ಕೊರಟಗೆರೆ: ರಾಜ್ಯ ಸದನದಲ್ಲಿ ಒಂದು ದೇಶ ಒಂದು ಚುನಾವಣೆ ಪ್ರಸ್ತಾಪಕ್ಕೆ ವಿರೋಧ ವ್ಯಕ್ತವಾಗಿದ್ದು ಅದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ. ಇನ್ನು ಸದನ ಕಲಾಪಕ್ಕೆ ಮಾಧ್ಯಮಗಳ ನಿಷೇಧ ಪ್ರಜಾಪ್ರಭುತ್ವದಲ್ಲಿ 4ನೇ ಅಂಗವಾದ ಪತ್ರಿಕಾ ಮಾಧ್ಯಮದ ಸ್ವಾತಂತ್ರ್ಯವನ್ನು ಅಡ್ಡಿ ಪಡಿಸಿದಂತಾಗುತ್ತದೆ ಎಂದು ಶಾಸಕ ಡಾ.ಜಿ. ಪರಮೇಶ್ವರ ತಿಳಿಸಿದರು.
ಕೊರಟಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೋರಾ ಹೋಬಳಿ 15 ಗ್ರಾಮಗಳಲ್ಲಿ ವಿವಿಧ ಇಲಾಖೆಗಳ ಎಸ್‌ಸಿಪಿ ಟಿಎಸ್‌ಪಿ ಯೋಜನೆಯಡಿ 2.75 ಕೋಟಿ ರೂ.ಗಳ ಕಾಮಗಾರಿಗೆಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.ಕಾಂಗ್ರೆಸ್‌ನಿಂದ ಜನಧ್ವನಿ ಕಾರ್ಯಕ್ರಮ ಪ್ರಾರಂಭವಾಗಿದ್ದು ರಾಜ್ಯದ ಸಾಕಷ್ಟು ನಾಯ ಕರು, ಈ ಕಾರ್ಯಕ್ರಮದಲ್ಲಿ ಒಟ್ಟಾಗಿ ಶ್ರಮಿಸುತ್ತಿದ್ದೇವೆ. ಆದರೆ, ಹೈಕಮಾಂಡ್ ತನಗೆ ನೆರೆಯ ಕೇರಳ ಚುನಾವಣೆ ಉಸ್ತುವಾರಿ ಸಮಿತಿಯಲ್ಲಿ ಜವಾಬ್ದಾರಿ ನೀಡಿದ್ದು, ಎಲ್ಲರೂ ಪಕ್ಷದ ಕೆಲಸನಿಷ್ಠೆಯಿಂದ ಮಾಡುತ್ತಿದ್ದೇವೆಂದರು.
ಕೊರಟಗೆರೆ ವಿಧಾನಸಭಾ ಕ್ಷೇತ್ರಕ್ಕೆ ಎತ್ತಿನಹೊಳೆ ಮತ್ತು ಹೇಮಾವತಿ ಕುಡಿಯುವ ನೀರಿನ ಯೋಜನೆಯಿಂದ ಕ್ಷೇತ್ರದ ಕೆರೆಗಳಿಗೆನೀರು ತುಂಬಿಸುವ ಕೆಲಸ ತ್ವರಿತವಾಗಿಆಗಬೇಕಿದೆ. ಈ ಭಾಗದ 19 ಕೆರೆಗೆ 9.50ಕೋಟಿ ರೂ.ಗಳ ವೆಚ್ಚದಲ್ಲಿ ಹೇಮಾವತಿ ಕುಡಿಯುವ ನೀರಿನ ಯೋಜನೆ ಮಂಜೂರಾತಿಕೆಲಸ ಪ್ರಾರಂಭಿಸಿ ಕಾರ್ಯರೂಪದಲ್ಲಿದೆ.ಎತ್ತಿನಹೊಳೆ ಯೋಜನೆಯಲ್ಲಿ ಕೆಸ್ತೂರು, ಕೋರಾ, ಬ್ರಹ್ಮಸಂದ್ರ ಕೆರೆಗಳಿಗೆ ನೀರುಒದಗಿಸಲಾಗುವುದೆಂದರು. ಕೈಗಾರಿಕಾ ವಲಯವಾದ ವಸಂತನರಸಾಪುರದಲ್ಲಿ ನೀರು ಸಂಗ್ರಹಣಾ ಘಟಕ ಸ್ಥಾಪಿಸಿ ಶುದ್ಧೀಕರಣ ಮಾಡಿ ಗ್ರಾಮಗಳಿಗೆ ಸರಬರಾಜು ಮಾಡಲಾಗುತ್ತದೆ ಎಂದರು.
ಲೋಕೋಪಯೋಗಿ, ಕೆಆರ್‌ಐಡಿಎಲ್, ಜಿಪಂ, ಗ್ರಾಮೀಣ ಕುಡಿಯುವ ನೀರುನೈರ್ಮಲ್ಯ ಇಲಾಖೆ, ಬೆಸ್ಕಾಂ ಇಲಾಖೆಗಳಡಿ2.75 ಕೋಟಿ ರೂ.ಗಳ ವಿವಿಧ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಆದರೆ ಗ್ರಾಮೀಣರಸ್ತೆಗಳ ಅಭಿವೃದ್ಧಿ ಹಿಂದುಳಿದಿದ್ದು ಲೋಕೋಪಯೋಗಿ ಇಲಾಖೆ ರಸ್ತೆಗಳ ಅಭಿವೃದ್ಧಿ ಚುರುಕಾದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳ ರಸ್ತೆಗಳು ಸೊರಗಿವೆ.ಅವುಗಳ ಅಭಿವೃದ್ಧಿಗೆ ಇಲಾಖೆ ಮೇಲೆ ಒತ್ತಡಹೇರಲಾಗಿದೆ ಎಂದು ತಿಳಿಸಿದರು.
ಪರಿಶಿಷ್ಟ ಜಾತಿ, ಪಂಗಡದವರಿಗೆ ಎಸ್‌ಸಿಪಿ ಟಿಎಸ್‌ಪಿ ಯೋಜನೆಯಡಿ ಸಾಕಷ್ಟು ಮನೆ,ನಿವೇಶನ ಮಂಜೂರು ಮಾಡಲಾಗಿದೆ. ಆದರೆ ಸಾಮಾನ್ಯ ವರ್ಗದವರಿಗೆ ಮನೆ ಮಂಜೂರಾತಿ ಕಷ್ಟಕರವಾಗಿದ್ದು, ಅವರಿಗೂ ವಿಶೇಷವಾದಯೋಜನೆ ತರುವ ಪ್ರಯತ್ನ ಮಾಡಲಾಗುವುದು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅರಕೆರೆ ಶಂಕರ್, ಕೋಡ್ಲಹಳ್ಳಿ ಅಶ್ವತ್ಥನಾರಾಯಣ್, ಗ್ರಾಪಂ ಅಧ್ಯಕ್ಷರಾದ ಚಂದ್ರಕಲಾ, ಶ್ವೇತಾ,
ಮುಖಂಡರಾದ ಕುಂತಿಹಳ್ಳಿ ಗಂಗಾಧರಪ್ಪ,ಚಂದ್ರಶೇಖರ್‌ಗೌಡ, ಎ.ಡಿ. ಬಲರಾಮಯ್ಯ, ದೇವರಾಜು, ಕುಮಾರ್, ರಾಜೇಶ್, ಸಿದ್ದರಾ ಜು, ಕಿರಣ್, ಸಿದ್ದಪ್ಪ, ಚಂದ್ರಶೇಖರ್ ಇದ್ದರು.