Advertisement

HP ಯಿಂದ ಪೆವಿಲಿಯನ್ ಏರೋ 13 ಲ್ಯಾಪ್ ಟಾಪ್ ಗಳ ಬಿಡುಗಡೆ

02:20 PM Mar 22, 2023 | Team Udayavani |

ಬೆಂಗಳೂರು: ಎಚ್ ಪಿ ಕಂಪೆನಿಯು ಭಾರತದಲ್ಲಿ ತನ್ನ ಹೊಸ ಪೆವಿಲಿಯನ್ ಏರೋ 13 ನೋಟ್‌ಬುಕ್‌ಗಳನ್ನು ಬಿಡುಗಡೆ ಮಾಡಿದೆ. ಇದು ಶಕ್ತಿಯುತ ಕಾರ್ಯಕ್ಷಮತೆಗಾಗಿ AMD Ryzen

7 ಪ್ರೋಸೆಸರ್ ಮತ್ತು Radeon

ಗ್ರಾಫಿಕ್ಸ್‌ ಒಳಗೊಂಡಿದೆ

Advertisement

ಹೊಸ HP ಪೆವಿಲಿಯನ್ ಏರೋ 13 ಲ್ಯಾಪ್‌ಟಾಪ್ Wi-Fi6 ನೊಂದಿಗೆ ವೇಗದ ಮತ್ತು ವಿಶ್ವಾಸಾರ್ಹ ಸಂಪರ್ಕವನ್ನು ಹೊಂದಿದೆ. 10.5 ಗಂಟೆಗಳವರೆಗೆ ಬ್ಯಾಟರಿ ಬಾಳಿಕೆ ಇದ್ದು, ಯಾವುದೇ ಸ್ಥಳದಿಂದ ಕೆಲಸ, ಬ್ರೌಸಿಂಗ್ ಮತ್ತು ಸ್ಟ್ರೀಮಿಂಗ್ ಮಾಡಲು ಸೂಕ್ತವಾಗಿದೆ.

400 ನಿಟ್ಸ್ ಪ್ರಕಾಶಮಾನವಾದ ಮತ್ತು 16:10 ಆಕಾರ ಅನುಪಾತದ ಪರದೆ ಬಳಕೆದಾರರಿಗೆ ಉತ್ತಮ ವೀಕ್ಷಣೆಯ ಅನುಭವವನ್ನು ನೀಡುತ್ತದೆ. HP ಪೆವಿಲಿಯನ್ ಏರೋ 13 ಕೇವಲ 970 ಗ್ರಾಂ ಭಾರವಿದ್ದು, ಪೇಲ್ ರೋಸ್ ಗೋಲ್ಡ್, ವಾರ್ಮ್ ಗೋಲ್ಡ್ ಮತ್ತು ನ್ಯಾಚುರಲ್ ಸಿಲ್ವರ್ ಬಣ್ಣಗಳಲ್ಲಿ ಲಭ್ಯವಿದೆ.

HP ವಿನ್ಯಾಸಗೊಳಿಸಿದ ಹೊಸ ಪೆವಿಲಿಯನ್ ಏರೋ 13 ಲ್ಯಾಪ್‌ಟಾಪ್ ಪರಿಚಯಿಸಲು ನಾವು ಹೆಮ್ಮೆಪಡುತ್ತೇವೆ. HP ಪೆವಿಲಿಯನ್ ಏರೋ 13 ಆಕರ್ಷಕವಾದ ಪ್ರೀಮಿಯಂ ಲ್ಯಾಪ್ ಟಾಪ್ ಆಗಿದೆ. ಕೆಲಸ ಮತ್ತು ಗೇಮಿಂಗ್ – ಎರಡೂ ವಿಷಯಗಳಲ್ಲಿ ಬಳಕೆದಾರರಿಗೆ ಅಸಾಧಾರಣವಾಗಿ ಆಪ್ತವಾಗುತ್ತದೆ ಎಂದು HP ಇಂಡಿಯಾ ಪರ್ಸನಲ್ ಸಿಸ್ಟಮ್ಸ್ ಹಿರಿಯ ನಿರ್ದೇಶಕ ವಿಕ್ರಮ್ ಬೇಡಿ ತಿಳಿಸಿದ್ದಾರೆ.

