Advertisement

ಚೆನ್ನೈನಲ್ಲಿ ಪ್ರತಿಭಟನೆ, ಲಾಠಿಚಾರ್ಜ್‌ : ಪೊಲೀಸರ ಕ್ರಮಕ್ಕೆ ಭಾರೀ ಆಕ್ಷೇಪ

09:52 AM Feb 17, 2020 | sudhir |

ಹೊಸದಿಲ್ಲಿ/ಚೆನ್ನೈ: ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಶುಕ್ರವಾರ ಕೆಲವು ಸಂಘಟನೆಗಳು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಲಾಠಿ ಪ್ರಹಾರ ನಡೆಸಲಾಗಿದೆ. ಈ ಸಂದರ್ಭದಲ್ಲಿ ನಾಲ್ವರು ಪೊಲೀಸರಿಗೂ ಗಾಯಗಳಾಗಿವೆ. ಪೊಲೀಸರ ಕ್ರಮ ಖಂಡಿಸಿ ತಮಿಳುನಾಡಿನ ಅಲ್ಲಲ್ಲಿ ಶನಿವಾರ ಪ್ರತಿಭಟನೆಗಳು, ನಡೆದಿವೆ.

Advertisement

ಪ್ರತಿಭಟನೆ ನಡೆಯುತ್ತಿದ್ದ ಚೆನ್ನೈನ ವಾಶರ್‌ಮನ್‌ಪೇಟ್‌ ಎಂಬಲ್ಲಿಂದ ಜನರನ್ನು ಬಲವಂತವಾಗಿ ಕರೆದೊಯ್ಯಲು ಮುಂದಾದಾಗ ಪೊಲೀಸರ ಜತೆಗೆ ಶುರುವಾದ ವಾಗ್ವಾದ, ಲಾಠಿ ಪ್ರಹಾರದಲ್ಲಿ ಪರ್ಯಾವಸಾನಗೊಂಡಿದೆ. ಜಂಟಿ ಪೊಲೀಸ್‌ ಆಯುಕ್ತ ಪಿ. ವಿಜಯ ಕುಮಾರಿ ತಲೆಗೆ ಗಾಯಗಳಾಗಿವೆ,

ಇಬ್ಬರು ಮಹಿಳಾ ಪೊಲೀಸ್‌ ಕಾನ್‌ಸ್ಟೆàಬಲ್‌ಗ‌ಳು, ಸಬ್‌-ಇನ್‌ಸ್ಪೆಕ್ಟರ್‌ ಗಾಯಗೊಂಡಿ ದ್ದಾರೆ. ಅವರೆಲ್ಲರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ತೆರವುಗೊಳಿ ಸುವ ಪ್ರಕ್ರಿಯೆ ವಿರೋಧ ಮಾಡಿದ್ದಕ್ಕೆ ಪೊಲೀಸರು ಲಾಠಿ ಪ್ರಹಾರ ಮಾಡಿದ್ದಾರೆ ಎಂಬ ಆರೋಪ ಪ್ರತಿಭಟನಾಕಾರರದ್ದು. ಅನಂತರದ ಬೆಳವಣಿಗೆ ಯಲ್ಲಿ ಪೊಲೀ ಸರು ಹಲವರನ್ನು ವಶಕ್ಕೆ ಪಡೆದಿದ್ದಾರೆ. ಚೆನ್ನೈ ಪೊಲೀಸ್‌ ಆಯುಕ್ತ ವಿಶ್ವನಾಥನ್‌ ಮಾತುಕತೆ ನಡೆಸಿ, ಪರಿಸ್ಥಿತಿ ತಹಬದಿಗೆ ತರುವ ಯತ್ನವನ್ನೂ ಮಾಡಿದ್ದಾರೆ.

ಖಂಡನೆ, ಪ್ರತಿಭಟನೆ: ಪೊಲೀಸರ ಕಾರ್ಯವೈಖರಿ ಖಂಡಿಸಿ ತಮಿಳು ನಾಡಿನಾದ್ಯಂತ ಪ್ರತಿಭಟನೆಗಳು ನಡೆದಿವೆ. ವಿಪಕ್ಷಡಿಎಂಕೆ ಲಾಠಿ ಪ್ರಹಾರ ಪ್ರಶ್ನಾರ್ಹ ಎಂದಿದೆ. ಮದುರೆಯಲ್ಲಿ ಮಾತನಾಡಿದ ಸಿಎಂ ಕೆ.ಪಳನಿ ಸ್ವಾಮಿ ಪ್ರತಿಭಟನಕಾರರ ಹಕ್ಕುಗಳನ್ನು ರಕ್ಷಿಸುವುದು ಸರಕಾರದ ಕರ್ತವ್ಯ.

