Advertisement

ಐಪಿಎಲ್‌ನಿಂದ ಲಸಿತ ಮಾಲಿಂಗ ಔಟ್‌: ಜೇಮ್ಸ್‌ ಪ್ಯಾಟಿನ್ಸನ್ ಇನ್

12:22 PM Sep 03, 2020 | keerthan |

ಕೊಲಂಬೊ: ಐಪಿಎಲ್‌ನ ಅತ್ಯಂತ ಯಶಸ್ವಿ ಬೌಲರ್‌ ಲಸಿತ ಮಾಲಿಂಗ ಈ ಸಲದ ಕೂಟದಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.

Advertisement

ಅವರು ಮುಂಬೈ ಇಂಡಿಯನ್ಸ್‌ ತಂಡದ ಪ್ರಮುಖ ಬೌಲರ್‌ ಆಗಿದ್ದಾರೆ. ಮಾಲಿಂಗ ನಿರ್ಧಾರದ ಬೆನ್ನಲ್ಲೇ ಮುಂಬೈ ತಂಡ ಆಸ್ಟ್ರೇಲಿಯದ ಸ್ಪೀಡ್‌ಸ್ಟರ್‌ ಜೇಮ್ಸ್‌ ಪ್ಯಾಟಿನ್ಸನ್‌ ಅವರನ್ನು ಬದಲಿ ಬೌಲರ್‌ ಆಗಿ ಸೇರಿಸಿ ಕೊಂಡಿದೆ.

ಲಸಿತ ಮಾಲಿಂಗ ಐಪಿಎಲ್‌ನಲ್ಲಿ ಅತೀ ಹೆಚ್ಚು 170 ವಿಕೆಟ್‌ ಕೆಡವಿದ್ದು, ಕಳೆದ ವರ್ಷ ಚೆನ್ನೈ ವಿರುದ್ಧದ ಫೈನಲ್‌ನಲ್ಲಿ ಕೊನೆಯ ಎಸೆತದಲ್ಲಿ ಮುಂಬೈಗೆ ಒಂದು ರನ್ನಿನ ರೋಮಾಂಚಕ ಜಯ ತಂದಿತ್ತಿದ್ದರು.

ಲಸಿತ ಮಾಲಿಂಗ ನಿರ್ಧಾರವನ್ನು ಮುಂಬೈ ಇಂಡಿಯನ್ಸ್‌ ಮಾಲಕ ಆಕಾಶ್‌ ಅಂಬಾನಿ ಗೌರವಿಸಿದ್ದು, ಅವರೋರ್ವ ಲೆಜೆಂಡ್‌ ಹಾಗೂ ಮುಂಬೈ ತಂಡದ ಪಿಲ್ಲರ್‌ ಆಗಿದ್ದರು ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next