ರಾಂಚಿ : ಸಾವಿರ ಕೋಟಿ ರೂ. ಮೇವು ಹಗರಣದಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ದೋಷಿ ಎಂದು ಇಲ್ಲಿನ ವಿಶೇಷ ಸಿಬಿಐ ನ್ಯಾಯಾಲಯ ಇಂದು ಶನಿವಾರ ತೀರ್ಪು ನೀಡಿದೆ.
ಶಿಕ್ಷೆಯ ತೀರ್ಪನ್ನು ಜ.3ರಂದು ಪ್ರಕಟಿಸಲಾಗುವುದು ಎಂದು ನ್ಯಾಯಾಲಯ ಹೇಳಿದೆ.
ಲಾಲು ಪ್ರಸಾದ್ ಜತೆಗೆ ಇತರ 15 ಮಂದಿಯನ್ನು ಮೇವು ಹಗರಣದಲ್ಲಿ ದೋಷಿಗಳೆಂದು ಸಿಬಿಐ ವಿಶೇಷ ನ್ಯಾಯಾಲಯ ಪ್ರಕಟಿಸಿದೆ.
ಮಧ್ಯಾಹ್ನ 3 ಗಂಟೆಯ ಹೊತ್ತಿಗೆ ನ್ಯಾಯಾಲಯ ಈ ತೀರ್ಪನ್ನು ಪ್ರಕಟಿಸಿದೊಡನೆಯೇ ಪೊಲೀಸರು ಲಾಲು ಪ್ರಸಾದ್ ಯಾದವ್ ಮತ್ತು ಇತರ ದೋಷಿಗಳನ್ನು ಜೈಲಿಗೆ ಒಯ್ದರು.
Related Articles
ಬಿಹಾರದ ಮಾಜಿ ಮುಖ್ಯಮಂತ್ರಿ ಜಗನ್ನಾಥ ಮಿಶ್ರಾ ಅವರನ್ನು ಮೇವು ಹಗರಣದಲ್ಲಿ ಸಿಬಿಐ ನ್ಯಾಯಾಲಯ ಖುಲಾಸೆಗೊಳಿಸಿದೆ. ಅಂತೆಯೇ ಅವರು ಈ ತೀರ್ಪಿನಿಂದ ತಾನು ಅತೀವ ಹರ್ಷಿತನಾಗಿದ್ದೇನೆ ಎಂದು ಹೇಳಿದರು.
ನಿನ್ನೆ ಶುಕ್ರವಾರವಷ್ಟೇ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು “ನ್ಯಾಯಾಂಗದಲ್ಲಿ ನನಗೆ ವಿಶ್ವಾಸವಿದೆ; ನನಗೂ ಮೇವು ಹಗರಣದಲ್ಲಿ ಕ್ಲೀನ್ ಚಿಟ್ ಸಿಗಬಹುದು’ ಎಂದು ಹೇಳಿದ್ದರು.
“ನಾವು ನ್ಯಾಯಾಂಗದಲ್ಲಿ ನಂಬಿಕೆ ಮತ್ತು ಗೌರವನ್ನು ಇಟ್ಟಿದ್ದೇವೆ. ಬಿಜೆಪಿಯ ಪಿತೂರಿ ನಡೆಯಲು ನಾವು ಬಿಡೆವು’ ಎಂದು ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಕಾಲದಿಂದಲೂ, ಅಂದರೆ ಕಳೆದ 25 ವರ್ಷಗಳಿಂದಲೂ, ಬಿಜೆಪಿ ನನ್ನ ಮತ್ತು ನನ್ನ ಕುಟುಂಬದವರು ವಿರುದ್ಧ ಸಿಬಿಐ ಅಸ್ತ್ರವನ್ನು ದುರ್ಬಳಕೆ ಮಾಡಿ ಕಿರುಕುಳ ನೀಡುತ್ತಾ ಬಂದಿದೆ ಎಂದು ಲಾಲು ಹೇಳಿದ್ದಾರೆ.
ದೇವಗಢ ತಿಜೋರಿಯಿಂದ 95 ಲಕ್ಷ ರೂ.ಗಳನ್ನು ಅಕ್ರಮವಾಗಿ ಪಡೆದುಕೊಂಡದ್ದು ಮಾತ್ರವಲ್ಲದೆ ಲಾಲು ಅವರು ಎರಡು ದಶಕಗಳ ಕಾಲ ಚಾಯ್‌ಬಾಸಾ ತಿಜೋರಿಯಿಂದ 900 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಹಣವನ್ನು ಲಪಟಾಯಿಸಿರುವ ಆರೋಪಕ್ಕೆ ಗುರಿಯಾಗಿದ್ದಾರೆ.
ಐದು ಮೇವು ಹಗರಣ ಕೇಸುಗಳ ಪೈಕಿ ಒಂದರಲ್ಲಿ ಲಾಲು ಈಗಾಗಲೇ ಅಪರಾಧಿ ಎಂದು ಘೋಷಿಸಲ್ಪಟ್ಟು ಐದು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿ ಸದ್ಯ ಬೇಲ್‌ನಲ್ಲಿ ಹೊರಗಿದ್ದಾರೆ.