ಹೊಳಲ್ಕೆರೆ: ರಾಜ್ಯದ ರೈತರಿಗೆ ಅನ್ಯಾಯವಾಗುವಂತ ಕಾಯ್ದೆಗಳನ್ನು ಕೇಂದ್ರಹಾಗೂ ರಾಜ್ಯ ಸರಕಾರ ಜಾರಿಗೆ ಮುಂದಾಗಿದ್ದಲ್ಲಿವಿಧಾನಸಭೆಗೆ ರಾಜೀನಾಮೆ ನೀಡಿ ರೈತಪರವಾಗಿ ಹೋರಾಟಕ್ಕೆ ನಿಲ್ಲುತ್ತೇನೆ ಎಂದು ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರು ಹಾಗೂ ಶಾಸಕ ಎಂ.ಚಂದ್ರಪ್ಪ ತಿಳಿಸಿದರು.
ತಾಲೂಕಿನ ಉಪ್ಪರಿಗೆನಹಳ್ಳಿಯಲ್ಲಿ ನಬಾರ್ಡ್ ಸಹಯೋಗದಲ್ಲಿ ರೈತ ಉತ್ಪಾದಕರ ಕಂಪನಿ ಕಚೇರಿ ಉದ್ಘಾಟನೆ ಹಾಗೂ ಎಚ್.ಡಿ.ಪುರದ ಭಾಗದಲ್ಲಿ 8.5.ಕೋಟಿ ವಿವಿಧ ಹಳ್ಳಿಗಳಲ್ಲಿ ವಿವಿಧಕಾಮಗಾರಿಗೆ ಭೂಮಿಪೂಜೆ ಸಲ್ಲಿಸಿ ಮಾತನಾಡಿದಅವರು, ರೈತರು ಎಪಿಸಿಎಂಸಿ ಕಾಯ್ದೆ, ಭೂ ಸ್ವಾಧೀನ ತಿದ್ದುಪಡಿ ಕಾಯ್ದೆ ರೈತರಿಗೆ ಅನ್ಯಾಯಮಾಡುತ್ತವೆ ಎನ್ನುವ ರೈತರ ನಿಲುವು ಸರಿಯಲ್ಲ.ಕೇಂದ್ರ ಹಾಗೂ ರಾಜ್ಯ ಸರಕಾರ ರೈತರ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಕಾಯ್ದೆಗಳನ್ನು ಪ್ರಯೋಗಿಕವಾಗಿ ಜಾರಿಗೆ ಮುಂದಾಗಿವೆ. ಲೋಷದೋಷಗಳು ಕಂಡು ಬಂದಲ್ಲಿ ಸೂಕ್ತ ತಿದ್ದುಪಡಿಸಿ ಮಾಡಲಿದೆ. ರೈತರು ಕಾಯ್ದೆಗಳನ್ನು ಜಾರಿಗೆ ತರುವ ಮೊದಲೇ ಸರಿಯಲ್ಲ ಎನ್ನುವ ನಿಲುವು ಬೇಡ ಎಂದರು.
