ಸುರತ್ಕಲ್ : ಚೇಳ್ಯಾರು ರೈಲ್ವೇ ಸೇತುವೆ ಬಳಿ ತಡೆಗೋಡೆ ನಿರ್ಮಾಣದ ವೇಳೆ ಜ. 12ರಂದು ಕಾರ್ಮಿಕನೋರ್ವ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಆಂಧ್ರ ಮೂಲದ ಗುತ್ತಿಗೆದಾರ ರಾಮಚಂದ್ರ ಸೂಪರ್‌ವೈಸರ್ ಆದ ಮೋಹನ ವಿಷ್ಣು ನಾಯ್ಕ ಹಾಗೂ ನಾಗರಾಜ ನಾರಾಯಣ ನಾಯ್ಕ ಮೇಲೆ ನಿರ್ಲಕ್ಷ್ಯ ವಹಿಸಿದ ಕಾರಣಕ್ಕೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರೈಲು ಹಾದು ಹೋಗುವ ಸಂದರ್ಭ ಕಂಪನದ ಒತ್ತಡಕ್ಕೆ ಮಣ್ಣು ಕುಸಿದು ಬೀಳುವ ಮುನ್ಸೂಚನೆ ಇದ್ದರೂ, ಕೆಲಸ ಮಾಡುವ ಕೆಲಸಗಾರರ ಸುರಕ್ಷತೆಗಾಗಿ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಂಡಿರಲಿಲ್ಲ ಎಂದು ಆರೋಪಿಸಲಾಗಿದೆ. ಸೂಪರ್‌ವೈಸರ್‌ಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಕೆಲಸ ಮಾಡುತ್ತಿದ್ದ 12 ಮಂದಿ ಕಾರ್ಮಿಕರಲ್ಲಿ ಕಾರ್ಮಿಕ ಓಬಳೇಶಪ್ಪ ಮೃತಪಟ್ಟಿದ್ದು, ಬಳ್ಳಾರಿಯ ಗೋವಿಂದಪ್ಪ, ಸಂಜೀವ ಹಾಗೂ ಆತನ ಪತ್ನಿ ತೃಪ್ತಿ ಯಾನೆ ರೇಖಾ ಅವರಿಗೆ ಗಾಯವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ಶ್ರೀಕೃಷ್ಣ ಮಠದಲ್ಲಿ ಸಂಭ್ರಮದ ಚೂರ್ಣೋತ್ಸವ