Advertisement

ಸೆ.23ರಿಂದ ರೋಜರ್‌ ಫೆಡರರ್‌ ವಿದಾಯ ಕೂಟ ಲೇವರ್‌ ಕಪ್‌

09:52 PM Sep 18, 2022 | Team Udayavani |

ಲಂಡನ್‌: ಟೆನಿಸ್‌ ದಂತಕಥೆ ರೋಜರ್‌ ಫೆಡರರ್‌ ಪಾಲಿನ ವಿದಾಯ ಪಂದ್ಯಾವಳಿಯಾಗಿರುವ ಲೇವರ್‌ ಕಪ್‌ಗೆ ಇಬ್ಬರು ಮೀಸಲು ಆಟಗಾರರನ್ನು ಸೇರಿಸಿಕೊಳ್ಳಲಾಗಿದೆ.

Advertisement

ಟೀಮ್‌ ಯೂರೋಪ್‌ಗೆ ಮ್ಯಾಟಿಯೊ ಬೆರೆಟಿನಿ, ಟೀಮ್‌ ವರ್ಲ್ಡ್’ಗೆ ಟಾಮಿ ಪೌಲ್‌ ಸೇರ್ಪಡೆಗೊಂಡಿದ್ದಾರೆ. ಟೀಮ್‌ ಯೂರೋಪ್‌ ತಂಡವನ್ನು ಬೋರ್ಗ್‌ ಮುನ್ನಡೆಸಲಿದ್ದಾರೆ. ಥಾಮಸ್‌ ಎನ್‌ಕ್ವಿಸ್ಟ್‌ ಉಪನಾಯಕ. ಇಲ್ಲಿನ ಆಟಗಾರರೆಂದರೆ ನೊವಾಕ್‌ ಜೊಕೊವಿಚ್‌, ರಫಾಯೆಲ್‌ ನಡಾಲ್‌, ಸ್ಟೆಫಾನಸ್‌ ಸಿಸಿಪಸ್‌, ಕ್ಯಾಸ್ಪರ್‌ ರೂಡ್‌, ರೋಜರ್‌ ಫೆಡರರ್‌ ಮತ್ತು ಆ್ಯಂಡಿ ಮರ್ರೆ.

ಟೀಮ್‌ ವರ್ಲ್ಡ್ ನಾಯಕ ಜಾನ್‌ ಮೆಕೆನ್ರೊ. ಉಪನಾಯಕ ಪ್ಯಾಟ್ರಿಕ್‌ ಮೆಕೆನ್ರೊ. ಉಳಿದವರೆಂದರೆ ಫೆಲಿಕ್ಸ್‌ ಆಗರ್‌ ಅಲಿಯಾಸಿಮ್‌, ಟೇಲರ್‌ ಫ್ರಿಟ್ಜ್, ಡಿಯೆಗೊ ಶಾರ್ಟ್ಸ್ ಮನ್‌, ಅಲೆಕ್ಸ್‌ ಡಿ ಮಿನೌರ್‌, ಫ್ರಾನ್ಸೆಸ್‌ ಥಿಯಾಫೊ ಮತ್ತು ಜಾಕ್‌ ಸಾಕ್‌. ತಂಡದಲ್ಲಿ ಯಾರಾದರೂ ಗಾಯಾಳಾಗಿ ಹೊರಗುಳಿಯುವ ಸಂದರ್ಭ ಎದುರಾದರಷ್ಟೇ ಮ್ಯಾಟಿಯೊ ಬೆರೆಟಿನಿ ಮತ್ತು ಟಾಮಿ ಪೌಲ್‌ ಆಡಲಿಳಿಯುವರು. ಲೇವರ್‌ ಕಪ್‌ ಪಂದ್ಯಾವಳಿ ಸೆ. 23ರಿಂದ 25ರ ತನಕ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next