ಕುಟುಂಬ ದವರು ಮತ್ತು ಮಕ್ಕಳು ನಮ್ಮವರಂತೆಯೇ ಎಂದು ಹೇಳಿದ್ದಾರೆ.
ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್‌ ಮಾತನಾಡಿ ಶಾಂತಿಯುತವಾಗಿ ನಡೆಯು ತ್ತಿದ್ದ ಪ್ರತಿಭಟನೆಯಲ್ಲಿ ಪೊಲೀಸರೇ ಅತಿರೇಕದಿಂದ ಕ್ರಮ ಕೈಗೊಂಡಿದ್ದಾರೆ. ಹೀಗಾಗಿ ಅವರ ಕ್ರಮ ಪ್ರಶ್ನಾರ್ಹ ಎಂದಿದ್ದಾರೆ. ಪೊಲೀಸರು ಶುಕ್ರವಾರದ ಘಟನೆಯ ಬಗ್ಗೆ ದಾಖಲಿಸಿರುವ ಪ್ರಕರಣ ಹಿಂಪಡೆಯುವಂತೆ ಒತ್ತಾಯಿ ಸಿದ್ದಾರೆ. ಎಂಡಿಎಂಕೆ ನಾಯಕ ವೈಕೋ, ಎಎಂಎಂಕೆ ನಾಯಕ ಟಿ.ಟಿ.ವಿ. ದಿನಕರನ್‌, ಬಿಜೆಪಿ ನಾಯಕ ಎಚ್‌. ರಾಜಾ ಪೊಲೀಸರ ಕ್ರಮ ಖಂಡಿಸಿದ್ದಾರೆ.

Advertisement

ಗೃಹ ಸಚಿವರ ಭೇಟಿಗೆ ನಿರ್ಧಾರ?: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಹೊಸದಿಲ್ಲಿಯ ಶಹೀನ್‌ಭಾಗ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಪ್ರತಿಭಟ ನಕಾರರು ರವಿವಾರ ಗೃಹ ಸಚಿವ ಅಮಿತ್‌ ಶಾ ನಿವಾಸದ ಕಡೆಗೆ ಪಾದಯಾತ್ರೆ ನಡೆಸಲಿದ್ದಾರೆ. ಅಲ್ಲಿಗೆ ತೆರಳಿ ತಿದ್ದುಪಡಿ ಕಾಯ್ದೆ ರದ್ದು ಮಾಡುವ ಬಗ್ಗೆ ಮನವಿ ಸಲ್ಲಿಸಲಿದ್ದಾರೆ. ಆದರೆ ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು ಶನಿವಾರ ನೀಡಿದ ಮಾಹಿತಿ ಪ್ರಕಾರ ಸಚಿವ ಶಾ ಭೇಟಿ ಮಾಡುವ ಬಗ್ಗೆ ಯಾರಿಂದಲೂ ಕೋರಿಕೆ ಸಲ್ಲಿಕೆಯಾಗಿಲ್ಲ ಎಂದು ಹೇಳಿದ್ದಾರೆ.

ಶಹೀನ್‌ಭಾಗ್‌ನಲ್ಲಿ ಮಾತನಾಡಿದ ಪ್ರತಿಭಟನಾಕಾರರು ಸಿಎಎನಲ್ಲಿ ಸಮಸ್ಯೆ ಇದ್ದವರು ತಮ್ಮನ್ನು ಭೇಟಿಯಾಗಿ ಸಮಸ್ಯೆಯ ಬಗ್ಗೆ ಚರ್ಚೆ ನಡೆಸಬಹುದು ಎಂದು ಹೇಳಿದ್ದಾರೆ. ಹೀಗಾಗಿ ರವಿವಾರ ನಾವೆಲ್ಲರೂ ಅವರ ನಿವಾಸಕ್ಕೆ ತೆರಳಿ ಕಾಯ್ದೆ ರದ್ದು ಮಾಡುವಂತೆ ಮನವಿ ಸಲ್ಲಿಸಲಿದ್ದೇವೆ ಎಂದಿದ್ದಾರೆ.

ಯಾವುದೇ ನಿಯೋಗ ವನ್ನು ಗೃಹ ಸಚಿವರಲ್ಲಿಗೆ ಕಳುಹಿಸುವುದಿಲ್ಲವೆಂದು ಹೇಳಿ ಕೊಂಡಿದ್ದಾರೆ. ಡಿ. 15ರಿಂದ ಸ್ಥಳೀಯರು ಸಿಎಎ ವಿರುದ್ಧ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಶಾಂತಿಯುತ ಪ್ರತಿಭಟನಕಾರರು ದೇಶದ್ರೋಹಿಗಳಲ್ಲ
ಔರಂಗಾಬಾದ್‌: ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವವರನ್ನು ದೇಶದ್ರೋಹಿಗಳು ಅಥವಾ ರಾಷ್ಟ್ರ ವಿರೋಧಿಗಳು ಎಂದು ಕರೆಯಲು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್‌ನ ಔರಂಗಾಬಾದ್‌ ಪೀಠ ಹೇಳಿದೆ.

