎಂದರು. 

Advertisement

ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ನಾಗರಾಜ್‌ ಹಲವಾಗಲು ಮಾತನಾಡಿ, ಕಲಿಕೆ ನಿರಂತರವಾಗಿದ್ದು, ಸತತ ಅಧ್ಯಯನಶೀಲರಾದಾಗ ಮಾತ್ರ ವೃತ್ತಿಯಲ್ಲಿ ಪ್ರಬುದ್ಧರಾಗಲು ಸಾಧ್ಯ. ನಿರಂತರ ಶ್ರಮ ಹಾಗೂ ಕಠಿಣ ಅಭ್ಯಾಸದಿಂದ ಮಾತ್ರ ಉತ್ತಮ ವಕೀಲರಾಗಿ ರೂಪಗೊಳ್ಳಲು ಸಾಧ್ಯ ಎಂದರು.

ನ್ಯಾಯಾಧಿಧೀಶರಾದ ಸುಮಲತಾ ಬಿ., ಅವಿನಾಶ್‌ ಚಿಂದು ಎಚ್‌., ವಕೀಲರ ಸಂಘದ ಉಪಾಧ್ಯಕ್ಷೆ ಶುಭ ಕೆ.ಎಸ್‌., ಕಾರ್ಯದರ್ಶಿ ಎಚ್‌. ಎಚ್‌.ಲಿಂಗರಾಜ್‌, ಸಹ ಕಾರ್ಯದರ್ಶಿ ರಮೇಶ್‌ ಜಿ.ಬಿ., ಹಿರಿಯ ವಕೀಲರಾದ ಬಿ.ಹಾಲಪ್ಪ, ಕಿತ್ತೂರು ಶೇಖ್‌ ಇಬ್ರಾಹಿಂ, ಎಂ.ನಾಗೇಂದ್ರಪ್ಪ, ಶ್ರೀನಿವಾಸ್‌ ಕಲಾಲ್‌, ಅಪರ ಸರ್ಕಾರಿ ವಕೀಲ ಕೆ.ಚೆನ್ನಪ್ಪ ಮತ್ತಿತರರಿದ್ದರು. 

ವಿಚಾರ ಗೋಷ್ಠಿ: ಗೋಷ್ಠಿಯಲ್ಲಿ ಭಾರತೀಯ ಸಾಕ್ಷ್ಯ ಅಧಿ ನಿಯಮದ ಸಾಬೀತಿನ ಹೊಣೆ ವಿಷಯ ಕುರಿತು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಬಿಲ್ಲಪ್ಪ, ಪಾಟಿಸವಾಲು ಕಲೆ ಕುರಿತು ಹಿರಿಯ ವಕೀಲ ರಾಮಚಂದ್ರ ಕಲಾಲ್‌ ಮತ್ತು ಹಿಂದೂ ಉತ್ತರಾ ಧಿತ್ವ ಮತ್ತು ಪಾಲು ವಿಭಾಗ ವಿಷಯ ಕುರಿತು 1ನೇ ಹೆಚ್ಚುವರಿ ಸಿವಿಲ್‌ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶೆ ಸುಮಲತಾ ಬಿ. ವಿಷಯ ಮಂಡಿಸಿ, ಸಂವಾದ ನಡೆಸಿದರು. 

Advertisement

Udayavani is now on Telegram. Click here to join our channel and stay updated with the latest news.

Next