ಸುಸ್ಥಿರತೆ ಮತ್ತು ಪರಿಸರ ರಕ್ಷಣೆಗೆ HP ಯ ಬದ್ಧತೆಗೆ ಅನುಗುಣವಾಗಿ HP ಪೆವಿಲಿಯನ್ ಏರೋ 13 ವಿನ್ಯಾಸಗೊಳಿಸಲಾಗಿದೆ. ಗ್ರಾಹಕರು ಬಳಸಿದ ಮರುಬಳಕೆಯ ಮತ್ತು ಸಾಗರದಿಂದ ಸಂಗ್ರಹಿಸಿದ ಪ್ಲಾಸ್ಟಿಕ್‌ನಿಂದ ನಿರ್ಮಿಸಲಾಗಿದೆ. VOC ಹೊರಸೂಸುವಿಕೆ ತಗ್ಗಿಸಲು ನೀರು-ಆಧಾರಿತ ಬಣ್ಣವನ್ನು ಬಳಸಲಾಗಿದೆ.

Advertisement

HP ಪೆವಿಲಿಯನ್ ಏರೋ 13
ಡಿಸ್‌ಪ್ಲೇ

• 16:10 ಆಕಾರ ಅನುಪಾತದೊಂದಿಗೆ HP ಯ ಪ್ರಥಮ ಪೆವಿಲಿಯನ್ ಲ್ಯಾಪ್‌ಟಾಪ್

• ತಡೆರಹಿತ ಬ್ರೌಸಿಂಗ್ ಅನುಭವಕ್ಕಾಗಿ 400 ನಿಟ್‌ಗಳಷ್ಟು ಪ್ರಕಾಶಮಾನ ಡಿಸ್‌ಪ್ಲೇ

• ಫ್ಲಿಕರ್-ರಹಿತ ಪರದೆ

• ವೀಕ್ಷಣೆಯ ಅಡ್ಡಿಗಳನ್ನು ನಿವಾರಿಸಲು 4-ಬದಿ ಕಿರಿದಾದ ಅಂಚಿನ ಡಿಸ್‌ಪ್ಲೇ

• ತೀಕ್ಷ್ಣವಾದ ಚಿತ್ರಗಳು ಮತ್ತು ಪಠ್ಯಕ್ಕಾಗಿ 2.5k ರೆಸಲ್ಯೂಶನ್

• ಬಿಸಿಲಿನಲ್ಲೂ ಬ್ರೌಸಿಂಗ್ ಮಾಡುವುದಕ್ಕಾಗಿ 400 ನಿಟ್ಸ್ ಪ್ರಕಾಶ

• 100% sRGB ಯೊಂದಿಗೆ ವಿಶಾಲ ಕಲರ್ ಪ್ಯಾಲೆಟ್

ಕಾರ್ಯಕ್ಷಮತೆ

• ಸುಗಮ ಕಾರ್ಯಕ್ಷಮತೆಗಾಗಿ AMD Ryzen

7000 ಸರಣಿಯ ಪ್ರೊಸೆಸರ್, Radeon

ಗ್ರಾಫಿಕ್ಸ್

• Wi-Fi 6 ಜೊತೆಗೆ ವಿಶ್ವಾಸಾರ್ಹ ಮತ್ತು ವೇಗದ ಸಂಪರ್ಕ

• ತಡೆರಹಿತ ಕಲಿಕೆ ಮತ್ತು ಕೆಲಸಕ್ಕಾಗಿ 10.5 ಗಂಟೆಗಳ ಬ್ಯಾಟರಿ ಬಾಳಿಕೆ

• ಉತ್ತಮ ವೀಡಿಯೊ ಕರೆಗಳಿಗಾಗಿ AI ನಾಯ್ಸ್ ರಿಮೂವಲ್ ಸೌಕರ್ಯ

• ಕಾರ್ಯಗಳ ಬೇಡಿಕೆಯನ್ನು ನಿರ್ವಹಿಸಲು DDR5 RAM

ವಿನ್ಯಾಸ

• ಕೇವಲ 970 ಗ್ರಾಂ ಭಾರವಿದ್ದು, ಪೋರ್ಟಬಿಲಿಟಿಯನ್ನು ಖಚಿತಪಡಿಸುತ್ತದೆ.

• ಬೆಲೆ ಮತ್ತು ಲಭ್ಯತೆ

• HP Pavilion Aero 13 (Ryzen 5 ಸಹಿತ) INR 72,999/- ಆರಂಭಿಕ ಬೆಲೆಯಲ್ಲಿ ಲಭ್ಯವಿದೆ

• HP Pavilion Aero 13 (Ryzen 7 ಸಹಿತ) 1TB SSD INR 82,999/- ಆರಂಭಿಕ ಬೆಲೆಯಲ್ಲಿ ಲಭ್ಯವಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next