Advertisement

ಹೊಸ ಬಡಾವಣೆ ನಿರ್ಮಾಣಕ್ಕೆ ಸಹಕಾರ

04:53 PM Nov 08, 2020 | Suhan S |

ಹಾಸನ: ನಗರದ ಹೊರವಲಯದ ಬೂವನಹಳ್ಳಿ, ಕೆಂಚಟ್ಟಹಳ್ಳಿ, ಗೇಕರವಳ್ಳಿ, ಸಮುದ್ರವಳ್ಳಿ ಗ್ರಾಮಗಳ 1160 ಎಕರೆ ಪ್ರದೇಶದಲ್ಲಿ 50:50ರ ಅನುಪಾತದಲ್ಲಿ ನಿವೇಶನ ಹಂಚಿಕೆಯೊಂದಿಗೆ ಹೊಸ ಬಡಾವಣೆ ನಿರ್ಮಾಣದ ಹಾಸನ ನಗರಾಭಿವೃದ್ಧಿ ಪ್ರಾಧಿಕಾರ (ಹುಡಾ)ದಕನಸು ಸಾಕಾರವಾಗುತ್ತಿದೆ.

Advertisement

ನಗರದಎಂ.ಜಿ. ರಸ್ತೆಯವಿಶ್ವೇಶ್ವರಯ್ಯಭವನದಲ್ಲಿ ಪ್ರಾಧಿಕಾರದ ಪದಾಧಿಕಾರಿಗಳು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಶಾಸಕ ಪ್ರೀತಂ ಜೆ.ಗೌಡ ಶುಕ್ರವಾರ ಸಂಜೆ ಭೂ ಮಾಲಿಕರೊಂದಿಗೆ ನಡೆಸಿದ ಸಭೆ ಯಶಸ್ವಿಯಾಗಿದ್ದು, ಸರ್ಕಾರ ಅನುಮೋದನೆ ನೀಡಿದರೆ ನಗರ ಹೊರ ವಲಯದಲ್ಲಿ ಮತ್ತೂಂದು ಬೃಹತ್‌ ವಸತಿ ಬಡಾವಣೆ ತಲೆ ಎತ್ತುವ ಸಾಧ್ಯತೆಯಿದೆ.

ಅರಸೀಕೆರೆ ರಸ್ತೆಯ ಎಸ್‌ಎಂ.ಕೃಷ್ಣ ಉಪನಗರಕ್ಕೆ ಹೊಂದಿಕೊಂಡಂತೆ ಬಿ.ಎಂ.ರಸ್ತೆ ಹೇಮಗಂಗೋತ್ರಿ ವರೆಗೂ ನೂತನ ಬಡಾವಣೆ ನಿರ್ಮಾಣಕ್ಕೆ ನಗರಾಭಿವೃದ್ಧಿ ಪ್ರಾಧಿಕಾರ ಯೋಜಿಸಿದ್ದು, 1160ಕ್ಕೂ ಹೆಚ್ಚು ಎಕರೆ ಪ್ರದೇಶದೊಂದಿಗೆವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ 2006-07ನೇ ಸಾಲಿನಲ್ಲಿ ಹೆಚ್ಚುವರಿಯಾಗಿ ಸ್ವಾಧೀನ ಪಡಿಸಿಕೊಳ್ಳಲಾಗಿರುವ 447 ಎಕರೆ ಪ್ರದೇಶವನ್ನು ಹೊಸ ಬಡಾವಣೆ ನಿರ್ಮಾಣಕ್ಕೆ ಬಳಸಿಕೊಳ್ಳುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು.

ನಿವೇಶನ ಗುರುತಿಸಿ: ಸಭೆಯಲ್ಲಿ ಮೊದಲಿಗೆ ಕೆಲ ರೈತರು ಭೂಮಿ ನೀಡಲು ವಿರೋಧ ವ್ಯಕ್ತಪಡಿಸಿದರೂ, ಶಾಸಕ ಪ್ರೀತಂ ಜೆ.ಗೌಡ ರೈತರ ಮನವೊಲಿಸಿದರು. ಅಂತಿಮವಾಗಿ ಸಭೆಯಲ್ಲಿದ್ದ ಬಹುತೇಕ ರೈತರು ಮಂಡಿಸಿದ ಹಲವು ಬೇಡಿಕೆಗಳ ಈಡೇರಿಸಲು ಶಾಸಕರು ಒಪ್ಪಿದ್ದರಿಂದ ಬಡಾವಣೆ ನಿರ್ಮಾಣಕ್ಕೆ ಭೂ ಮಾಲಿಕರು ಸಮ್ಮತಿಸಿದರು. ತ್ವರಿತವಾಗಿ ಬಡಾವಣೆ ನಿರ್ಮಾಣ ಆರಂಭಿಸಿ ತಮ್ಮ ಪಾಲಿನ ಶೇ.50 ನಿವೇಶನ ಗುರ್ತಿಸಬೇಕು ಎಂದು ಹೇಳಿದರು.

