Advertisement

ಗೋವಾ: ಸುಯೆಲ್ಲಾ ಪೂರ್ವಿಕರ ಜಮೀನು ಕಬಳಿಕೆ; ಆರೋಪ

07:59 PM Sep 10, 2022 | Team Udayavani |

ಪಣಜಿ: ಬ್ರಿಟನ್‌ ಗೃಹ ಸಚಿವೆ ಸುಯೆಲ್ಲಾ ಬ್ರೇವರ್‌ಮ್ಯಾನ್‌ ಅವರ ತಂದೆ ಕ್ರಿಸ್ಟಿ ಫೆರ್ನಾಂಡಿಸ್‌ ಅವರ ಪೂರ್ವಜರ 2 ಜಮೀನು ಕಬಳಿಕೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

Advertisement

ಉತ್ತರ ಗೋವಾದ ಅಸ್ಸಾಗೋದಲ್ಲಿ  13,900 ಚದರ ಮೀಟರ್‌ ಜಾಗವನ್ನು ಅಪರಿಚಿತ ವ್ಯಕ್ತಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ಜುಲೈನಲ್ಲಿ ವಕೀಲರೊಬ್ಬರ ಮೂಲಕ ಅಪರಿಚಿತರು ಕೆಲಸ ಮಾಡಿಸಿದ್ದಾರೆ. ಆಗಸ್ಟ್‌ನಲ್ಲಿ ವಿಷಯ ತಮ್ಮ ಗಮನಕ್ಕೆ ಬಂದಿದೆ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ವಿಷಯ ಗೊತ್ತಾಗುತ್ತಿದ್ದಂತೆ ಪೊಲೀಸರು ಗಂಭೀರವಾಗಿ ತನಿಖೆ ಶುರು ಮಾಡಿದ್ದಾರೆ. ಈ ಅಂಶವನ್ನು ಒತ್ತುವರಿ ಪ್ರಕರಣಗಳಿಗಾಗಿ ರಚನೆ ಮಾಡಲಾಗಿರುವ ವಿಶೇಷ ತನಿಖಾ ದಳದ ಎಸ್‌ಪಿ ನಿಧಿ ವಾಸನ್‌ ಕೂಡ ಖಚಿತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next