Advertisement

“ಅಂಬೇಡ್ಕರ್‌ ಮತ್ತು ಮೋದಿ’ಕೃತಿ ಇಂದು ಬಿಡುಗಡೆ

11:46 AM Sep 16, 2022 | Team Udayavani |

ನವದೆಹಲಿ: ಬ್ಲೂಕ್ರಾಫ್ಟ್ ಡಿಜಿಟಲ್‌ ಪ್ರತಿಷ್ಠಾನವು ಸಂಕಲಿಸಿರುವ “ಅಂಬೇಡ್ಕರ್‌ ಮತ್ತು ಮೋದಿ: ಸುಧಾರಕರ ಚಿಂತನೆಗಳು, ನಿರ್ವಾಹಕರ ಅನುಷ್ಠಾನ’ ಎಂಬ ಕೃತಿಯನ್ನು ಮಾಜಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಶುಕ್ರವಾರ ಬಿಡುಗಡೆ ಮಾಡಲಿದ್ದಾರೆ.

Advertisement

ಸಂವಿಧಾನಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ದೃಷ್ಟಿಕೋನ ಹಾಗೂ ಚಿಂತನೆಗಳನ್ನು ಅನುಷ್ಠಾನಗೊಳಿಸಲು ಪ್ರಧಾನಿ ನರೇಂದ್ರ ಮೋದಿಯವರು ಕೈಗೊಂಡಿರುವ ಕ್ರಮಗಳನ್ನು ಈ ಕೃತಿಯು ಒಳಗೊಂಡಿದೆ.

ಅಂಬೇಡ್ಕರ್‌ ಅವರ ಆಶಯದಂತೆ ನವಭಾರತವು ಹೇಗೆ ಅಭಿವೃದ್ಧಿಯತ್ತ ಪಯಣಿಸುತ್ತಿದೆ ಎಂಬುದನ್ನೂ ಇದರಲ್ಲಿ ವಿವರಿಸಲಾಗಿದೆ. ಖ್ಯಾತ ಸಂಗೀತ ಸಂಯೋಜಕ, ಗೀತ ರಚನೆಕಾರ ಹಾಗೂ ರಾಜ್ಯಸಭಾ ಸದಸ್ಯ ಇಳಯರಾಜ ಅವರು ಈ ಕೃತಿಗೆ ಮುನ್ನುಡಿ ಬರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next