Advertisement

ಭಾಲ್ಕಿಯಲ್ಲಿ ಲಂಗೂರ್‌ಗಳು ಕಚ್ಚಿ 25 ಕ್ಕೂಹೆಚ್ಚು ಮಂದಿಗೆ ಗಾಯ

04:28 PM May 24, 2017 | |

ಭಾಲ್ಕಿ : ಇಲ್ಲಿನ ಕಾಕನಾಳದಲ್ಲಿ ಕಪ್ಪು ಮುಖದ ಲಂಗೂರ್‌ ಕೋತಿಗಳು ಸಿಕ್ಕ ಸಿಕ್ಕವರಿಗೆ ಕಚ್ಚಿ ಗಾಯಗೊಳಿಸುತ್ತಿದ್ದು, ಗ್ರಾಮಸ್ಥರು ತೀವ್ರ ಆತಂಕದಲ್ಲಿ ಮನೆಯಿಂದ ಹೊರಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. 

Advertisement

ಮೇ ತಿಂಗಳಿನ ಆರಂಭದಿಂದ 2 ಕೋತಿಗಳು ಮಹಿಳೆಯರು, ಮಕ್ಕಳು, ವೃದ್ಧರೂ ಸೇರಿದಂತೆ 25 ಕ್ಕೂ ಹೆಚ್ಚು ಜನರನ್ನು ಕಚ್ಚಿ ಗಾಯಗೊಳಿಸಿದ್ದು ಗ್ರಾಮದ ಜನರು ಕಂಗಾಲಾಗಿದ್ದಾರೆ. 

ಇದೀಗ ಗ್ರಾಮದಲ್ಲಿ ಎಲ್ಲರೂ ಕೈಯಲ್ಲಿ ಬಡಿಗೆ ಸೇರಿದಂತೆ ಆಯುಧಗಳನ್ನು ಹಿಡಿದು ತಿರುಗುತ್ತಿದ್ದಾರೆ. ಮಹಿಳೆಯರು ಮನೆಯಿಂದ ಹೊರ ಬರಲು ಹೆದರುತ್ತಿದ್ದಾರೆ. 

ಅರಣ್ಯ ಇಲಾಖೆ ಸಿಬಂದಿಗಳು ಕಚ್ಚುವ ಕೋತಿಗಳನ್ನು ಹಿಡಿಯುವ ಕೋತಿಗಳ ಬದಲು ಬೇರೆ ಕೋತಿಯನ್ನು ಹಿಡಿದಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. 

ಶೀಘ್ರದಲ್ಲಿ ಕೋತಿಗಳನ್ನು ಸೆರೆ ಹಿಡಿದು ಸಮಸ್ಯೆಯಿಂದ ಪಾರು ಮಾಡಬೇಕೆಂದು ಗ್ರಾಮಸ್ಥರು ಅರಣ್ಯ ಇಲಾಖೆ ಮತ್ತು ಜನಪ್ರತಿನಿಧಿಗಳಲ್ಲಿ ಕಳಕಳಿಯ ಮನವಿ ಮಾಡಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next