ಬೇಲೂರು: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳು ತಾಲೂಕು ಪಂಚಾಯಿತಿ ಕಚೇರಿಯಲ್ಲಿರುವ ಶಾಸಕ ಲಿಂಗೇಶ್ ಅವರ ಕಚೇರಿ ಮುಂದೆ ಬಡಿದಾಡಿ ಗಾಯಗೊಂಡಿದ್ದಾರೆ. ಇಬ್ಬರಿಗೂ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಆಸ್ಪತ್ರೆಗೆ ಕಳುಸಲಾಗಿದೆ.
ತಾಲೂಕಿನ ರಾಯಾಪುರ ಗ್ರಾಮದವರಾದ ಎಪಿಎಂಸಿ ಸದಸ್ಯ ನಾಗರಾಜು ಹಾಗೂ ಅದೇ ಗ್ರಾಮದ ವಸಂತ್ ಎಂಬುವವರೆ ಜಮೀನು ವಿವಾದದಲ್ಲಿ ಗಾಯ ಗೊಂಡಿದ್ದಾರೆ.
ಜಮೀನು ವಿವಾದ: ಬೇಲೂರಿನ ಯಗಚಿ ಜಲಾಶ ಯದಿಂದ ಹಾದು ಹೋಗಿರುವ ಎಡದಂಡೆ ನಾಲೆ ಗಾಗಿ ರಾಯಾಪುರ ಗ್ರಾಮದ ಕೆಲವರ ಜಮೀನನ್ನು ಭೂಸ್ವಾದೀನ ಪಡಿಸಿಕೊಳ್ಳಲಾಗಿದೆ. ಅಲ್ಲದೇ ನಾಲೆ ಪಕ್ಕದಲ್ಲಿರುವ ಜಾಗದ ಸುತ್ತಲೂ ತಂತಿ ಬೇಲಿ ಹಾಕಲಾಗಿದೆ. ಆದರೆ ರಾಯಾಪುರ ಗ್ರಾಮಸ್ಥರು ಓಡಾಡುವುದಕ್ಕೆಂದು 10 ಅಡಿಯಷ್ಟು ಜಾಗವನ್ನು ತಂತಿ ಬೇಲಿ ಹಾಕದೇ ಬಿಡಲಾಗಿದೆ. ಈ ಜಾಗದ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಸಾಕಷ್ಟು ದಿನಗಳಿಂದ ವ್ಯಾಜ್ಯ ನಡೆಯುತಿತ್ತು.
ಶಾಸಕರ ಎದುರೇ ವಾಗ್ವಾದ: ಆದರೆ ಈ ವಿಷಯವು ತಾರಕಕ್ಕೇರದಂತೆ ಶಾಸಕರ ಸಮ್ಮುಖ ದಲ್ಲಿ ತೀರ್ಮಾನಿಸುವುದಕ್ಕಾಗಿ ತಾಪಂ ಕಚೇರಿ ಯಲ್ಲಿನ ಶಾಸಕರ ಕೊಠಡಿಗೆ ಎರಡು ಕಡೆಯ ವರನ್ನು ಕರೆದು ಚರ್ಚಿಸುತಿದ್ದರು. ಈ ಸಂದರ್ಭ ದಲ್ಲಿ ಎರಡು ಕಡೆಯವರು ಶಾಸಕರ ಎದುರಿನಲ್ಲಿ ಮನಸ್ಸಿಗೆ ಬಂದಂತೆ ಒಬ್ಬರಿಗೊಬ್ಬರು ಬೈದಾಡುತಿ ದ್ದರು. ಇದನ್ನು ಗಮನಿಸಿದ ಶಾಸಕರು ಶಾಂತಿ ಯಿಂದ ಕುಳಿತು ತೀರ್ಮಾನ ಮಾಡಿಕೊಳ್ಳಿ ಎಂದು ಎರಡು ಕಡೆಯವರನ್ನು ಕಚೇರಿಯಿಂದ ಹೊರಕ್ಕೆ ಕಳುಹಿಸಿದ್ದಾರೆ. ಆದರೆ ಎರಡೂ ಕಡೆಯವರು ಕಚೇರಿಯಿಂದ ಹೊರಗೆ ಬರುತಿದ್ದಂತೆ ಒಬ್ಬರಿ ಗೊಬ್ಬರು ಕೈ ಕೈ ಮಿಲಾಯಿಸಿದ್ದರಂದ ಎರಡು ಕಡೆಯವರು ಗಾಯಗೊಂಡರು.
ಈ ಸಂದರ್ಭ ಶಾಸಕರು ಮಧ್ಯಪ್ರವೇಶಿಸಿ ಸಮಾ ಧಾನಗೊಳಿಸಿ ಆಸ್ಪತ್ರೆಗೆ ಹೋಗುವಂತೆ ಕಳುಹಿಸಿ ದರು. ಆದರೆ ಆಸ್ಪತ್ರೆಗೆ ಸಮೀಪ ಎರಡು ಕಡೆ ಯವರು ಮತ್ತೆ ಮಾತಿಗೆ ಮಾತು ಬೆಳೆಸಿ ಹೊಡೆ ದಾಡುವುದಕ್ಕೆ ಮುಂದಾಗುತ್ತಿದ್ದರು. ಅಷ್ಟರಲ್ಲಿ ಸ್ಥಳಗ್ಕಾಮಿಸಿದ ಪೊಲೀಸರು ಅಲ್ಲಿದ್ದವರನ್ನು ಚದು ರಿಸಿ ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದರು. ನಂತರ ಇಬ್ಬರೂ ಗಾಯಾಳುಗೂ ಚಿಕಿತ್ಸೆ ನೀಡದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಆಸ್ಪತ್ರೆಗೆ ಕಳುಹಿಸಿದರು.
ಘಟನೆಗೆ ಸಂಬಂಧಿಸಿದಂತೆ ಬೇಲೂರು ಪೊಲೀಸ್ ಠಾಣೆಯಲ್ಲಿ ಎರಡು ಕಡೆಯವರ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದ್ದಾರೆ.
ಶಾಸಕ ಕೆ.ಎಸ್.ಲಿಂಗೇಶ್ ಮಾತನಾಡಿ, ಜಮೀನಿನ ರಸ್ತೆ ವಿಷಯಕ್ಕೆ ಸಂಬಂಧಿಸಿದಂತೆ ರಾಯಾಪುರ ಗ್ರಾಮದವರು ಗಲಾಟೆ ಮಾಡಿಕೊಂಡಿರುವ ವಿಷಯ ಗಮನಕ್ಕೆ ಬಂತು. ಹಾಗೂ ಎರಡು ಕಡೆಯವರನ್ನು ನನ್ನ ಕಚೇರಿಗೆ ಕರೆಸಿ ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸುವುದಕ್ಕೆ ಮಾತುಕತೆ ನಡೆಸುತಿದ್ದೆವು.
ಆದರೆ ಇಬ್ಬರೂ ಮಾತಿಗೆ ಮಾತು ಬೆಳೆಸಿದ್ದರಿಂದ ಮುಂದೊಂದು ದಿನ ತೀರ್ಮಾನಿಸೋಣ ಎಂದು ಕಳುಹಿಸಿದ್ದೆ. ಆದರೆ ಇವರು ಕೆಳಕ್ಕೆ ಹೋಗುತ್ತಿದ್ದಂತೆ ಗಲಾಟೆ ಮಾಡಿ ಕೊಳ್ಳುತ್ತಿದ್ದರು. ಇಬ್ಬರನ್ನೂ ಸಮಾಧಾನಪಡಿಸಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ತಿಳಿಸಿದರು.