24,000 ನಿವೇಶನ: ಹುಡಾ ರೂಪಿಸಿರುವ ಯೋಜನೆಯ ಪ್ರಕಾರ 1160 ಎಕರೆಯಲ್ಲಿ ವಿವಿಧ ಅಳತೆಯ ಒಟ್ಟು 24, 000 ನಿವೇಶನ ನಿರ್ಮಾಣವಾಗಲಿದ್ದು, ಅದರಲ್ಲಿ 12,000 ಸಾವಿರ ನಿವೇಶನಗಳು ಭೂ ಮಾಲಿಕರಿಗೆ ಮತ್ತು 12,000 ನಿವೇಶನಗಳು ಹಾಸನ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಲಭ್ಯವಾಗಲಿವೆ.

Advertisement

ಭೂ ಮಾಲಿಕರ ಬೇಡಿಕೆಗೆ ಪ್ರಾಧಿಕಾರ ಅಸ್ತು: ಹೊಸ ಬಡಾವಣೆ ನಿರ್ಮಾಣಕ್ಕೆ ಭೂಮಿ ನೀಡುವ ಭೂಮಿಯಲ್ಲಿ ರೈತರ ಕೊಳವೆ ಬಾವಿಗಳಿದ್ದರೆ ಪ್ರತಿ ಕೊಳವೆ ಬಾವಿಗೂ 1,25,000 ರೂ. ಪರಿಹಾರ, ಕೋಳಿ ಫಾರಂ, ರೇಷ್ಮೆ ಫಾರಂ ಕಳೆದುಕೊಳ್ಳುವ ರೈತರಿಗೆ ಚದುರಕ್ಕೆ 20 ಸಾವಿರ ರೂ. ಪರಿಹಾರ ನೀಡಲು ಪ್ರಾಧಿ ಕಾರವು ಸಮ್ಮತಿಸಿದೆ. ತೆಂಗಿನ ಮರಕ್ಕೆ ಪರಿಹಾರ ನೀಡುವ ವಿಷಯವಾಗಿ ತೀವ್ರ ಚರ್ಚೆ ನಡೆಯಿತು. ಅಂತಿಮವಾಗಿ ತೆಂಗಿನ ಮರವೊಂದಕ್ಕೆ12 ಸಾವಿರ ರೂ. ಹಾಗೂ ಇನ್ನಿತರೆ ಮರಗಳಿಗೆ ರೈತರು ಹಾಗೂ ಪ್ರಾಧಿಕಾರದ ಅಧಿಕಾರಿಗಳ ಪರಸ್ಪರ ಚರ್ಚಿಸಿ ದರ ನಿಗದಿ ಮಾಡಲು ಸಭೆಯಲ್ಲಿ ನಿರ್ಣಯ  ಕೋವಿಡ್ ಸೋಂಕು ಇಳಿಕೆ

ವಿಮಾನ ನಿಲ್ದಾಣ ಜಾಗದಲ್ಲಿ ನಿವೇಶನ :

ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಉದ್ದೇಶಿತ ಹೊಸ ಬಡಾವಣೆ ನಿರ್ಮಾಣಕ್ಕೆ1160ಕ್ಕೂ ಹೆಚ್ಚು ಎಕರೆ ಭೂಮಿ ಸರ್ವೆ ಮಾಡಲಾಗಿದೆ. ಇದರೊಟ್ಟಿಗೆಕಳೆದ13 ವರ್ಷಗಳ ಹಿಂದೆ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಂಡಿರುವ447 ಎಕರೆ ಭೂಮಿಯಲ್ಲಿಯೂ ನಿವೇಶನ ನಿರ್ಮಾಣದ ಬಗ್ಗೆ ಹುಡಾ ಜತೆ ಭೂ ಮಾಲಿಕರೊಂದಿಗೆ ನಡೆದ ಸಭೆಯಲ್ಲಿ ಚರ್ಚೆ ನಡೆಯಿತು.546 ಎಕರೆ ಭೂಮಿಗೆ ಪರಿಹಾರ ನೀಡಿ ವಿಮಾನ ನಿಲ್ದಾಣಕ್ಕೆ ರೈತರಿಂದ ಭೂಮಿ ವಶಕ್ಕೆ ಪಡೆಯಲಾಗಿದೆ. ಆದರೆ,2006-07ರಲ್ಲಿ ಮತ್ತೆ ಹೆಚ್ಚುವರಿಯಾಗಿ 447 ಎಕರೆ ಜಾಗ ಸ್ವಾಧೀನಪಡಿಸಿಕೊಳ್ಳಲಾಗಿದೆ. ಆದರೆ, ಭೂ ಮಾಲಿಕರಿಗೆ ಪರಿಹಾರ ನೀಡಿಲ್ಲ. ಈಗ ವಿಮಾನ ನಿಲ್ದಾಣಕ್ಕೆ ಹೆಚ್ಚುವರಿ ಭೂಮಿಯ ಅಗತ್ಯತೆ ಇಲ್ಲ. ರೈತರ ಆಶಯದಂತೆ ಅಲ್ಲೂ ಬಡಾವಣೆ ನಿರ್ಮಾಣಕ್ಕೆಕ್ರಮಕೈಗೊಳ್ಳಲಾಗುವುದು ಎಂದು ಶಾಸಕ ಪ್ರೀತಂ ಜೆ.ಗೌಡ ಭರವಸೆ ನೀಡಿದರು.

ನಿವೇಶನ ಕೋರಿ 57 ಸಾವಿರ ಅರ್ಜಿ : ಅರಸೀಕೆರೆ ರಸ್ತೆಯ ಸಂಕೇನಹಳ್ಳಿ, ದೊಡ್ಡಪುರ ಬಳಿ ಎಸ್‌ಎಂಕೆ ನಗರ ಬಡಾವಣೆ ನಿರ್ಮಾಣದ ಬಳಿಕ ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನಗಳಿಗೆ ಹೆಚ್ಚು ಬೇಡಿಕೆ ಸೃಷ್ಟಿಯಾದ ಹಿನ್ನೆಲೆಯಲ್ಲಿ ಆ ಬಡಾವಣೆಗೆ ಹೊಂದಿಕೊಂಡಂತೆ1150ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಮತ್ತೂಂದು ಬಡಾವಣೆ ನಿರ್ಮಿಸುವ ಗುರಿಯನ್ನು ಹುಡಾ ಹೊಂದಿತ್ತು. ಈ ಸಂಬಂಧ ಮೂರು ತಿಂಗಳ ಹಿಂದೆ ನಿವೇಶನಗಳ ಬೇಡಿಕೆ ಸಮೀಕ್ಷೆ ನಡೆಸಿದಾಗ 57,000ಕ್ಕೂ ಹೆಚ್ಚು ಮಂದಿ ನಿವೇಶನಗಳಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಹಾಗಾಗಿ ಬೂವನಹಳ್ಳಿ,ಕೆಂಚಟಹಳ್ಳಿ, ಗೇಕರವಳ್ಳಿ ಹಾಗೂ ಸಮುದ್ರವಳ್ಳಿ ಭಾಗದ ರೈತರ ಭೂಮಿಗಾಗಿ ಪ್ರಾಧಿಕಾರವುಕಸರತ್ತು ನಡೆಸಿತ್ತು. ಈಗ ನೂತನ ಬಡಾವಣೆ ಯೋಜನೆ ನಿರ್ಮಾಣದ ಬೆಳವಣಿಗೆ ಅಂತಿಮ ಹಂತ ತಲುಪಿದ್ದು, ರೈತರು ಹಾಗೂ ಪ್ರಾಧಿಕಾರದ ನಡುವೆ ಸಕರಾತ್ಮಕವಾಗಿ ಬೆಳವಣಿಗೆಗಳು ನಡೆದಿವೆ.

Advertisement

Udayavani is now on Telegram. Click here to join our channel and stay updated with the latest news.

Next