Advertisement

ಪೈಲ್ವಾನರ ಜೋಡಿ ಕಟ್ಟುವ ಕಾರ್ಯಕ್ಕೆ ಚಾಲನೆ

11:11 PM Sep 22, 2019 | Lakshmi GovindaRaju |

ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ನಡೆಯುವ ನಾಡ ಕುಸ್ತಿ ಪಂದ್ಯಾವಳಿಗೆ ಪೈಲ್ವಾನರ ಜೋಡಿ ಕಟ್ಟುವ ಕಾರ್ಯಕ್ಕೆ ಭಾನುವಾರ ಚಾಲನೆ ದೊರೆಯಿತು. ನಗರದ ವಸ್ತು ಪ್ರದರ್ಶನ ಆವರಣದಲ್ಲಿರುವ ಬಿ.ವಿ.ಕಾರಂತ ರಂಗಮಂದಿರದಲ್ಲಿ ನಡೆದ ಜೋಡಿ ಕಟ್ಟುವ ಕಾರ್ಯದಲ್ಲಿ ರಾಜ್ಯದ ವಿವಿಧ ಭಾಗಗಳಿಂದ 400ಕ್ಕೂ ಹೆಚ್ಚು ಪೈಲ್ವಾನರು ಭಾಗವಹಿಸಿದ್ದರು.

Advertisement

ಮೊದಲ ದಿನವಾದ ಭಾನುವಾರ ವಯೋಮಿತಿ ಮತ್ತು ತೂಕದ ಆಧಾರದ ಮೇಲೆ 120 ಜೋಡಿ ಪೈಲ್ವಾನರ ಜೋಡಿ ಕಟ್ಟಲಾಯಿತು. ಸುಮಾರು 200 ಜೋಡಿಗಳು ನಾಡ ಕುಸ್ತಿಯಲ್ಲಿ ಭಾಗವಹಿಸಲಿದ್ದು, ಉದ್ಘಾಟನೆ ಸಮಾರಂಭಕ್ಕೆ ಉತ್ತಮ 25 ಜೋಡಿಗಳನ್ನು ಆಯ್ಕೆ ಮಾಡಲು ಚಿಂತನೆ ನಡೆದಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ನೇತ್ರ ತಪಾಸಣಾ ಶಿಬಿರ: ಈ ಮಧ್ಯೆ, ದಸರಾ ಮಹೋತ್ಸವ ಅಂಗವಾಗಿ ಗಜಪಡೆಯೊಂದಿಗೆ ಅರಮನೆ ಆವರಣದಲ್ಲಿ ಬೀಡು ಬಿಟ್ಟಿರುವ ಮಾವುತರು, ಕಾವಾಡಿಗಳ ಕುಟುಂಬದ ಸದಸ್ಯರಿಗಾಗಿ ಭಾನುವಾರ ಉಚಿತವಾಗಿ ದಂತ ಹಾಗೂ ನೇತ್ರ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ ನಡೆಯಿತು.

ಅನಿ ಫೌಂಡೇಷನ್‌ನ ವೈದ್ಯರಾದ ಡಾ.ಅನುಶ್ರೀ, ಡಾ.ನಿಸರ್ಗ, ಮಾವುತರು, ಕಾವಾಡಿಗಳು ಹಾಗೂ ಕುಟುಂಬದ ಸದಸ್ಯರಿಗೆ ದಂತ ತಪಾಸಣೆ ನಡೆಸಿ, ಅಗತ್ಯ ಉಳ್ಳವರಿಗೆ ಚಿಕಿತ್ಸೆ ನೀಡಿದರು. 60ಕ್ಕೂ ಹೆಚ್ಚು ಮಂದಿಗೆ ತಪಾಸಣೆ ಮಾಡಿ, ಎಲ್ಲರಿಗೂ ಉಚಿತವಾಗಿ ಟೂತ್‌ ಪೇಸ್ಟ್‌ ಹಾಗೂ ಬ್ರಶ್‌ ನೀಡಿದರು. ಪ್ರತಿದಿನ ಎರಡು ಬಾರಿ ಹಲ್ಲು ಉಜ್ಜುವ ವಿಧಾನವನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next