Advertisement

ಗಣರಾಜ್ಯೋತ್ಸವ: ಪಥಸಂಚಲನದಲ್ಲಿ ನೌಕಾ ವಿಚಕ್ಷಣಾ ವಿಮಾನ ಭಾಗಿ

08:07 PM Jan 18, 2023 | Team Udayavani |

ನವದೆಹಲಿ: ಪ್ರಸಕ್ತ ವರ್ಷದ ಗಣರಾಜ್ಯ ದಿನವಾದ ಜ.26ರಂದು ಮೊದಲ ಬಾರಿಗೆ ಭಾರತೀಯ ನೌಕಾಪಡೆ ಹೊಂದಿರುವ ಐಎಲ್‌-38 ಯುದ್ಧ ವಿಮಾನಗಳು ಪಥಸಂಚಲನದಲ್ಲಿ ಭಾಗವಹಿಸಲಿವೆ. ಕಡಲು ರಕ್ಷಣೆ ಕ್ಷೇತ್ರದಲ್ಲಿ 42 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಈ ವಿಮಾನಗಳನ್ನು ಮೊದಲು ಮತ್ತು ಕೊನೇ ಬಾರಿಗೆ ಪಥಸಂಚಲನದಲ್ಲಿ ಪ್ರದರ್ಶಿಸಲಾಗುತ್ತದೆ ಎಂದು ಐಎಎಫ್ ನ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

Advertisement

ಒಟ್ಟು 50 ಯುದ್ಧ ವಿಮಾನಗಳು ಜ.26ರಂದು ಕರ್ತವ್ಯಪಥದಲ್ಲಿ ನಡೆಯಲಿರುವ ಪಥಸಂಚಲನದಲ್ಲಿ ಪಾಲ್ಗೊಳ್ಳಲಿವೆ. ಭೂಸೇನೆಯ ನಾಲ್ಕು ವಿಮಾನಗಳೂ ಇದರಲ್ಲಿರಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ಮೊದಲು:
ರಾಜಪಥವನ್ನು ಕರ್ತವ್ಯಪಥ ಎಂದು ನಾಮಕರಣ ಮಾಡಿದ ಬಳಿಕ ಮೊದಲ ಬಾರಿಗೆ ಅಲ್ಲಿ ಗಣರಾಜ್ಯ ದಿನದ ಕಾರ್ಯಕ್ರಮ ಮತ್ತು ಪಥ ಸಂಚಲನ ನಡೆಯಲಿದೆ.

ಹಾರಾಟ ನಿಷೇಧ:
ಗಣರಾಜ್ಯ ದಿನ ಪ್ರಯುಕ್ತ ಜ.19ರಿಂದ 24 ಮತ್ತು 26ರಿಂದ 29ರವರೆಗೆ ರಾಷ್ಟ್ರೀಯ ರಾಜಧಾನಿ ಪ್ರದೇಶ (ಎನ್‌ಸಿಆರ್‌) ವ್ಯಾಪ್ತಿಯಲ್ಲಿ ವಿಮಾನಗಳ ಹಾರಾಟ ನಿಷೇಧ ಆದೇಶ ಹೊರಡಿಸಲಾಗಿದೆ. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1.15ರ ವರೆಗೆ ಈ ನಿಯಮ ಅನ್ವಯವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next