Advertisement
ಸ್ಯಾಮುಯೆಲ್ ಬಟ್ಲರ್, ಹತ್ತೂಂಬತ್ತನೇ ಶತಮಾನದ ಪ್ರಸಿದ್ಧ ಇಂಗ್ಲಿಷ್ ಸಾಹಿತಿ. ಈತ ಹೋಮರನಕಾವ್ಯವನ್ನು ಇಂಗ್ಲಿಷಿಗೆ ಭಾಷಾಂತರಿಸಿದ. “ದ ವೇ ಆಫ್ ಆಲ್ ಫ್ಲೆಶ್’ ಆತ್ಮಕಥಾನಕದ ರೂಪದಲ್ಲಿರುವ ಇವನ ಪ್ರಸಿದ್ಧಕಾದಂಬರಿ. ಬಟ್ಲರ್, ಹಾಸಿಗೆ ಹಿಡಿದಿದ್ದ ತನ್ನ ಪತ್ನಿಯ ಪಕ್ಕದಲ್ಲಿ ಕೂತಿದ್ದನಂತೆ. ಆಕೆಯ ಜೀವನ ಮುಗಿಯಿತು ಎಂಬುದು ಅವನಿಗೆ ಖಚಿತವಾಗಿತ್ತು. ಆಕೆಯಕೈಯನ್ನು ಹಿಡಿದು ನೇವರಿಸುತ್ತಕೇಳಿದ- ನೀನು ಜನ್ಮಾಂತರವನ್ನು ನಂಬ್ತೀಯಾ?. ಆಕೆ ಹೌದೆಂಬಂತೆ ತಲೆಯಾಡಿಸಿದಳು. ಎಲ್ರೂ ಹೇಳ್ತಾರೆ, ಸತ್ತವರ ಆತ್ಮಗಳು ಅವರ ಕುಟುಂಬದವರ ಸುತ್ತ ತಿರುಗಾಡ್ತವೆ ಅಂತ. ಬದುಕಿರುವ ತಮ್ಮ ಪ್ರೀತಿಪಾತ್ರರ ಜೊತೆ ಮಾತಾಡುವುದಕ್ಕೆ ಪ್ರಯತ್ನಪಡ್ತವೆ ಅಂತ ಎಂದ ಬಟ್ಲರ್. ಆಕೆ ಅದೂ ನಿಜ ಎಂಬಂತೆ ಕ್ಷೀಣವಾಗಿ ಹೂಂಗುಟ್ಟಿದಳು.
Advertisement
ಬಾರೋ ಸಾಧಕರ ಕೇರಿಗೆ: ಕಡೆಯ ಕೋರಿಕೆ
06:37 PM Sep 29, 2020 | Suhan S |
Advertisement
Udayavani is now on Telegram. Click here to join our channel and stay updated with the latest news.