Advertisement

ಜೋಡುಪಾಲ ಬಳಿ ಭೂ ಕುಸಿತ: ಮನೆ ಜಖಂ

09:13 AM Jul 22, 2019 | keerthan |

ಸುಳ್ಯ : ಜೋಡುಪಾಲ ಬಳಿ ಗುಡ್ಡವೊಂದು ಕುಸಿದ ಪರಿಣಾಮ ನಿರ್ಮಾಣ ಹಂತದಲ್ಲಿರುವ  ವೀರೆಂದ್ರ ಎಂಬವರ ಮನೆ ಜಖಂಗೊಂಡಿದೆ.

Advertisement

ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಗುಡ್ಡ ಕುಸಿತದಿಂದ ನಿರ್ಮಾಣ ಹಂತದ ಮನೆ ಜಖಂಗೊಂಡಿದೆ. ಅಲ್ಲದೇ ಮನೆಯ ಮೇಲೆ ಮಣ್ಣು ಕುಸಿದಿದೆ.

ಕಳೆದ ವರ್ಷ ಇಲ್ಲಿ ಭಾರಿ ಮಳೆ ಸುರಿದು ಗುಡ್ಡ ಕುಸಿತ ಸಂಭವಿಸಿದ ಹಿನ್ನೆಲೆಯಲ್ಲಿ ಅಲ್ಲಿನ ಜಾಗದ ವಾಸ್ತವ ಸ್ಥಿತಿ ಬಗ್ಗೆ ಭೂ ವಿಜ್ಞಾನಿಗಳು ಅಧ್ಯಯನ ನಡೆಸಿದ್ದರು. ಬಳಿಕ ಜೋಡುಪಾಲ ಬಳಿಯ ಇನ್ನೂ ಕೆಲವು ಪ್ರದೇಶಗಳಲ್ಲಿ ಗುಡ್ಡ ಕುಸಿಯಬಹುದು ಎನ್ನುವ ಎಚ್ಚರಿಕೆ ನೀಡಿದ್ದರು.

ಆದರೆ ಈ ಬಾರಿ ಮಳೆ ತೀವ್ರ ಪ್ರಮಾಣದಲ್ಲಿ ಬಾರದಿದ್ದರೂ ಗುಡ್ಡ ಕುಸಿದಿದೆ. ಇದು ಅಲ್ಲಿನ ನಿವಾಸಿಗಳಿಗೆ ಮತ್ತಷ್ಟು ಆತಂಕ ಸೃಷ್ಟಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next