Advertisement

ನಾಯಕತ್ವ ತ್ಯಜಿಸಲು ಸಿದ್ಧ: ಲಸಿತ ಮಾಲಿಂಗ

10:01 AM Jan 14, 2020 | Team Udayavani |

ಕೊಲಂಬೊ: ಭಾರತ ವಿರುದ್ಧ ನಡೆದ ಟಿ20 ಸರಣಿಯಲ್ಲಿ ಹೀನಾಯ ಸೋಲನ್ನು ಕಂಡ ಹಿನ್ನೆಲೆಯಲ್ಲಿ ಶ್ರೀಲಂಕಾ ತಂಡದ ನಾಯಕತ್ವ ತ್ಯಜಿಸಲು ಸಿದ್ಧನಿದ್ದೇನೆ ಎಂದು ಲಸಿತ ಮಾಲಿಂಗ ಹೇಳಿದ್ದಾರೆ. ಭಾರತ ವಿರುದ್ಧ ನಡೆದ 3 ಪಂದ್ಯಗಳ ಸರಣಿಯನ್ನು ಶ್ರೀಲಂಕಾ 0-2 ಅಂತರದಿಂದ ಸೋತಿತ್ತು.

Advertisement

ಸರಣಿ ಮುಗಿಸಿ ತವರಿಗೆ ಮರಳಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಲಸಿತ ಮಾಲಿಂಗ, “ಟಿ20 ಸರಣಿಯಲ್ಲಿ ನಮ್ಮ ತಂಡ ಗಮನಾರ್ಹ ನಿರ್ವಹಣೆ ನೀಡುವಷ್ಟು ಸಮರ್ಥವಾಗಿರಲಿಲ್ಲ. ನಮ್ಮ ಬೌಲರ್‌ಗಳು ಎದುರಾಳಿ ಆಟಗಾರರನ್ನು ಕಟ್ಟಿಹಾಕಲು ವಿಫ‌ಲರಾದರು. ಬ್ಯಾಟ್ಸ್‌ಮನ್‌ಗಳು ಸವಾಲಿನ ಮೊತ್ತ ಪೇರಿಸಲು ಅಸಮರ್ಥರಾದರು’ ಎಂದರು.

“ನಾವು ಸಶಕ್ತ ಪಡೆಯನ್ನು ಹೊಂದಿಲ್ಲ. ವಿಶ್ವದ 9ನೇ ರ್‍ಯಾಂಕಿನ ತಂಡದಿಂದ ಗೆಲುವಿನ ನಿರ್ವಹಣೆಯನ್ನು ನಿರೀಕ್ಷಿಸುವುದು ಕೂಡ ಸೂಕ್ತವಲ್ಲ. ನಾನು ವರ್ಷದ ಹಿಂದಷ್ಟೇ ನಾಯಕತ್ವಕ್ಕೆ ಮರಳಿದ್ದೆ….’ ಎಂದ ಮಾಲಿಂಗ ನೈತಿಕ ಹೊಣೆ ಹೊತ್ತು ನಾಯಕತ್ವ ತ್ಯಜಿಸಲು ಸಿದ್ಧನಿದ್ದೇನೆ ಎಂದರು.

ಮಾಲಿಂಗ ಅವರ ನಾಯಕತ್ವದಲ್ಲಿ ಶ್ರೀಲಂಕಾ ತಂಡವು 2014ರಲ್ಲಿ ಟಿ20 ವಿಶ್ವಕಪ್‌ ಜಯಿಸಿತ್ತು. 2016ರ ಆರಂಭದ ವರೆಗೆ ಅವರು ನಾಯಕತ್ವದಲ್ಲಿ ಮುಂದುವರಿದಿದ್ದರು. ಬಳಿಕ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿದ್ದರು. 2018ರ ಡಿಸೆಂಬರ್‌ನಲ್ಲಿ ಮತ್ತೆ ತಂಡದ ನಾಯಕತ್ವ ಹುದ್ದೆಗೆ ಮರಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next