ಕ್ಷೇತ್ರದ 493 ಹಳ್ಳಿಗಳಿಗೂ ಶಾಶ್ವತ ಕುಡಿಯುವ ನೀರಿನ ಸೌಲಭ್ಯಕ್ಕೆ 450 ಕೋಟಿ ಹಣದಲ್ಲಿ ಮಾರಿಕಣಿವೆಯಿಂದ ಪೈಪ್‌ಲೈನ್ ಮೂಲಕಶುದ್ಧ ನೀರನ್ನು ಮನೆ ಬಾಗಿಲಿನ ನಲ್ಲಿಗೆ ಪೂರೈಕೆಗೆ ಒತ್ತು ನೀಡಿದೆ. ರೈತರ ವಿದ್ಯುತ್ ಸಮಸ್ಯೆಯಮುಕ್ತಿಗೆ 220 ಕೆವಿ ಸ್ಥಾವರ ನಿರ್ಮಾಣಕ್ಕೆ 500ಕೋಟಿ ಹಣದಲ್ಲಿ ಶರಾವತಿ ಯಿಂದ ನೇರವಾಗಿ ಪೂರೈಕೆಗೆ ಒತ್ತು ನೀಡಿದೆ. ಕ್ಷೇತ್ರದ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ ಕೆಲಸಕ್ಕೆ ಪೈಪ್‌ಲೈನ್ ಹಾಕುವಕೆಲಸಕ್ಕೆ ಚಾಲನೆ ಸಿಕ್ಕಿದೆ. ಬರಗಾಲದ ಪ್ರದೇಶದ ಎಚ್.ಡಿ. ಪುರ ಎಲ್ಲಾ ಕೆರೆಗೆ ಅಪ್ಪರ್ ಭದ್ರಾ ನೀರುತುಂಬಿಸಲು ಹೆಚ್ಚುವರಿ 150 ಕೋಟಿ ಅನುದಾನತಂದಿದೆ. ಚೆಕ್ ನಿರ್ಮಾಣಕ್ಕೆ 250 ಕೋಟಿನೀಡಿದೆ. ಅಸ್ಪತ್ರೆಗೆ 12 ಕೋಟಿ, 200ಶಾಲಾಕೊಠಡಿ ಸೇರಿದಂತೆ ಕ್ಷೇತ್ರದ ಆಭಿವೃದ್ಧಿ 2 ಸಾವಿರಕೋಟಿ ಅನುದಾನವನ್ನು ಸಾಮಾನ್ಯ ಶಾಸಕನಾಗಿ ತಂದಿದ್ದೇನೆ. ತೃಪ್ತಿ ಇಲ್ಲ. ಇನ್ನಷ್ಟು ಕೆಲಸ ಮಾಡಿ ಮತದಾರರ ಋಣ ತೀರಿಸುವ ಹಂಬಲವಿದೆ ಎಂದರು.
ಜಿ.ಪಂ ಸದಸ್ಯ ಡಿ.ಕೆ.ಶಿವಮೂರ್ತಿ ಮಾತನಾಡಿ, ಹಿಂದುಳಿದ ಪ್ರದೇಶವಾಗಿದ್ದು,ಹೆಚ್ಚಿನ ಅಭಿವೃದ್ಧಿಗೆ ಒತ್ತು ನೀಡಬೇಕಾಗಿದೆ. ಈನಿಟ್ಟಿನಲ್ಲಿ ಶಾಸಕರು ಶ್ರಮಿಸುತ್ತಿದ್ದಾರೆ ಎಂದರು.ರೈತರ ಸಂಘದ ರಾಜ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ ಮಾತನಾಡಿ, ರೈತರ ಸಮಸ್ಯೆಗಳಿಗೆ ಶಾಸಕ ಎಂ.ಚಂದ್ರಪ್ಪ ಧ್ವನಿಯಂತೆ ಕೆಲಸಮಾಡುವ ನಿರೀಕ್ಷೆ ಇದೆ. ಕೆರೆಗಳಿಗೆ ನೀರುತುಂಬಿಸುವುದರ ಜತೆ ಕೃಷಿ ನೀರಾವರಿಗೆ ಆದ್ಯತೆನೀಡಬೇಕು. ವೇದಾವತಿ ನೀರನ್ನು ಕೃಷಿ ಪ್ರದೇಶಕ್ಕೆ ಹರಿಸುವ ಕೆಲಸ ಮಾಡಲು ಶಾಸಕರು ಹೋರಾಟ ನಡೆಸುವ ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲಾ ನಬಾರ್ಡ್ ವ್ಯವಸ್ಥಾಪಕಿ ಕವಿತ, ರೈತ ಉತ್ಪಾದಕರ ಕಂಪನಿ ಅಧ್ಯಕ್ಷ ಜಿ.ಸಿ.ನಾಗರಾಜ್, ಸಹಾಯಕ ಕೃಷಿ ಅ ಧಿಕಾರಿ ಪ್ರಕಾಶ್, ಸಹಾಯಕ ತೋಟಗಾರಿಕೆ ಅಧಿಕಾರಿ ಕುಮಾರನಾಯ್ಕ, ತಾ.ಪಂ ಸದಸ್ಯ ಪರಮೇಶ್ವರಪ್ಪ, ಬಿಜೆಪಿ ಮುಖಂಡ ಚಂದ್ರಪ್ಪ, ಎಚ್.ಡಿ. ರಂಗಯ್ಯ,ಇಂಜನಿಯರ್ ಮಹಾಬಲೇಶ್ವರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.