Advertisement

ಕೊಡಗು ಜಿಲ್ಲೆಯಲ್ಲಿ ಮಳೆ ಇಳಿಮುಖ : ಮುಂದುವರಿದ ಗುಡ್ಡ ಕುಸಿತ

08:16 AM Aug 11, 2022 | Team Udayavani |

ಮಡಿಕೇರಿ/ಅರಂತೋಡು : ಕೊಡಗು ಜಿಲ್ಲೆ ಯಾದ್ಯಂತ ಮಳೆಯ ಆರ್ಭಟ ಕಡಿಮೆಯಾಗಿದ್ದರೂ ಹಾನಿ ಮುಂದುವರಿದಿದೆ. ಗುಡ್ಡಗಳಿಂದ ನೀರು ಹರಿಯುತ್ತಿದ್ದು, ಅಲ್ಲಲ್ಲಿ ಕುಸಿಯುತ್ತಿದೆ.

Advertisement

ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಮದೆನಾಡು ಬಳಿ ಬಿರುಕು ಬಿಟ್ಟಿರುವ ಬೃಹತ್‌ ಗುಡ್ಡ ಬೀಳುವ ಆತಂಕವನ್ನು ಸೃಷ್ಟಿಸಿದೆ. ಈ ಹಿನ್ನೆಲೆ ಆ. 10 ಮತ್ತು 11ರ ರಾತ್ರಿ 8.30 ಗಂಟೆಯಿಂದ ಬೆಳಗ್ಗೆ 6.30 ಗಂಟೆಯವರೆಗೆ ಮಡಿಕೇರಿ-ಸಂಪಾಜೆ ಮಾರ್ಗದಲ್ಲಿ ಎಲ್ಲ ವಾಹನಗಳ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಡಾ| ಬಿ.ಸಿ. ಸತೀಶ ಆದೇಶ ಹೊರಡಿಸಿದ್ದಾರೆ.

ಹಗಲಿನ ವೇಳೆಯಲ್ಲಿ ಎಂದಿನಂತೆ ವಾಹನಗಳು ಸಂಚರಿಸಲಿವೆ. ರಾತ್ರಿ ವೇಳೆ ಸಂಪಾಜೆ ಚೆಕ್‌ ಪೋಸ್ಟ್‌ ಗೇಟ್‌ ಬಂದ್‌ ಆಗಿರುತ್ತದೆ.

ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ ಹೋಬಳಿಯಾ ದ್ಯಂತ ಧಾರಾಕಾರ ಮಳೆ ಸುರಿಯುತ್ತಿದ್ದು, ತೋಳೂರು ಶೆಟ್ಟಳ್ಳಿ ಗ್ರಾ.ಪಂ.ವ್ಯಾಪ್ತಿಯ ಹರಪಳ್ಳಿ ಗ್ರಾಮದಲ್ಲಿ ಭೂ ಕುಸಿತ ಸಂಭವಿಸಿದ್ದು, ಗ್ರಾಮಸ್ಥರು ಆತಂಕದಲ್ಲಿದ್ದಾರೆ. ಕೃಷಿಕ ಸೋಮಯ್ಯ ಅವರ ಮನೆಯ ಸಮೀಪದಲ್ಲೇ ಭೂಮಿ ಕುಸಿಯುತ್ತಿದ್ದು, ದಂಪತಿ ಮನೆಯನ್ನು ತೊರೆದಿದ್ದಾರೆ. ಪಕ್ಕದಲ್ಲೇ ಎಚ್‌.ಆರ್‌. ರವಿಕುಮಾರ್‌ ಮತ್ತು ಎಚ್‌.ಎನ್‌. ಈರಪ್ಪ ಅವರ ಮನೆಗಳಿದ್ದು, ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಪಿಡಿಒ ಮಂಜುಳಾ ಸೂಚಿಸಿದ್ದಾರೆ.

ಹಲವು ಮನೆಗಳಿಗೆ ಹಾನಿ
ಮಂಗಳವಾರ ರಾತ್ರಿ ನಗರದ ಸ್ವೀವರ್ಟ್‌ ಹಿಲ್‌ ಬಳಿ, ನಗರದ ಕಸವಿಲೇವಾರಿ ಪ್ರದೇಶದ ಬಳಿಯ ಬೆಟ್ಟ ಭಾರೀ ಪ್ರಮಾಣದಲ್ಲಿ ಕುಸಿದಿದೆ. ಹೊನವಳ್ಳಿ ಗ್ರಾಮದ ಗಂಗಾಧರ್‌ ಅವರ ಮನೆ ಮೇಲೆ ಮರ ಬಿದ್ದಿದೆ. ಮದೆ ಗ್ರಾ.ಪಂ. ವ್ಯಾಪ್ತಿಯ ಬೆಟ್ಟತ್ತೂರು ಆನಂದ ಅವರ ಮನೆ, ಸೋಮವಾರಪೇಟೆ ಯಡೂರು ಗ್ರಾಮದ ರಾಣಿ ಅವರ ಮನೆ ಕುಸಿದಿದೆ.

Advertisement

ಇದನ್ನೂ ಓದಿ : ಪ್ರವೀಣ್‌ ಹಂತಕರಿಗೆ ತೆರೆಮರೆಯಲ್ಲಿ ರಕ್ಷಣೆ ? ಆರು ಜಿಲ್ಲೆಗಳಲ್ಲಿ ಹರಡಿರುವ ಹಂತಕರ ಅಡಗು ತಾಣ

Advertisement

Udayavani is now on Telegram. Click here to join our channel and stay updated with the latest news.

Next