Advertisement

ಸೌರವ್ಯೂಹದ ಮೊದಲ ಅತಿಥಿ ಬಾಹ್ಯಾಕಾಶ ನೌಕೆ?

04:00 PM Nov 07, 2018 | |

ವಾಷಿಂಗ್ಟನ್‌: ನಮ್ಮ ಸೌರವ್ಯೂಹದಲ್ಲಿ ಮೊದಲ ಅಂತರನಕ್ಷತ್ರೀಯ ವಸ್ತುವಾಗಿ ಕೃತಕ ಬೆಳಕಿನ ಹಾಯಿಯೊಂದು ಪ್ರವೇಶಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಸೌರವ್ಯೂಹದಲ್ಲಿ ಜೀವದ ಅಸ್ತಿತ್ವವನ್ನು ಕಂಡುಕೊಳ್ಳಲು ಔಮುವಾಮುವಾ ಎಂಬ ಅಂತರ ನಕ್ಷತ್ರೀಯ ವಸ್ತು ಮಹತ್ವದ್ದಾಗಿದೆ ಎಂದು ಹಾರ್ವರ್ಡ್‌ ಸ್ಮಿತ್‌ಸೋನಿ ಯನ ಸೆಂಟರ್‌ನ ಬಾಹ್ಯಾ ಕಾಶ ವಿಜ್ಞಾನಿಗಳು ಅಧ್ಯಯನ ನಡೆಸಿದ್ದಾರೆ. ಕಳೆದ ವರ್ಷ ಒಳ ಸೌರ ವ್ಯವಸ್ಥೆಯಲ್ಲಿ ಒಂದು ಕಲ್ಲು ಸಾಗುವಾಗ ಅನಿರೀಕ್ಷಿತ ವೇಗ ವರ್ಧನೆ ಕಂಡಿತ್ತು. ಈ ವಸ್ತುವು ಧೂಮಕೇತು ಮತ್ತು ಕುಬjಗ್ರಹಗಳ ಅಂಶವನ್ನು ಹೊಂದಿತ್ತು. ಕೃತಕ ಮೂಲದಿಂದ ಬೆಳಕಿನ ಹಾಯಿ ಇರುವುದೇ ಈ ವೇಗ ಹಠಾತ್‌ ವರ್ಧನೆಗೆ ಕಾರಣ ಎಂದು ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ.

Advertisement

ಹೀಗಾಗಿ  ಔಮುವಾಮುವಾ ಎಂಬ ಅಂತರ ನಕ್ಷತ್ರೀಯ ವಸ್ತು ಸುಧಾರಿತ ತಾಂತ್ರಿಕ ವಸ್ತು ವಾಗಿದ್ದು, ಅಂತರ ನಕ್ಷತ್ರೀಯ ವಲಯ ದಲ್ಲಿ ಹಾರಾಡುತ್ತಿದೆ. ಈ ಕ್ಷುದ್ರವಸ್ತು ವನ್ನು ಮೊದಲು ಕಳೆದ ವರ್ಷ ಅಕ್ಟೋಬರ್‌ 19ರಂದು ಹಲೆಯಕಲಾ ಅಬ್ಸರ್ವೇಟರಿ ಯಲ್ಲಿ ಕಂಡುಕೊಳ್ಳಲಾಗಿತ್ತು. ವಿಶಿಷ್ಟ ಸಿಗರೇಟ್‌ ಆಕೃತಿಯ ಈ ವಸ್ತುವು ವಿಶಿಷ್ಟ ವರ್ತನೆಯನ್ನುಹೊಂದಿದೆ. ಹೀಗಾಗಿ ಇದನ್ನು ಅನ್ಯಗ್ರಹ ವಸ್ತು ಎಂದು ಭಾವಿಸಲಾಗಿದೆ. 

ಆದರೆ ಇದು ಕ್ಷುದ್ರಗ್ರಹವೇ ಅಥವಾ ಧೂಮಕೇತುವೇ ಎಂಬುದಾಗಿ ವಿಜ್ಞಾನಿಗಳ ವಲಯದಲ್ಲಿ ಕಾವೇರಿದ ಚರ್ಚೆನಡೆಯುತ್ತಿರುವ ಮಧ್ಯೆಯೇ ಈ ಹೊಸದೊಂದು ಆಯಾಮ ಲಭ್ಯವಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next