Advertisement

ಭೂಕುಸಿತ: ರಕ್ಷಣಾ ಕಾರ್ಯಾಚರಣೆ ಪ್ರಾತ್ಯಕ್ಷಿಕೆ

02:08 AM Jun 20, 2019 | sudhir |

ಮಂಗಳೂರು: ಭೂಕುಸಿತದ ಸಂದರ್ಭ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮ ಹಾಗೂರಕ್ಷಣಾ ಕಾರ್ಯಗಳ ಬಗ್ಗೆ ಅಣಕು ಕಾರ್ಯಾಚರಣೆ ಕೆಂಜಾರು ಅದ್ಯಪಾಡಿ ಗುಡ್ಡ ಪ್ರದೇಶದಲ್ಲಿ ಬುಧವಾರ ಜರಗಿತು.

Advertisement

ಭೂಕುಸಿತ ಸಂದರ್ಭ ಕೈಗೊಳ್ಳುವ ವಿವಿಧ ರಕ್ಷಣಾ ಕಾರ್ಯಾಚರಣೆಗ ಳನ್ನು ಅಗ್ನಿಶಾಮಕ ದಳ, ಗೃಹರಕ್ಷಕ ದಳ, ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡಗಳು ಪ್ರಸ್ತುತ ಪಡಿಸಿದವು.

ಕಾರ್ಯಾಚರಣೆಯಲ್ಲಿ 13 ಮಂದಿಯನ್ನು ರಕ್ಷಿಸಲಾಯಿತು. ಅಗ್ನಿ ಶಾಮಕದ 40, ಎನ್‌ಡಿಆರ್‌ಎಫ್‌ನ 26, ಗೃಹರಕ್ಷಕದಳದ 20 ಸಿಬಂದಿಪಾಲ್ಗೊಂಡಿದ್ದರು. ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್ ಉಪಸ್ಥಿತರಿದ್ದರು.

ಸಹಾಯಕ ಆಯುಕ್ತ ರವಿಚಂದ್ರ ನಾಯಕ್‌ ಅಣಕು ಪ್ರದರ್ಶನದ ನೋಡಲ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಅಗ್ನಿಶಾಮಕ ದಳದ ಮಂಗಳೂರು ವಲಯ ಮುಖ್ಯಸ್ಥ ಟಿ.ಎನ್‌. ಶಿವಶಂಕರ್‌ ಕಾರ್ಯಾಚರಣೆ ಮಾಹಿತಿ ನೀಡಿದರು. ಜಿಲ್ಲಾ ವಿಪತ್ತು ನಿರ್ವಹಣಾಧಿಕಾರಿ ವಿಜಯಕುಮಾರ್‌ ಅಣಕು ಕಾರ್ಯಾ ಚರಣೆ ಸಂಪರ್ಕ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.

ಅಗ್ನಿಶಾಮಕ ದಳದ ಜಿಲ್ಲಾ ಮುಖ್ಯ ಅಗ್ನಿಶಾಮಕ ಅಧಿಕಾರಿ ಮುಹಮ್ಮದ್‌ ಝುಲ್ಫಿಕರ್‌ ನವಾಝ್, ಗೃಹರಕ್ಷಕ ದಳದ ಡೆಪ್ಯುಟಿ ಕಮಾಂಡೆಟ್ ರಮೇಶ್‌ ಹಾಗೂ ತರಬೇತಿ ಬೋಧಕ ಮಾರ್ಕ್‌ ಸೇರಾ, ಎನ್‌ಡಿಆರ್‌ಎಫ್‌ನಆರ್‌.ಕೆ. ಉಪಾಧ್ಯಾಯ ನೇತೃತ್ವ ವಹಿಸಿದ್ದರು. ಜಿಲ್ಲಾ ಆರೋಗ್ಯಾಧಿಕಾರಿ ರಾಮಕೃಷ್ಣ ರಾವ್‌, ತಾಲೂಕು ವೈದ್ಯಾಧಿಕಾರಿ ನವೀನ್‌ ಕುಲಾಲ್ ಚಿಕಿತ್ಸಾ ಕಾರ್ಯಾಚರಣೆ ಹಾಗೂ ಆಂಬುಲೆನ್ಸ್‌ ನಿರ್ವಹಣೆ ನೇತೃತ್ವ ವಹಿಸಿದ್ದರು.

Advertisement

ವಿದ್ಯಾರ್ಥಿಗಳು, ಸಾರ್ವಜನಿಕರು ಕುತೂಹಲದಿಂದ ಅಣಕು ಕಾರ್ಯಾ ಚರಣೆ ವೀಕ್ಷಿಸಿದರು.

ಪ್ರಕೃತಿ ವಿಕೋಪ ನಿರ್ವಹಣೆಗೆ ಸರ್ವಕ್ರಮ

ಪ್ರಾಕೃತಿಕ ವಿಕೋಪದ ಸಂದರ್ಭ ಸಮರ್ಪಕವಾಗಿ ಕಾರ್ಯಾಚರಣೆ ಕೈಗೊಳ್ಳಲು ಅಣುಕು ಕಾರ್ಯಾಚರಣೆ ಸಹಕಾರಿಯಾಗುತ್ತದೆ. ಅಗ್ನಿಶಾಮಕ ದಳದ ಜತೆಗೆ ಎನ್‌ಡಿಆರ್‌ಎಫ್‌ ಸೇರಿಕೊಂಡು ಕಾರ್ಯಾಚರಣೆ ಮಾಡಿರುವುದು ಹೆಚ್ಚಿನ ರಕ್ಷಣಾ ಕಾರ್ಯದ ಅರಿವು ಮೂಡಲು ಸಾಧ್ಯ ಎಂದು ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್ ತಿಳಿಸಿದರು. ಜಿಲ್ಲಾಧಿಕಾರಿ, ವಿಕೋಪ ಸಂದರ್ಭದಲ್ಲಿ ಸಾರ್ವಜನಿಕರೂ ರಕ್ಷಣ ಕಾರ್ಯಕ್ಕೆ ಸಹಕಾರ ನೀಡಬೇಕು. ಪ್ರಕೃತಿ ವಿಕೋಪ ನಿರ್ವಹಣೆ ಬಗ್ಗೆ ಪೂರಕ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಎಲ್ಲ ಇಲಾಖೆಗಳಿಗೂ ಮುನ್ಸೂಚನೆ ನೀಡಲಾಗಿದೆ ಎಂದರು.
Advertisement

Udayavani is now on Telegram. Click here to join our channel and stay updated with the latest news.

Next