Advertisement

Private Schools ಆರಂಭಕ್ಕೆ ಭೂಪರಿವರ್ತನೆ ಕಡ್ಡಾಯ: ಕರಡು ಅಧಿಸೂಚನೆ ಪ್ರಕಟ

12:16 AM Mar 16, 2024 | Team Udayavani |

ಬೆಂಗಳೂರು: ರಾಜ್ಯದಲ್ಲಿ ಖಾಸಗಿ ಶಾಲೆಗಳ ಆರಂಭಕ್ಕೆ ಭೂ ಪರಿವರ್ತನೆ ಕಡ್ಡಾಯ ಎಂಬುದು ಸಹಿತ ಹಲವು ಅಂಶಗಳನ್ನೊಳಗೊಂಡ ಕರ್ನಾಟಕ ಶಿಕ್ಷಣ ಸಂಸ್ಥೆಗಳ (ನಿರಾಕ್ಷೇಪಣೆ ಪ್ರಮಾಣ ಪತ್ರ ಮತ್ತು ನಿಯಂತ್ರಣ) ತಿದ್ದುಪಡಿ ನಿಯಮಗಳು 20224ರ ಕರಡು ಅಧಿಸೂಚನೆಯನ್ನು ಶಾಲಾ ಶಿಕ್ಷಣ ಇಲಾಖೆ ಪ್ರಕಟಿಸಿದೆ.

Advertisement

ರಾಜ್ಯದಲ್ಲಿ ಖಾಸಗಿ ಶಾಲೆಗಳನ್ನು ಆರಂಭಿಸಲು ಅಗತ್ಯವಾದ ಭೂಮಿ ಶೈಕ್ಷಣಿಕ ಉದ್ದೇಶಕ್ಕೆಂದು ಸಂಬಂಧಿಸಿದ ಇಲಾಖೆಯಿಂದ ಕಡ್ಡಾಯವಾಗಿ ಭೂ ಪರಿವರ್ತನೆ ಆಗಿರಬೇಕು. ಕರ್ನಾಟಕ ಶಿಕ್ಷಣ ಹಕ್ಕು ಕಾಯ್ದೆಯಡಿ ನೋಂದಣಿಯಾಗಿರುವ ಶಾಲೆಗಳಿಗೆ ಮಾತ್ರ ಸರಕಾರದಿಂದ ನಿರಾಕ್ಷೇಪಣೆ ಪತ್ರ ನೀಡಬೇಕು.

ನಿರಾಕ್ಷೇಪಣೆ ಪ್ರಮಾಣಪತ್ರಕ್ಕೆ ಸಲ್ಲಿಸಿದ ಅರ್ಜಿಯು ದಾಖಲೆಗಳ ಅಲಭ್ಯತೆ ಸಹಿತ ಯಾವುದೇ ಕಾರಣಕ್ಕೆ ತಿರಸ್ಕೃತವಾದರೂ ಅರ್ಜಿ ಜತೆ ಸಲ್ಲಿಸಿದ್ದ 2 ಲಕ್ಷ ರೂ. ಶುಲ್ಕವನ್ನು ಮರುಪಾವತಿಸುವುದಿಲ್ಲ. ಆ ಮೊತ್ತವನ್ನು ಹೊಸ ಅರ್ಜಿಗೆ ಪರಿಗಣಿಸಲಾಗುವುದು. ಒಂದು ವೇಳೆ ಈ ಅರ್ಜಿಯು ಮೂರು ಬಾರಿ ತಿರಸ್ಕೃತವಾದರೆ ಹಣ ಮನ್ನಾ ಆಗಲಿದೆ. 4ನೇ ಬಾರಿಗೆ ಹೊಸ ಅರ್ಜಿ ಸಲ್ಲಿಸುವಾಗ ಮತ್ತೆ 2 ಲಕ್ಷ ರೂ. ಶುಲ್ಕವನ್ನು ಶಾಲೆ ಆರಂಭಿಸಲಿಚ್ಛಿಸುವ ಸಂಸ್ಥೆ ಪಾವತಿಸಬೇಕು ಎಂಬುದು ಸಹಿತ ಹಲವು ಅಂಶಗಳನ್ನು ಈ ನಿಯಮಾವಳಿಗಳಲ್ಲಿ ತಿದ್ದುಪಡಿ ಮಾಡಲಾಗಿದೆ.

ಈ ತಿದ್ದುಪಡಿ ನಿಯಮಾವಳಿಗಳನ್ನು ಮಾ. 6ರಂದು ಪ್ರಕಟಿಸಲಾಗಿದ್ದು, ಪ್ರಕಟವಾದ ಬಳಿಕದ 15 ದಿನಗಳು ಕಳೆದು ಇವು ಅಧಿಕೃತವಾಗಿ ಜಾರಿಗೊಳ್ಳ ಲಿವೆ ಎಂದು ಅಧಿಸೂಚನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next