Advertisement

ಕೈಗಾರಿಕೆಗಾಗಿ ಹೆಚ್ಚುವರಿ 50 ಸಾವಿರ ಎಕರೆ ಜಮೀನು ಭೂ ಸ್ವಾಧೀನ: ಸಚಿವ ನಿರಾಣಿ

05:49 PM Sep 23, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಹೆಚ್ಚುವರಿಯಾಗಿ 50 ಸಾವಿರ ಎಕರೆ ಭೂ ಸ್ವಾಧೀನ ಪಡಿಸಿಕೊಳ್ಳಲಾಗುತ್ತಿದೆ. ಬೆಂಗಳೂರಿನಲ್ಲಿ 20 ಸಾವಿರ ಮತ್ತು ಇತರ ಜಿಲ್ಲೆಗಳಲ್ಲಿ 30 ಸಾವಿರ ಎಕರೆ ಭೂಮಿ ಸೇರಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದರು.

Advertisement

ವಿಧಾನ ಪರಿಷತ್‍ನ ಪ್ರಶ್ನೋತ್ತರದಲ್ಲಿ ಸದಸ್ಯರಾದ ಸಲೀಂ ಅಹಮ್ಮದ್, ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಮಂಜೂರಾದ ನಿವೇಶನ ಅಥವಾ ಭೂಮಿಯಲ್ಲಿ ಎಷ್ಟು ಸಮಯದಲ್ಲಿ ಕೈಗಾರಿಕೆ ಸ್ಥಾಪನೆ ಮಾಡಬೇಕು. ಒಂದು ವೇಳೆ ಉದ್ಯಮ ಸ್ಥಾಪನೆಯಾಗದೆ ಇದ್ದರೆ ಯಾವ ಕ್ರಮ ಕೈಗೊಳ್ಳಲಾಗುತ್ತ್ತದೆ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಅಕ್ರಮ ಮರಳುಗಾರಿಕೆ: ಲೋಕಾಯುಕ್ತ ಬಲೆಗೆ ಪೊಲೀಸರು

ಕೈಗಾರಿಕೆ ಇಲಾಖೆಯಿಂದ 188 ಕೈಗಾರಿಕಾ ಪ್ರದೇಶ ಸ್ಥಾಪಿಸಲಾಗಿದೆ. ಅದಕ್ಕಾಗಿ 1.60 ಲಕ್ಷ ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಅದರಲ್ಲಿ 52,008 ಎಕರೆಯನ್ನು ಅಭಿವೃದ್ಧಿ ಪಡಿಸಲಾಗಿದೆ. ಉಳಿದ ಭೂಮಿಯನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ನಿರಾಣಿ ಹೇಳಿದರು.

ಯೋಜನೆಯ ಅಂದಾಜು ಗಾತ್ರ ಆಧರಿಸಿ ಉದ್ಯಮ ಆರಂಭಿಸಲು ಕಾಲಮಿತಿ ನಿಗದಿ ಪಡಿಸಲಾಗುತ್ತದೆ. ಉಕ್ಕು ಉದ್ಯಮಗಳಿಗೆ ಐದು ವರ್ಷಗಳವರೆಗೂ ಸಮಯ ಬೇಕಾಗುತ್ತದೆ. ಒಟ್ಟಾರೆ ಉದ್ಯಮ ಆರಂಭಕ್ಕೆ ಗರಿಷ್ಠ 10 ವರ್ಷಗಳ ಕಾಲಾವಕಾಶ ನೀಡಲಾಗುತ್ತದೆ. ಅದರ ಒಳಗೆ ಉದ್ಯಮ ಆರಂಭವಾಗದಿದ್ದರೆ ನೋಟಿಸ್ ನೀಡಿ ಭೂಮಿ ಹಿಂಪಡೆಯುವ ಪ್ರಕ್ರಿಯೆ ನಡೆಸಲಾಗುವುದು. ಈವರೆಗೂ 117 ಉದ್ದಿಮೆದಾರರಿಗೆ ನೋಟಿಸ್ ನೀಡಲಾಗಿದೆ. ಕೆಲವರು ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತಂದಿದ್ದಾರೆ ಇನ್ನೂ ಮುಂದೆ ಕೆವಿಯಟ್ ಹಾಕಿ ಭೂಮಿ ಹಿಂಪಡೆಯಲು ಮುಂದಿನ ಕ್ರಮ ಜರುಗಿಸಲಾಗುವುದು ಎಂದು ನಿರಾಣಿ ಉತ್ತರಿಸಿದರು.

Advertisement

ನವೆಂಬರ್ ಮೊದಲ ವಾರದಲ್ಲಿ ರಾಜ್ಯದಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಯುತ್ತಿದೆ. ವಿದೇಶ ಬಂಡವಾಳ ಹೂಡಿಕೆಯಲ್ಲಿ ನಮ್ಮ ರಾಜ್ಯ ಸತತ ನಾಲ್ಕನೆ ತ್ರೈಮಾಸಿಕದಲ್ಲೂ ಮೊದಲ ಸ್ಥಾನದಲ್ಲಿದೆ. ದೇಶದ ಹೂಡಿಕೆಯಲ್ಲಿ ಶೇ.38ರಷ್ಟು ಪಾಲನ್ನು ನಾವು ಹೊಂದಿದ್ದೇವೆ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next