Advertisement

ಲೇಸರ್‌ ಸಂವಹನ: ಭೂಮಿಗೆ 14 ಕೋಟಿ ಮೈಲು ದೂರದಿಂದ ಸಂದೇಶ ರವಾನೆ

01:27 PM May 03, 2024 | Nagendra Trasi |

ವಾಷಿಂಗ್ಟನ್‌: ಬಾಹ್ಯಾಕಾಶದಲ್ಲಿನ ಸುಮಾರು 140 ದಶಲಕ್ಷ (14 ಕೋಟಿ) ಮೈಲು ದೂರದಿಂದ ನಿಗೂಢ ಸಂಕೇತವನ್ನು ಭೂಮಿ ಪಡೆದಿದೆ ಎಂದು ಅಮೆರಿಕ ಬಾಹ್ಯಾಕಾಶ ಸಂಶೋಧನ ಸಂಸ್ಥೆ ನಾಸಾ ಹೇಳಿದೆ. ಈ ಸಂಕೇತವನ್ನು ರವಾನಿಸಿದ್ದು ಬೇರಾರೂ ಅಲ್ಲ, ನಾಸಾದ ಸೈಕ್‌ ಬಾಹ್ಯಾಕಾಶನೌಕೆ.

Advertisement

ಇದನ್ನೂ ಓದಿ:ಕಾಂಗ್ರೆಸ್‌ನಿಂದ ಮತ ಬ್ಯಾಂಕ್‌ ರಾಜಕಾರಣ; ನೇಹಾ ಹತ್ಯೆ ಲವ್‌ ಜೆಹಾದ್‌:ಅಮಿತ್‌ ಶಾ ಆರೋಪ

2023ರ ಅಕ್ಟೋಬರ್‌ನಲ್ಲಿ ಉಡಾವಣೆಗೊಂಡ ಸೈಕ್‌ ನೌಕೆಯು ಡೀಪ್‌ ಸ್ಪೇಸ್‌ ಆಪ್ಟಿಕಲ್‌ ಕಮ್ಯನಿಕೇಶನ್‌(ಡಿಎಸ್‌ ಒಸಿ) ವ್ಯವಸ್ಥೆಯನ್ನು ಒಳಗೊಂಡಿದೆ. ಇದು ಬಾಹ್ಯಾಕಾಶದ ಅತೀ ದೂರದವರೆಗೂ ಲೇಸರ್‌ ಸಂವಹನ ನಡೆಸುವ ಸಾಮರ್ಥ್ಯ ಹೊಂದಿದೆ.

ಎ.8ರಂದು 10 ನಿಮಿಷ ನಕಲಿ ಬಾಹ್ಯಾಕಾಶ ನೌಕೆಯ ದತ್ತಾಂಶವನ್ನು ಡೌನ್‌ ಲಿಂಕ್‌ ಮಾಡಿರುವ ಬಗ್ಗೆ ನಾಸಾದ ಜೆಟ್‌
ಪ್ರೊಪಲ್ಶನ್‌ ಲ್ಯಾಬೊರೇಟರಿ (ಜೆಪಿಎಲ್‌) ಪ್ರಾಜೆಕ್ಟ್ ಕಾರ್ಯಾಚರಣೆ ಮುಖ್ಯಸ್ಥೆ ಮೀರಾ ಶ್ರೀನಿವಾಸನ್‌ ತಿಳಿಸಿದ್ದಾರೆ.

ನಾಸಾದ ಡೀಪ್‌ ಸ್ಪೇಸ್‌ ನೆಟ್‌ ವರ್ಕ್‌ (ಡಿಎಸ್‌ಎನ್‌)ನ ರೇಡಿಯೋ ಫ್ರೀಕ್ವೆನ್ಸಿ ಸಂವಹನ ಚಾನೆಲ್‌ಗ‌ಳನ್ನು ಬಳಸಿಕೊಂಡು ಸೈಕ್‌ನ ಅಸಲಿ ದತ್ತಾಂಶ ಭೂಮಿಗೆ ಕಳುಹಿಸಲಾಗಿದೆ. ಇದರ ಜತೆಗೆ, ನಕಲಿ ಸಂವಹನವನ್ನು ಲೇಸರ್‌ ಮೂಲಕ ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next