ಹೈದರಾಬಾದ್: ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ನದಿ ಪಾತ್ರದಲ್ಲಿ ಅಪರೂಪದ ಬೃಹತ್ ಗಾತ್ರದ ಸಮುದ್ರ ಬಸವನ ಹುಳು ಪತ್ತೆಯಾಗಿದ್ದು, ಇದು ಹರಾಜಿನಲ್ಲಿ 18 ಸಾವಿರ ರೂಪಾಯಿಗೆ ಮಾರಾಟವಾಗಿರುವುದಾಗಿ ಎಎನ್ ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇದನ್ನೂ ಓದಿ:ಶ್ಯಾಮಪ್ರಸಾದ ಮುಖರ್ಜಿ ಸ್ಮರಣಾರ್ಥ ಬಿಜೆಪಿಯಿಂದ 11 ಲಕ್ಷ ಸಸಿ ನೆಡುವ ಕಾರ್ಯಕ್ರಮ: ಡಿಸಿಎಂ
ಈ ಬಸವನ ಹುಳು ಸೈರಿಂಕ್ಸ್ ಅರುವಾನಸ್ ಪ್ರಬೇಧಕ್ಕೆ ಸೇರಿದ್ದು, ಇದು ಜಗತ್ತಿನಲ್ಲಿಯೇ ಭೂಮಿ ಮತ್ತು ನೀರಿನಲ್ಲಿ ಕಂಡು ಬರುವ ಅತೀ ದೊಡ್ಡ ಬಸವನ ಹುಳುವಾಗಿದೆ ಎಂದು ಹೇಳಿದೆ. ಇದು 70 ಸೆ.ಮೀ.ವರೆಗೆ ಉದ್ದ ಬೆಳೆಯಲಿದ್ದು, 18 ಕೆಜಿವರೆಗೆ ತೂಗಲಿದೆ ಎಂದು ವರದಿ ವಿವರಿಸಿದೆ.
ಇದು ಆಸ್ಟ್ರೇಲಿಯಾ ಕಹಳೆ ಎಂದೇ ಜನಪ್ರಿಯವಾಗಿ ಕರೆಯಲ್ಪಡುವ ಬಸವನ ಹುಳುವಾಗಿದ್ದು, ಇದು ಅಳಿವಿನಂಚಿನಲ್ಲಿರುವ ಮಾಂಸಾಹಾರಿ ಬಸವನಹುಳು. ಇದರ ಚಿಪ್ಪುಗಳು ಜನಪ್ರಿಯವಾಗಿದ್ದು, ಅದಕ್ಕಾಗಿ ಬೃಹತ್ ಗಾತ್ರದ ಬಸವನಹುಳುಗಳನ್ನು ಕೊಲ್ಲಲಾಗುತ್ತಿದೆ ಎಂದು ತಿಳಿಸಿದೆ.
ಆಂಧ್ರಪ್ರದೇಶದ ಗೋದಾವರಿ ನದಿ ಪ್ರದೇಶದಲ್ಲಿ ಪತ್ತೆಯಾದ ಕಿತ್ತಳೆ ಬಣ್ಣದ ಬಸವನ ಹುಳು ಜನರಲ್ಲಿ ಕುತೂಹಲ, ಅಚ್ಚರಿ ಮೂಡಿಸಿರುವುದಾಗಿ ಎಎನ್ ಐ ಟ್ವೀಟ್ ನಲ್ಲಿ ತಿಳಿಸಿದೆ. ಅಲ್ಲದೇ ಅಪರೂಪದ ಬಸವನ ಹುಳುವಿನ ಚಿತ್ರವನ್ನು ಶೇರ್ ಮಾಡಿದೆ.