ಸಿಎಎ ವಿರೋಧಿಸಿ ಪ್ರತಿಭಟನೆ ನಡೆಸಲು ಅನುಮತಿ ಕೋರಿದ್ದರೂ ಜಿಲ್ಲಾಡಳಿತ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಸಲ್ಲಿ ಸಲಾಗಿದ್ದ ಅರ್ಜಿಯ ವಿಚಾರಣೆ ವೇಳೆ ಈ ಅಭಿಪ್ರಾಯ ವ್ಯಕ್ತವಾಗಿದೆ. ಜನರು ಶಾಂತಿಯುತವಾಗಿ ಪ್ರತಿಭಟನೆ ಮಾಡುವುದಿದ್ದರೆ ಅದನ್ನು ಗೌರವಿಸಬೇಕಾಗುತ್ತದೆ ಮತ್ತು ಅನುಮತಿ ನೀಡಬೇಕಾಗುತ್ತದೆ. ಪ್ರತಿಭಟನೆ ನಡೆಸುವು ದರಿಂದ ಸಿಎಎ ಅಥವಾ ಅದರಲ್ಲಿನ ಅಂಶಗಳ ಬಗ್ಗೆ ವಿರೋಧ ವ್ಯಕ್ತಪಡಿಸಿದಂತಾಗುವುದಿಲ್ಲ. ಹೀಗಾಗಿ ಈ ನ್ಯಾಯಪೀಠ ಅಂಥವರನ್ನು ದೇಶದ್ರೋಹಿಗಳು, ರಾಷ್ಟ್ರ ವಿರೋಧಿಗಳು ಎಂದು ಕರೆಯಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸುತ್ತದೆ ನ್ಯಾ| ಟಿ.ವಿ. ನಲವಾಡೆ ಮತ್ತು ನ್ಯಾ.ಎಂ.ಜಿ. ಸುಲಿಕರ್‌ ಅವರನ್ನೊಳಗೊಂಡ ಪೀಠ ಹೇಳಿದೆ. ಅನುಮತಿ ನೀಡದೇ ಇರುವ ಬಗ್ಗೆ ಹೆಚ್ಚುವರಿ ಜಿಲ್ಲಾಧಿ ಕಾರಿಯ ವರದಿಯೂ ಸಮರ್ಪಕವಾಗಿಲ್ಲ ಎಂದಿದೆ.

ವೋಟರ್‌ ಐಡಿ ಸಾಕು
ಭಾರತದ ಚುನಾವಣಾ ಆಯೋಗ ನೀಡುವ ಮತದಾರರ ಗುರುತಿನ ಚೀಟಿಯನ್ನು ಪೌರತ್ವದ ದಾಖಲೆಯನ್ನಾಗಿ ಬಳಸಬಹುದು. ಆಧಾರ್‌ ಕಾರ್ಡ್‌ ಈ ನಿಟ್ಟಿನಲ್ಲಿ ಬಳಕೆ ಮಾಡಲು ಸಾಧ್ಯವಿಲ್ಲ ಎಂದು ಮುಂಬಯಿನ ಸ್ಥಳೀಯ ಕೋರ್ಟ್‌ ತೀರ್ಪು ನೀಡಿದೆ. ಅಕ್ರಮವಾಗಿ ನೆಲೆಸಿದ್ದರು ಎಂದು ಹೇಳಲಾಗಿರುವ ದಂಪತಿ ವಿರುದ್ಧದ ಪ್ರಕರಣದ ವಿಚಾರಣೆ ವೇಳೆ ಈ ತೀರ್ಪು ನೀಡಿದೆ. “ಜನನ ಪ್ರಮಾಣ ಪತ್ರ, ವಲಸೆ ಪ್ರಮಾಣ ಪತ್ರ, ಪಾಸ್‌ಪೋರ್ಟ್‌ಗಳನ್ನು ವ್ಯಕ್ತಿಯ ಮೂಲ ತಿಳಿಯಲು ಬಳಕೆ ಮಾಡಬಹುದು. ಚುನಾವಣಾ ಆಯೋಗದ ಗುರುತಿನ ಚೀಟಿಯನ್ನು ಪೌರತ್ವದ ದಾಖಲೆಯನ್ನಾಗಿ ಬಳಕೆ ಮಾಡಬಹುದು. ಆದರೆ ಈ ಬಗ್ಗೆ ಆತ ಜನತಾ ಪ್ರಾತಿನಿಧ್ಯ ಕಾಯ್ದೆಯಡಿ ಭಾರತದ ಪ್ರಜೆಯೆಂದು ದೃಢೀಕರಣ ನೀಡಬೇಕು. 2017ರಲ್ಲಿ ಬಂಧಿಸಲಾಗಿದ್ದ ಬಾಂಗ್ಲಾ ಪ್ರಜೆಗಳನ್ನು ಕೋರ್ಟ್‌ ದೋಷಮುಕ್ತಿಗೊಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next