Advertisement

ಭೂಮಿ ಮರಳಿಸಿ: ಅರಣ್ಯ ಇಲಾಖೆಗೆ ಸೂಚನೆ

11:38 PM Nov 16, 2021 | Team Udayavani |

ಬೆಂಗಳೂರು: ಚಕ್ರಾ, ಸಾವೇಹಕ್ಲು ಹಾಗೂ ಮಾಣೆ ಯೋಜನೆಗಳಿಗೆ ಸಂಬಂಧಿಸಿ ಅರಣ್ಯ ಇಲಾಖೆಯು ಅನಧಿಕೃತವಾಗಿ ನೋಟಿಫಿಕೇಶನ್‌ ಮಾಡಿರುವ‌ ಭೂ ಪ್ರದೇಶವನ್ನು ಕಂದಾಯ ಇಲಾಖೆಗೆ ಹಸ್ತಾಂತರ ಮಾಡುವಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

Advertisement

ಅರಣ್ಯ ಇಲಾಖೆ ಅನಧಿಕೃತವಾಗಿ ವಶಪಡಿಸಿರುವ ಭೂಮಿಯನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸುವ ಕುರಿತು ಮಂಗಳವಾರ ಅರಣ್ಯ ಸಚಿವ ಉಮೇಶ್‌ ಕತ್ತಿ ಹಾಗೂ ಅರಣ್ಯಾಧಿಕಾರಿ ಜತೆಗಿನ ಸಭೆಯಲ್ಲಿ ಮಾತನಾಡಿದ ಅವರು, ಅರಣ್ಯ ಇಲಾಖೆ ವಶದಲ್ಲಿರುವ ಅನ ಧಿಕೃತ ಭೂಮಿಯಲ್ಲಿ ಈಗಾ ಗಲೇ ಜನವಸತಿಯ ಪ್ರದೇಶ ವಾಗಿದೆ. ಇಲ್ಲಿ ಶಾಲೆ, ಆಸ್ಪತ್ರೆ ಹಾಗೂ ಇನ್ನಿತರ ಸರಕಾರಿ ಸಾರ್ವಜನಿಕ ಸೇವೆ ಪ್ರಾರಂಭವಾಗಿದೆ. ಕಳೆದ ಮೂರು ದಶಕಗಳಿಗೂ ಹೆಚ್ಚಿನ ಸಮಯದಿಂದ ನನೆಗುದಿಗೆ ಬಿದ್ದಿರುವ ಜ್ವಲಂತ ಸಮಸ್ಯೆಗೆ ಪರಿಹಾರ ದೊರಕಿಸಬೇಕು ಎಂದು ಹೇಳಿದರು.

ಇದನ್ನೂ ಓದಿ:ಬೆಂಗಳೂರು ಮೆಟ್ರೋ ರೈಲು ಸಂಚಾರ ಅವಧಿ ವಿಸ್ತರಣೆ

ಅರಣ್ಯ ಸಚಿವ ಉಮೇಶ್‌ ಕತ್ತಿ ಮಾತ ನಾಡಿ, ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಸಮಸ್ಯೆಗೆ, ಪರಿಹಾರ ಕಂಡುಕೊಳ್ಳಲು ಅಧಿಕಾರಿಗಳಿಗೆ ನಿರ್ದೇಶಿಸಿದರು. ಜತೆಗೆ ಅಗತ್ಯವಿದ್ದರೆ ಸಂಪುಟ ಸಭೆಯಲ್ಲಿಯಲ್ಲಿ ಪ್ರಸ್ತಾವಿಸಲಾಗು ವುದು ಎಂದು ತಿಳಿಸಿದರು.ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌ ಸಹಿತ ಪ್ರಮುಖರಿದ್ದರು.

 

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next