ಉಡುಪಿ: ಸರಕಾರ ಮತ್ತು ಪೊಲೀಸ್ ಇಲಾಖೆ ರಸ್ತೆ ಸುರಕ್ಷತಾ ನಿಯಮಗಳನ್ನು ಕಾರ್ಯರೂಪಕ್ಕೆ ಅಳವಡಿಸಿದರೂ ಜನರು ಸ್ವಯಂಪ್ರೇರಿತರಾಗಿ ಆ ನಿಯಮಗಳನ್ನು ಪಾಲಿಸಿದಾಗ ಮಾತ್ರ ಸಂಪೂರ್ಣ ಯಶಸ್ಸು ಸಾಧ್ಯ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ಹೇಳಿದರು.
ಶುಕ್ರವಾರ ಮಣಿಪಾಲ ಡಾಣ ಟಿ.ಎಂ.ಎ ಪೈ ಪಾಲಿಟೆಕ್ನಿಕ್‌ನಲ್ಲಿ ಕಾಲೇಜು ಹಾಗು ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ನಗರಸಭೆ, ರೋಟರಿ ಕ್ಲಬ್ ಉಡುಪಿ ರಾಯಲ…, ರೋಟರಿ ಕ್ಲಬ… ಉಡುಪಿ ಮಣಿಪಾಲ, ಈಶ್ವರನಗರ ರೆಸಿಡೆನ್ಸಿಯಲ್ ವೆಲ್‌ಫೇರ್ ಅಸೋಸಿಯೇಷನ್, ವಾರ್ಡ್ ಸಮಿತಿ ಈಶ್ವರ ನಗರ, ಉಡುಪಿ ತಾಲೂಕು ಸಹಕಾರ ಭಾರತಿ, ಸ್ನೇಹಸಂಗಮ ಈಶ್ವರನಗರ, ಕಾಲೇಜಿನ ರೋಟರ್ಯಾಕ್ಟ್ ಕ್ಲಬ… ಜಂಟಿ ಆಶ್ರಯದಲ್ಲಿ ಆಯೋಜಿಸಿದ ಪರಿಸರ ಮತ್ತು ಜಲ ಸಂರಕ್ಷಣೆ, ರಸ್ತೆ ಸುರಕ್ಷತೆ, ಮಾದಕ ದ್ರವ್ಯಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಪೌರಾಯುಕ್ತ ಡಾ. ಆನಂದ್ ಲ್ಲೋಳಿಕರ್ ಉಪಸ್ಥಿತರಿದ್ದರು.
ಉಡುಪಿ ವೃತ್ತ ನಿರೀಕ್ಷಕ ಮಂಜುನಾಥ್, ಮಣಿಪಾಲ ಎಂ.ಐ.ಟಿ.ಯ ಪ್ರಾಧ್ಯಾಪಕ ಡಾ. ಬಾಲಕೃಷ್ಣ ಮಧ್ದೋಡಿ ಕಾರ್ಯಗಾರ ನಡೆಸಿದರು.ರಾಯಲ್ ಅಧ್ಯಕ್ಷ ಯಶವಂತ್ ಬಿ. ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾಲೇಜಿನ ಶೈಕ್ಷಣಿಕ ಸಂಯೋಜಕ ಟಿ. ರಂಗ ಪೈ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಟಿ. ನರೇಂದ್ರ ಪೈ, ಉಪ ಪ್ರಾಂಶುಪಾಲ ಪ್ರಶಾಂತ್ ಶೆಟ್ಟಿ, ರೋಟರಿ ಸಹಾಯಕ ಗವರ್ನರ್ ಡಾ.ಸೇಸಪ್ಪ ರೈ, ವಿವಿಧ ಸಂಘಟನೆಗಳ ಪ್ರಮುಖರಾದ ಡಾ. ಯಜ್ಞೆàಶ್ ಶರ್ಮ, ರಾಜವರ್ಮ ಅರಿಗ, ಹರೀಶ್ ಜಿ. ಕಲ್ಮಾಡಿ, ರತ್ನಾಕರ್ ಇಂದ್ರಾಳಿ, ಮಾಯಾ ಕಾಮತ್, ದಿವ್ಯ, ಜ್ಯೋತಿ ಕೃಷ್ಣ ಮೂರ್ತಿ ಮಣಿಪಾಲ ವೃತ್ತ ನಿರೀಕ್ಷಕ ಸಂಪತ್ ಕುಮಾರ್, ಬೀಟ್ ಸಿಬ್ಬಂದಿ ಶುಭ, ಮಾಹೆಯ ಹಿರಿಯ ಅಧಿಕಾರಿ ಕೆ.ಎಸ್. ಜೈವಿಠಲ್, ಧರಣೇಶ್, ಸುಧಾಕರ್ ನಾಯ್ಕ, ಸಂಧ್ಯಾ, ಪ್ರಿಯಾ, ಸತೀಶ್ ಎನ್. ಉಪಸ್ಥಿತರಿದ್ದರು.ಶಿಕ್ಷಕ ಕುಮಾರಸ್ವಾಮಿ ಸಂಯೋಜಿಸಿದರು. ನಗರಸಭಾ ಸದಸ್ಯ ಮಂಜುನಾಥ್ ಮಣಿಪಾಲ ನಿರೂಪಿಸಿದರು. ಸಹಕಾರ ಭಾರತಿ ಅಧ್ಯಕ್ಷ ದಿನೇಶ್ ಹೆಗ್ಡೆ ಅತ್ರಾಡಿ ವಂದಿಸಿದರು.