Advertisement

ಸಾವಯವ ತರಕಾರಿ ಕೃಷಿಯಲ್ಲಿ ಯಶಸ್ಸು ಕಂಡ ಲಲಿತಾ ಪೂಜಾರಿ

01:35 AM Apr 08, 2019 | sudhir |

ತೆಕ್ಕಟ್ಟೆ: ಪೋಲಿಯೋ ಅಂಗ ವೈಕಲ್ಯದ ನಡುವೆ ಕುಂಭಾಸಿ ಕೊರವಡಿಯ ಲಲಿತಾ ಪೂಜಾರಿ ಅವರು ಮನೆಯ ತೋಟದಲ್ಲಿ ತರಕಾರಿ ಬೆಳೆದು ಫಸಲು ಕಂಡುಕೊಂಡು ಮಾದರಿಯಾಗಿದ್ದಾರೆ.

Advertisement

ಕೊರವಡಿ ಸ.ಪ್ರಾ. ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯುತ್ತಿರುವಾಗಲೇ ಜ್ವರದಿಂದ ಬಳಲುತ್ತಿದ್ದ ಇವರು ಕ್ರಮೇಣ ತನ್ನ ಕೈ ಕಾಲುಗಳ ಅಸ್ತಿತ್ವವನ್ನು ಕಳೆದುಕೊಂಡರು. ಈ ನಡುವೆ ಬಿಡುವಿನ ಸಮಯದಲ್ಲಿ ನಿಸರ್ಗದೊಂದಿಗೆ ಬೆರೆಯಬೇಕು ಎನ್ನುವ ಹಂಬಲದೊಂದಿಗೆ ಮನೆಯ ಪರಿಸರದಲ್ಲಿ ಯೇ ವಿವಿಧ ಬಗೆಯ ಹೂವಿನ ಮತ್ತು ತರಕಾರಿ ಗಿಡಗಳನ್ನು ಬೆಳೆದು ಯಶಸ್ಸು ಕಂಡಿದ್ದಾರೆ. ಹಲವು ಬಗೆಯ ಕಲಾಕೃತಿಗಳ ರಚನೆಯಲ್ಲಿಯೂ ಇವರು ನಿಪುಣರು.

ಸ್ವಾವಲಂಬಿಯಾಗಿ ಬದುಕುವ ಜತೆಗೆ ಕಲೆ ಮತ್ತು ನಿಸರ್ಗದ ಜತೆ ಬೆರೆತು ಬಾಳಬೇಕು ಎನ್ನುವ ಹಂಬಲ ನನ್ನದು. ನನ್ನ ಈ ಹಂಬಲಕ್ಕೆ ಪೂರಕವಾಗಿ ತಾಯಿ ಮತ್ತು ಮನೆಯವರು ಪ್ರೋತ್ಸಾಹಿಸ ನೀಡುತ್ತಿದ್ದಾರೆ ಎನ್ನುತ್ತಾರೆ ಲಲಿತಾ ಪೂಜಾರಿ ಅವರು.

Advertisement

Udayavani is now on Telegram. Click here to join our channel and stay updated with the latest news.

Next