Advertisement

Manipal ಮನೆಯಿಂದ ಲ್ಯಾಪ್‌ಟಾಪ್‌ ಕಳವು: ದೂರು ದಾಖಲು

06:48 PM Sep 05, 2023 | Team Udayavani |

ಮಣಿಪಾಲ: ಬಾಡಿಗೆ ಮನೆಗೆ ನುಗ್ಗಿ ಸಾವಿರಾರು ರೂ. ಮೌಲ್ಯದ ಲ್ಯಾಪ್‌ಟಾಪ್‌ ಕಳವುಗೈದ ಘಟನೆ ನಡೆದಿದೆ. ಮಣಿಪಾಲ ವಿದ್ಯಾರತ್ನ ನಗರದ ಸ್ಟ್ಯಾಂಜಾ ಸ್ಯಾನ್‌ ಪೆದ್ರೋ ಹೌಸ್‌ನಲ್ಲಿ ವಾಸವಿರುವ ಅನುರವ್‌ ಬನಿಕ್‌ ಚೌದ್ರಿ ಹಾಗೂ ಅವರ ಸ್ನೇಹಿತ ರಿಷವ್‌ ಸಿಂಗ್‌ ಅವರು ಆ. 28ರಂದು ಮಲಗಿದ್ದ ವೇಳೆ ಈ ಘಟನೆ ನಡೆದಿದೆ.

Advertisement

ಮಲಗಿರುವ ವೇಳೆ ಅವರು ಮೈನ್‌ ಡೋರ್‌ ಲಾಕ್‌ ಮಾಡಿರಲಿಲ್ಲ. ಪರಿಣಾಮ ಎಚ್‌ಪಿ ಹಾಗೂ ಏಸರ್‌ ಕಂಪೆನಿಯ ಸುಮಾರು 70 ಸಾವಿರ ರೂ. ಮೌಲ್ಯದ ಲ್ಯಾಪ್‌ಟಾಪ್‌ಗಳನ್ನು ಕಳ್ಳರು ಕಳವು ಮಾಡಿದ್ದಾರೆ.

ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next