Advertisement

Ayodhya ಮಂಡಲೋತ್ಸವದ ಕೊನೆಯ ದಿನ: ಶ್ರೀರಾಮನಿಗೆ 1008 ಕಲಶ ಸಹಿತ  ಬ್ರಹ್ಮ‌ಕಲಶಾಭಿಷೇಕ

10:51 AM Mar 10, 2024 | Team Udayavani |

ಅಯೋಧ್ಯೆ: ನೂತನ ರಾಮ ಮಂದಿರದಲ್ಲಿ ಶ್ರೀರಾಮನ ಪ್ರತಿಷ್ಠಾನೆಯು ಮರುದಿನದಿಂದ ಪೇಜಾವರ ಶ್ರೀಗಳ ನೇತೃತ್ವದಲ್ಲಿ ಆರಂಭವಾಗಿದ್ದ 48 ದಿನಗಳ ಮಂಡಲೋತ್ಸವವು ಅಂತಿಮ ಹಂತ ತಲುಪಿದ್ದು, ಭಾನುವಾರ ಅದರ ಕೊನೆಯ ದಿನವಾಗಿದೆ.

Advertisement

ಶ್ರೀರಾಮನಿಗೆ ವೈಭವದಿಂದ 1008 ಕಲಶಾಭಿಷೇಕ ಸಹಿತ ಬ್ರಹ್ಮಕಲಶೋತ್ಸವ ನೆರವೇರಿಸುವ ಬಗ್ಗೆ ರವಿವಾರ ಬೆಳಿಗ್ಗೆಯಿಂದಲೇ ನೂರಾರು ಋತ್ವಿಜರ ಉಪಸ್ಥಿತಿಯಲ್ಲಿ ತತ್ವ ಹೋಮ ಸಹಿತ ವಿವಿಧ ಹೋಮ ಹವನಾದಿಗಳು, ಕಲಶ ಸ್ಥಾಪನಾ ಪೂರ್ವಕ ಕಲಶ ಪೂಜೆ ವಿಧಿ ವಿಧಾನಗಳು ಆರಂಭವಾಗಿದೆ.

ಶ್ರೀರಾಮನ ಬ್ರಹ್ಮ‌ಕಲಶೋತ್ಸವ ನಿಮಿತ್ತ ಇಡೀ ರಾಮಮಂದಿರವನ್ನು ಆಕರ್ಷಕ ಪುಷ್ಪಗಳಿಂದ ಅಲಂಕರಿಸಲಾಗಿದೆ. ಮಂದಿರದಲ್ಲಿ ಎಂದಿನಂತೆ ಸಾವಿರಾರು ಭಕ್ತರು ಸಾಲು ಸಾಲು ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದಾರೆ.

ಕಲಶಾಭಿಷೇಕಕ್ಕೆ ಶ್ರೀಗಳು ಸರಯೂ ಮಾತ್ರವಲ್ಲದೇ ಗಂಗಾ ಅಲಕನಂದಾ ಸಹಿತ ಅನೇಕ ನದಿಗಳ ಪವಿತ್ರ ಜಲವನ್ನು ತರಿಸಿ ಬಳಸಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next