ಹುಂಡೈ ಮೋಟರ್ ತನ್ನ ಹೊಚ್ಚ ಹೊಸ ಲೊನಿಕ್ 5 ಎಲಿಕ್ಟ್ರಿಕ್ ಕಾರನ್ನು ಭಾರತದಲ್ಲಿ ಬಿಡುಗೊಳಿಸುತ್ತಿದೆ. ಡಿ.20ರಿಂದ ಬುಕ್ಕಿಂಗ್ಸ್ ಆರಂಭವಾಗಲಿದೆ.
ಇದು ಕಂಪನಿಯ ಎರಡನೇ ಎಲಿಕ್ಟ್ರಿಕ್ ಕಾರು ಆಗಿದೆ. 58 ಕೆಡಬ್ಲ್ಯೂ ಎಚ್ ಮತ್ತು 72.6 ಕೆಡಬ್ಲ್ಯೂ ಎಚ್ ಬ್ಯಾಟರಿ ಸಾಮರ್ಥಯದಲ್ಲಿ ಎರಡು ನಮೂನೆಯಲ್ಲಿ ಕಾರು ಲಭ್ಯವಾಗಲಿದೆ.
ಕೇವಲ 18 ನಿಮಿಷಗಳಲ್ಲಿ ಶೇ.80ರಷ್ಟು ಬ್ಯಾಟರಿ ಚಾರ್ಚ್ ಆಗುವ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಹೊಂದಿದೆ. ಒಂದು ಬಾರಿ ಪೂರ್ಣವಾಗಿ ಚಾರ್ಜ್ ಮಾಡಿದರೆ ಅಂದಾಜು 385 ಕಿ.ಮೀ. ವರೆಗೆ ಸಂಚರಿಸಬಹುದಾಗಿದೆ. 72.6 ಕೆಡಬ್ಲ್ಯೂ ಎಚ್ ಬ್ಯಾಟರಿಯಲ್ಲಿ ಅಂದಾಜು 480 ಕಿ.ಮೀ. ವರೆಗೆ ಸಂಚರಿಸಬಹುದಾಗಿದೆ. ಕಾರಿನ ಬೆಲೆಯನ್ನು ಕಂಪನಿ ಇನ್ನು ಬಹಿರಂಪಡಿಸಿಲ್ಲ.