ಕಡೂರು: ವಕೀಲರ ಮೇಲೆ ದೌರ್ಜನ್ಯಮತ್ತು ಹಲ್ಲೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ವಕೀಲರನ್ನು ರಕ್ಷಿಸುವ ಕಾನೂನು ಜಾರಿಗೊಳಿಸಬೇಕೆಂದು ಒತ್ತಾಯಿಸಿ ಪಟ್ಟಣದಲ್ಲಿ ವಕೀಲರು ಧರಣಿ ಆರಂಭಿಸಿದರು.
ಪಟ್ಟಣದ ನ್ಯಾಯಾಲಯದ ಮುಂಭಾಗದಲ್ಲಿ ಬುಧವಾರ ವಕೀಲರ ಸಂಘದ ನೂರಾರು ವಕೀಲರು ಸೇರಿ ಹಲ್ಲೆ ಮತ್ತು ಹತ್ಯೆ ಖಂಡಿಸಿ ಕೋವಿಡ್ -19ರ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಧರಣಿ ಆರಂಭಿಸಿದರು.
ಈ ಸಂದರ್ಭದಲ್ಲಿ ಹಿರಿಯ ವಕೀಲರು ಮಾತನಾಡಿ, ದೇಶದಲ್ಲಿ ನ್ಯಾಯದ ಪರವಾಗಿ ವಾದ ಮಾಡಿ, ತಮ್ಮ ಕಕ್ಷಿದಾರರಿಗೆ ನ್ಯಾಯ ದೊರಕಿಸುವ ಮೂಲಕ ಹೋರಾಟ ನಡೆಸುತ್ತಿರುವ ವಕೀಲರ ಮೇಲೆ ಹಲ್ಲೆಗಳು ನಡೆಯುತ್ತಿರುವುದು ಖಂಡನೀಯ ಎಂದರು.
ತೆಲಂಗಾಣ ರಾಜ್ಯದಲ್ಲಿ ವಕೀಲರಾದ ಗತ್ತು ವಾಮನ್‌ರಾವ್ ಮತ್ತು ಪಿ.ವಿ. ನಾಗಮಣಿ ಅವರ ಹತ್ಯೆ ಮತ್ತುರಾಜ್ಯದ ವಿವಿಧೆಡೆ ವಕೀಲರ ಮೇಲಿನ ಹಲ್ಲೆಯನ್ನು ವಕೀಲರ ಸಮುದಾಯ ಸಾಮೂಹಿಕವಾಗಿ ಖಂಡಿಸುತ್ತದೆ. ಜೊತೆಗೆ ಪೊಲೀಸರು ಆರೋಪಿಗಳನ್ನು ಕೂಡಲೇಬಂಧಿಸಿ ಕಾನೂನು ರೀತಿಯಲ್ಲಿ ಅವರಿಗೆ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದರು. ವೈದ್ಯರ ಮೇಲೆ ಹಲ್ಲೆ ನಡೆದರೆ ಕಾನೂನಿನಲ್ಲಿ ಕೂಡಲೇ ಶಿಕ್ಷೆಗೆ ಅವಕಾಶವಿದೆ. ಅದೇ ರೀತಿ ವಕೀಲರ ಮೇಲೆ ನಡೆಯುವ ಹಲ್ಲೆ, ಹತ್ಯೆ ಮತ್ತು ದೌರ್ಜನ್ಯಗಳಿಗೆನೂತನ ಕಾನೂನು ರಚಿಸಿ ರಕ್ಷಣೆಗೆ ಮುಂದಾಗಬೇಕು ಎಂದು ಕಡೂರು ವಕೀಲರ ಸಂಘ ಆಗ್ರಹಿಸುತ್ತದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಎ.ಎಸ್ .ನರಸಿಂಹ ಭಾರತಿ, ಕಾರ್ಯದರ್ಶಿ ಕೆ.ಎನ್. ರಾಮಸ್ವಾಮಿ, ಉಪಾಧ್ಯಕ್ಷ ಕೆ.ಅನಿಲ್‌ಕುಮಾರ್, ಹಿರಿಯ ವಕೀಲರಾದ ಕೆ.ಎನ್.ರಾಜಣ್ಣ, ತಿಪ್ಪೇಶ್ ಸಿ.ಎಲ್.ದೇವರಾಜ್ ಹರೀಶ್, ಪ್ರಕಾಶ್ ಮತ್ತಿತರರು ಇದ್ದರು.