ತವರಿನ ಸಿರಿ’, “ರಾಮ ಶಾಮ ಭಾಮ’, “ಕ್ರೇಜಿ ಲೋಕ’, “ಐಶ್ವರ್ಯ’, “ಗಾಳಿಪಟ’ ಹೀಗೆ ಕನ್ನಡದ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿದ ಕೊಡಗಿನ ಬೆಡಗಿ ಡೈಸಿ ಬೋಪಣ್ಣ, ಮದುವೆಯ ಬಳಿಕ ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಕಳೆದ ಕೆಲವರ್ಷಗಳಿಂದ ಚಿತ್ರರಂಗದಲ್ಲಿ ಎಲ್ಲೂ ಕಾಣಿಸಿಕೊಂಡಿರದ ಡೈಸಿ ಬೋಪಣ್ಣ, ಈಗ ತಮ್ಮ ಹೊಸ ಫೋಟೋ ಶೂಟ್ ಮೂಲಕ ಸ್ಯಾಂಡಲ್‌ವುಡ್ ಅಂಗಳದಲ್ಲಿ ಸುದ್ದಿಯಾಗುತ್ತಿದ್ದಾರೆ.
ಹೌದು, ಕಳೆದ ಕೆಲ ತಿಂಗಳಿನಿಂದ ಸೋಷಿಯಲ್ ಮೀಡಿಯಾದಲ್ಲಿ ತುಂಬ ಆಕ್ಟೀವ್ ಆಗಿರುವ ಡೈಸಿ ಬೋಪಣ್ಣ, ಮದುವೆ ಯ ನಂತರ ಮತ್ತಷ್ಟು ಹಾಟ್ ಮತ್ತು ಫಿಟ್ ಎನಿಸುವಂಥ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಆಗಾಗ್ಗೆ ಹಂಚಿಕೊಳ್ಳುತ್ತಿದ್ದಾರೆ. ಸದ್ಯ ಡೈಸಿ ತಮ್ಮ ಹೊಸ ಫೋಟೋಶೂಟ್ ಫೋಟೋಗಳನ್ನು ಹಂಚಿಕೊಂಡಿದ್ದು, ಅದರಲ್ಲಿ ಟಾಪ್‌ಲೆಸ್ ಫೋಟೋ ಮೂಲಕ ಮಿಂಚಿದ್ದಾರೆ.
ಟಾಪ್‌ಲೆಸ್ ಆಗಿ ಲೈಟ್‌ಪಿಂಕ್ ಕಲರ್ ಗುಲಾಬಿ ಹೂವುಗಳನ್ನು ಹಿಡಿದು, ಫ್ರೀಹೇರ್ ಬಿಟ್ಟು ಸ್ಟೆ „ಲಿಶ್ ಆಗಿ ಕ್ಯಾಮೆರಾ ಮುಂದೆ ಪೋಸ್ ಕೊಟ್ಟಿರುವ ಡೈಸಿ ಬೋಪಣ್ಣ ಗ್ಲಾಮರಸ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಇನ್ನು ಫೋಟೋಶೂಟ್‌ನಲ್ಲಿ ಹಾಟ್ ಆ್ಯಂಡ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿರುವ ಡೈಸಿ ಬೋಪಣ್ಣ ಮತ್ತೆ ಸಿನಿಮಾಗೆ ಮರಳುವ ಸುಳಿವು ನೀಡಿದ್ದಾರೆ ಎನ್ನಲಾಗುತ್ತಿದ್ದು, ಸಿನಿಪ್ರಿಯರು ಕಾಮೆಂಟ್ಸ್ ಮೂಲಕ ಹತ್ತಾರು ಪ್ರಶ್ನೆಗಳನ್ನು ಡೈಸಿಗೆ ಕೇಳುತ್ತಿದ್ದರೂ, ಡೈಸಿ ಮಾತ್ರ ಈ ಬಗ್ಗೆ ಇನ್ನೂ ತುಟಿ ಬಿಚ್ಚಲಿಲ್ಲ.