Advertisement

Leopard: ಎಲೆಕ್ಟ್ರಾನಿಕ್‌ ಸಿಟಿ ಎನ್‌ಟಿಟಿಎಫ್ ಆವರಣ ಬಳಿ ತಡರಾತ್ರಿ ಚಿರತೆ ಪ್ರತ್ಯಕ್ಷ

11:25 AM Sep 18, 2024 | Team Udayavani |

ಬೆಂಗಳೂರು: ಎಲೆಕ್ಟ್ರಾನಿಕ್‌ ಸಿಟಿ ಟೋಲ್‌ ಸಮೀಪದ ಎನ್‌ಟಿಟಿಎಫ್ ಆವರಣ ಸಮೀಪದಲ್ಲಿ ಸೋಮವಾರ ತಡರಾತ್ರಿ 3 ಗಂಟೆ ಸುಮಾರಿಗೆ ಚಿರತೆ ಓಡಾಡಿರುವ ದೃಶ್ಯ ಅಲ್ಲಿನ ಕ್ಯಾಮರಾದಲ್ಲಿ ಸೆರೆಯಾಗಿದೆ.

Advertisement

ಚಿರತೆಯೊಂದು ಎಲೆಕ್ಟ್ರಾನಿಕ್‌ ಸಿಟಿ ಟೋಲ್‌ ಸಮೀಪದಲ್ಲಿರುವ ಎನ್‌ಟಿಟಿಎಫ್ ಆವರಣದ ಒಳಗೆ ಜಿಗಿದಿದೆ. ಬಳಿಕ ಪುನಃ ಅದೇ ರಸ್ತೆಗೆ ಹಿಂತಿರುಗಿ ಬಂದು ಇನ್ನೊಂದು ಬಾಗಕ್ಕೆ ಹಾರಿದೆ. ಹೆದ್ದಾರಿಯನ್ನು ದಾಟಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಿದೆ. ಆ ಸಂದರ್ಭದಲ್ಲಿ ಸುತ್ತ-ಮುತ್ತ ಜನರ ಓಡಾಟ ಇರಲಿಲ್ಲ. ಹೀಗಾಗಿ ಯಾವುದೇ ದುರ್ಘ‌ಟನೆ ಸಂಭವಿಸಿಲ್ಲ. ಸ್ಥಳೀಯ ಸಿಸಿಕ್ಯಾಮರಾ ಪರಿಶೀಲನೆ ವೇಳೆ ಚಿರತೆಯ ಚಲನಾವಲನಾ ಪತ್ತೆಯಾಗಿದೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ತಿಳಿಸಿ­ದ್ದಾರೆ. ಇತ್ತ ಮಂಗಳವಾರ ಎಲೆಕ್ಟ್ರಾನಿಕ್‌ ಸಿಟಿ ಠಾಣೆ ಪೊಲೀ­ಸರು ಅರಣ್ಯ ಸಿಬ್ಬಂದಿ ಜೊತೆಗೆ ಸ್ಥಳಕ್ಕೆ ದೌಡಾಯಿಸಿ ಚಿರತೆ ಗಾಗಿ ಕೆಲ ಹೊತ್ತು ಕಾರ್ಯಾಚರಣೆ ನಡೆಸಿದ್ದಾರೆ. ಆದರೆ, ಚಿರತೆಯ ಸುಳಿವೂ ಸಿಗದೇ ಇದ್ದಾಗ ಮೈಕ್‌ ಮೂಲಕ ಸ್ಥಳೀಯರಲ್ಲಿ ಚಿರತೆ ಓಡಾಟದ ಬಗ್ಗೆ ಎಚ್ಚರಿಕೆ ನೀಡಿದರು.

ಐಟಿಬಿಟಿ  ನೌಕರರ ಆತಂಕ:

ಕಳೆದ 15 ದಿನದಿಂದ ಜಿಗಣಿ ಕೈಗಾರಿಕಾ ಪ್ರದೇಶದ ಸುತ್ತಮುತ್ತ ಚಿರತೆ ಕಾಣಿಸಿ ಕೊಂಡಿರುವ ಬಗ್ಗೆ ಸಾರ್ವಜನಿಕ ವಲಯಗಳಲ್ಲಿ ಮಾತುಗಳು ಕೇಳಿ ಬರುತ್ತಿದ್ದವು. ಇದೀಗ ಎನ್‌ಟಿಟಿಎಫ್ ಆವರಣಕ್ಕೆ ಚಿರತೆ ಲಗ್ಗೆ ಇಟ್ಟಿರುವ ಸುದ್ದಿ ಹಬ್ಬುತ್ತಿದ್ದಂತೆ ಈ ಪ್ರದೇಶಗಳ ಸುತ್ತ-ಮುತ್ತ ವಾಸಿಸುತ್ತಿರುವ ಐಟಿ-ಬಿಟಿ ಕಂಪನಿ ಉದ್ಯೋಗಿಗಳಲ್ಲಿ ಆತಂಕ ಮನೆ ಮಾಡಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next