Advertisement

ಮಂಗಳೂರು ವೈದ್ಯರ ವೀಡಿಯೋ ಮೆಚ್ಚಿದ ಲತಾ ಮಂಗೇಶ್ಕರ್‌ 

03:22 PM Jul 07, 2020 | mahesh |

ಮಂಗಳೂರು: ವೈದ್ಯರ ದಿನಾಚರಣೆಯಂದು ಕೋವಿಡ್‌ ವಾರಿಯರ್‌ಗಳಿಗೆ ನಮನ ಸಲ್ಲಿಸಲೆಂದು ಖ್ಯಾತ ಗಾಯಕಿ ಲತಾ ಮಂಗೇಶ್ಕರ್‌ ಅವರ ಗಾಯನವನ್ನು ಬಳಸಿಕೊಂಡು ವೈದ್ಯ ಡಾ| ಗೌತಮ್‌ ಕುಳಮರ್ವ ರಚಿಸಿದ ವೀಡಿಯೋವೊಂದು ವೈರಲ್‌ ಆಗಿದೆ. ಸ್ವತಃ ಲತಾ ಮಂಗೇಶ್ಕರ್‌ ಅವರೇ ವೀಡಿಯೋ ಮೆಚ್ಚಿ ಡಾ| ಕುಳಮರ್ವ ಅವರನ್ನು ಸಂಪರ್ಕಿಸಿ ಮೆಚ್ಚುಗೆ ಸೂಚಿಸಿದ್ದಾರೆ.

Advertisement

ಖ್ಯಾತ ಗಾಯಕಿ ಲತಾ ಮಂಗೇಶ್ಕರ್‌ ಹಾಡಿದ “ಯೇ ಮೇರೇ ವತನ್‌ ಕೇ ಲೋಗೋಂ’ ಎಂಬ ದೇಶಭಕ್ತಿ ಗೀತೆಯ ತುಣುಕನ್ನು ಅವರು ತಮ್ಮ ವೀಡಿಯೋದಲ್ಲಿ ಬಳಸಿಕೊಂಡಿದ್ದು, ವೈದ್ಯಕೀಯ ವಲಯದಲ್ಲಿ ಹಂಚಿಕೊಳ್ಳುವುದಕ್ಕಾಗಿ ವೀಡಿಯೋ ಮಾಡಿದ್ದರು. ಆದರೆ ಭಾರತೀಯ ವೈದ್ಯವಿಜ್ಞಾನ ಸಂಸ್ಥೆ (ಐಎಂಎ) ಸದಸ್ಯರೊಂದಿಗೆ ವಾಟ್ಸ್‌ಆ್ಯಪ್‌ ಮೂಲಕ ಹಂಚಿಕೊಂಡಿದ್ದ ವೀಡಿಯೋ ಸಾಮಾಜಿಕ ತಾಣಗಳಲ್ಲಿ ಹರಿದಾಡಿತ್ತು. ಇದು ಪದ್ಮಭೂಷಣ ಲತಾ ಮಂಗೇಶ್ಕರ್‌ ಅವರಿಗೂ ತಲುಪಿದೆ. ವೀಡಿಯೋ ನೋಡಿದ ಮಂಗೇಶ್ಕರ್‌ ತಮ್ಮ ಪರಿಚಯದ ವೈದ್ಯರ ಮೂಲಕ ಡಾ| ಕುಳಮರ್ವ ಅವರನ್ನು ಸಂಪರ್ಕಿಸಿ ಅಭಿನಂದನೆ ಸಲ್ಲಿಸಿದ್ದಾರೆ.

ಈ ಹಾಡು ಭಾರತ-ಚೀನ ನಡುವೆ 1962ರಲ್ಲಿ ನಡೆದ ಯುದ್ಧದ ಸಂದರ್ಭದಲ್ಲಿ ಮಡಿದ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಲು ರಚನೆಯಾಗಿತ್ತು. ಕವಿ ಪ್ರದೀಪ್‌ ಅವರು ರಚಿಸಿದ್ದ ಹಾಡನ್ನು ಲತಾ ಹಾಡಿದ್ದರು. ಮೂಲತಃ ಕಾಸರಗೋಡಿನವರಾಗಿರುವ ಡಾ| ಕುಳಮರ್ವ ಅವರು ಇಎನ್‌ಟಿ ತಜ್ಞರಾಗಿದ್ದು, ಕಾಸರಗೋಡು / ಮಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ದೇರೆಬೈಲ್‌ ಕೊಂಚಾಡಿಯ ಲ್ಯಾಂಡ್‌ಲಿಂಕ್ಸ್‌ ಟೌನ್‌ಶಿಪ್‌ನಲ್ಲಿ ನೆಲೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next