Advertisement

ಲಾವಾದಿಂದ ಅಗ್ಗದ ದರದ ಹೊಸ ಫೋನ್‍ ಬಿಡುಗಡೆ: ಬೆಲೆ ಎಷ್ಟು ಗೊತ್ತಾ?

09:08 PM Nov 25, 2022 | Team Udayavani |

ನವದೆಹಲಿ: ಭಾರತದ ಸ್ವದೇಶಿ ಮೊಬೈಲ್‍ ಬ್ರಾಂಡ್‍ ʻಲಾವಾ ಇಂಟರ್‌ನ್ಯಾಷನಲ್ ಲಿಮಿಟೆಡ್ʼ, ಇಂದು ʻಬ್ಲೇಜ್ ಎನ್ಎಕ್ಸ್‌ಟಿʼ ಸ್ಮಾರ್ಟ್ ಫೋನ್‍ ಅನ್ನು ಬಿಡುಗಡೆ ಮಾಡಿದೆ.

Advertisement

ಇದರ ಬೆಲೆ, 9,299 ರೂ.ಗಳಾಗಿದ್ದು, ವರ್ಷದ ಆರಂಭದಲ್ಲಿ ಬಿಡುಗಡೆಯಾದ ಮೂಲ ʻಬ್ಲೇಜ್ʼ ಸರಣಿಯ ಹೊಸ ಮಾದರಿ ಇದಾಗಿದೆ.

ʻಬ್ಲೇಜ್ ಎನ್ಎಕ್ಸ್‌ಟಿʼ ಸ್ಮಾರ್ಟ್‌ಫೋನ್‌, 16.55 ಸೆಂ.ಮೀ (6.5 ಇಂಚು) ಡಿಸ್‌ಪ್ಲೇ, ಆಕ್ಟಾ-ಕೋರ್ ʻಮೀಡಿಯಾಟೆಕ್ ಹೆಲಿಯೋ ಜಿ37ʼ ಪ್ರೊಸೆಸರ್‍, ಹೊಂದಿದೆ. ಇದು 4GB RAM ಒಳಗೊಂಡಿದ್ದು, ಹೆಚ್ಚುವರಿಯಾಗಿ 3GB ವಿಸ್ತರಣೆಗೆ ಅವಕಾಶವಿದೆ. ಇದರಿಂದ ಬಳಕೆದಾರರಿಗೆ ಮಲ್ಟಿ-ಟಾಸ್ಕಿಂಗ್ ಅನ್ನು ತಡೆರಹಿತವಾಗಿ ನಿರ್ವಹಿಸಲು ಅನುವಾಗಲಿದೆ. 64GB ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ.

13 ಮೆಗಾಪಿಕ್ಸೆಲ್ ಎಐ ಟ್ರಿಪಲ್ ರಿಯರ್ ಕ್ಯಾಮೆರಾ ಮತ್ತು ಸೆಲ್ಫಿಗಾಗಿ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ. ʻಟೈಮ್ ಲ್ಯಾಪ್ಸ್ʼ, ʻಸ್ಲೋ ಮೋಷನ್ʼ ವೀಡಿಯೊಗಳು, ʻಜಿಫ್‌ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ʻಬ್ಯೂಟಿ ಮೋಡ್ʼ ವೈಶಿಷ್ಟ್ಯಗಳಾದ ʻಸ್ಮೂಥನಿಂಗ್, ʻಸ್ಲಿಮ್ಮಿಂಗ್, ʻವೈಟೆನಿಂಗ್ʼ ಮತ್ತು ʻಐ ಎನ್‌ಲಾರ್ಜರ್‌ʼ ಮುಂತಾದವನ್ನು ಒಳಗೊಂಡಿದೆ.

ಮಾರಾಟ ನಂತರ ಅತ್ಯುತ್ತಮ ಗ್ರಾಹಕ ಸೇವೆ ನೀಡುವ ಸಲುವಾಗಿ, ‘ಮನೆಯಲ್ಲೇ ಉಚಿತ ಸೇವೆ’ಯನ್ನು ಸಹ ಲಾವಾ ಒದಗಿಸಲಿದೆ. ಇದರಲ್ಲಿ ಗ್ರಾಹಕರು ವಾರಂಟಿ ಅವಧಿಯಲ್ಲಿ ತಮ್ಮ ಮನೆ ಬಾಗಿಲಲ್ಲೇ ಸರ್ವೀಸ್‍ ಪಡೆಯಬಹುದು.

Advertisement

ಈ ಸ್ಮಾರ್ಟ್‌ಫೋನ್‌ 5000mAh ಬ್ಯಾಟರಿಯನ್ನು ಹೊಂದಿದೆ. ಗ್ಲಾಸ್ ಬ್ಯಾಕ್ ಮತ್ತು ಹಿಂಬದಿಯ ಫಿಂಗರ್‌ಪ್ರಿಂಟ್‌ ಸೆನ್ಸರ್ ‍ಹೊಂದಿದೆ. ಅನಾಮಧೇಯ ಕರೆ ರೆಕಾರ್ಡಿಂಗ್ ಮಾಡುತ್ತದೆ.

ಇಂದಿನಿಂದ ʻಲಾವಾʼದ ರಿಟೇಲ್ ಜಾಲದಲ್ಲಿ ʻಬ್ಲೇಜ್ ಎನ್ಎಕ್ಸ್‌ಟಿʼ ಲಭ್ಯವಿರುತ್ತದೆ. ಈ ಸ್ಮಾರ್ಟ್‌ಫೋನ್‍ 2022ರ ಡಿ. 2 ರಂದು Amazon.in ಮತ್ತು ʻಲಾವಾʼದ ಇ-ಸ್ಟೋರ್‌ನಲ್ಲಿ ಖರೀದಿಗೆ ಲಭ್ಯವಾಗಲಿದೆ.

ಇದನ್ನೂ ಓದಿ : ಸೂಪರ್‌ ಪವರ್‌ ರ್‍ಯಾಂಕಿಂಗ್‌ ವ್ಯವಸ್ಥೆಯಲ್ಲಿ ಭಾರತಕ್ಕೆ ನಂಬಿಕೆ ಇಲ್ಲ: ರಕ್ಷಣಾ ಸಚಿವ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next