Advertisement
ದೇವಸ್ಥಾನದಲ್ಲಿ ಅನ್ನಪ್ರಸಾದ ಹಾಗೂ ಶ್ರೀ ದೇವರ ಶೇಷ ವಸ್ತ್ರ ಪಡೆಯಲು ಭಕ್ತರು ಮಧ್ಯಾಹ್ನದಿಂದಲೇ ಕಾಯುತ್ತಿದ್ದುದರಿಂದ ಅವರಿಗೆ ನಿಲ್ಲಲು ಸೂಕ್ತ ವ್ಯವಸ್ಥೆ ಮಾಡಲಾಗಿತ್ತು. ದೇವಸ್ಥಾನದ ಬಸ್ ನಿಲ್ದಾಣ ಹಾಗೂ ಕುದುರು ಪ್ರದೇಶದಲ್ಲಿ ಪ್ರತ್ಯೇಕ ಸರದಿ ಸಾಲು ಇತ್ತು. ಸೇತುವೆಯ ಮೇಲೆಯೂ ಸಾಲು ನಿಂತಿದ್ದರು. ದೇವರದರ್ಶನ ಹಾಗೂ ಅನ್ನಪ್ರಸಾದ ವಿತರಣೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನ ಸುಮಾರು 12 ಸಾವಿರ ಮಂದಿ ಅನ್ನ ಪ್ರಸಾದ ಸ್ವೀಕರಿಸಿದರೆರಾತ್ರಿ ಅಂದಾಜು 30 ಸಾವಿರ ಮಂದಿ ಅನ್ನಪ್ರಸಾದ ಸ್ವೀಕರಿಸಿದರು. ಸಂಜೆ 6.30ರಿಂದಲೇ ಆರಂಭವಾಗಿದ್ದ ರಾತ್ರಿಯ ಅನ್ನಪ್ರಸಾದ ವಿತರಣೆಗೆ ಬಫೆ ವ್ಯವಸ್ಥೆಯನ್ನೂ ಮಾಡಲಾಗಿತ್ತು.
ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕ ವೃಂದದ 300 ಮಂದಿ ಸ್ವಯಂ ಸೇವಕರಾಗಿದ್ದರು. ಸುಮಾರು 100 ಮಂದಿ ಪೊಲೀಸರು ಭದ್ರತೆ ನಿರತರಾಗಿದ್ದರು. ಮಳೆಯೂ ಸುರಿದಿದ್ದುದು ಭಕ್ತರಿಗೆ ಅನುಕೂಲವಾಯಿತು.
ರಾತ್ರಿ 57ನೇ ವರ್ಷದ ಕೊಡೆತ್ತೂರು ಹುಲಿ ವೇಷದ ಮೆರವಣಿಗೆ ಇದ್ದುದರಿಂದ ಹಾಗೂ ಶನಿವಾರವಾದ ಕಾರಣ ಅತ್ಯಧಿಕ ಭಕ್ತರು ಆಗಮಿಸಿದ್ದುದರಿಂದ ವಾಹನ ದಟ್ಟಣೆ ಉಂಟಾಗದಂತೆ ಎಚ್ಚರಿಕೆ ವಹಿಸಲಾಗಿತ್ತು. ದೇಗುಲದ ಮುಂಭಾಗದ ಬೀದಿಯನ್ನು ವಾಹನ ಸಂಚಾರ, ನಿಲುಗಡೆ ಮುಕ್ತಗೊಳಿಸಲಾಗಿತ್ತು.