Advertisement

ವಿರೋಧ ಪಕ್ಷಗಳನ್ನು ಒಗ್ಗೂಡಿಸಲು ಸೋನಿಯಾ ಭೇಟಿ ಮಾಡಲಿರುವ ಲಾಲು, ನಿತೀಶ್

09:41 PM Sep 12, 2022 | Team Udayavani |

ಪಾಟ್ನಾ : 2024 ರ ಲೋಕಸಭಾ ಚುನಾವಣೆಗೆ ಮುನ್ನ ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನದ ಭಾಗವಾಗಿ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಶೀಘ್ರದಲ್ಲೇ ದೆಹಲಿಯಲ್ಲಿ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಲಿದ್ದಾರೆ ಎಂದು ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಹೇಳಿದ್ದಾರೆ.

Advertisement

”2024 ರ ಲೋಕಸಭೆ ಚುನಾವಣೆಯಲ್ಲಿ ಜನರ ಮತವನ್ನು ಕೇಳಲು “ವಿಶ್ವಾಸಾರ್ಹ ಮುಖ” ಮತ್ತು ಸಾಮೂಹಿಕ ಆಂದೋಲನದ ಅವಶ್ಯಕತೆಯಿದೆ” ಎಂದು ಹೆಸರಾಂತ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಹೇಳಿದ ಒಂದು ದಿನದ ನಂತರ ತೇಜಸ್ವಿ ಈ ಹೇಳಿಕೆ ನೀಡಿದ್ದಾರೆ.

ಇಂತಹ ಸಭೆಗಳಿಂದ ಪ್ರತಿಪಕ್ಷಗಳ ಏಕತೆ ಅಥವಾ ರಾಜಕೀಯ ಬೆಳವಣಿಗೆ ಎಂದು ನೋಡಲಾಗುವುದಿಲ್ಲ ಎಂದು ಕಿಶೋರ್ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ತೇಜಸ್ವಿ “ಅದನ್ನು ನಂಬದವರು ಕಾದು ನೋಡಬೇಕು. ಖಂಡಿತವಾಗಿಯೂ ಸಂಭವಿಸುತ್ತದೆ. ಯಾರಾದರೂ ಏನು ಹೇಳಿದರೂ ನಾನು ಪ್ರತಿಕ್ರಿಯಿಸುವುದಿಲ್ಲ” ಎಂದರು.

ರಾಜ್ಯದಲ್ಲಿ ವಿವಿಧ ಯೋಜನೆಗಳ ಅಡಿಯಲ್ಲಿ ಯುವಕರಿಗೆ ಉದ್ಯೋಗ ನೀಡುವ ಬಗ್ಗೆ ನಿತೀಶ್ ಕುಮಾರ್ ಅವರು ನೀಡಿದ ಭರವಸೆಯ ಬಗ್ಗೆ ಕೇಳಿದಾಗ, ತೇಜಸ್ವಿ ಅವರು, “ನಾವು 20 ಲಕ್ಷ ಉದ್ಯೋಗಗಳನ್ನು ಒದಗಿಸುವ ಭರವಸೆಯನ್ನು ಖಂಡಿತವಾಗಿ ಈಡೇರಿಸುತ್ತೇವೆ, ನಾವು ಸರ್ಕಾರದಲ್ಲಿದ್ದೇವೆ ಮತ್ತು ಇದು ಸಾಧ್ಯವಾಗುತ್ತದೆ” ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next