Advertisement

ಟ್ವಿಟರ್‌ನಲ್ಲಿ ಟ್ರೋಲ್‌ ಆದ ಐಪಿಎಲ್‌ನ ಮಾಜಿ ಮುಖ್ಯಸ್ಥ ಲಲಿತ್‌ ಮೋದಿ!

08:02 PM Jul 16, 2022 | Team Udayavani |

ಮುಂಬೈ: ಐಪಿಎಲ್‌ನ ಮಾಜಿ ಮುಖ್ಯಸ್ಥ ಲಲಿತ್‌ ಮೋದಿ ಮತ್ತು ಬಾಲಿವುಡ್‌ ನಟಿ ಸುಶ್ಮಿತಾ ಸೇನ್‌ ಪರಸ್ಪರ ಡೇಟಿಂಗ್‌ ಮಾಡುತ್ತಿರುವ ವಿಚಾರವನ್ನು ಬಹಿರಂಗಪಡಿಸಿಕೊಂಡಿರುವುದು ಎಲ್ಲರಿಗೂ ಗೊತ್ತೇ ಇದೆ.

Advertisement

ಆದರೆ ಇದೀಗ ಲಲಿತ್‌ ಅವರ ಪೋಸ್ಟ್‌ ಭಾರೀ ಟ್ರೋಲ್‌ಗೆ ಒಳಗಾಗಿದೆ.

ಲಲಿತ್‌ ಅವರು ಶುಕ್ರವಾರದಂದು ಟ್ವಿಟರ್‌ನಲ್ಲಿ ತಾವು ಸುಶ್ಮಿತಾ ಅವರೊಂದಿಗಿರುವ ಹಲವು ಫೋಟೋಗಳನ್ನು ಹಂಚಿಕೊಂಡಿದ್ದರು. ಅದರಲ್ಲಿ ಅವರು ಸುಶ್ಮಿತಾ ಅವರ ಅಧಿಕೃತ ಟ್ವಿಟರ್‌ ಖಾತೆಯನ್ನು ಟ್ಯಾಗ್‌ ಮಾಡುವ ಬದಲು, ಅವರ ಹೆಸರಿನಲ್ಲಿರುವ ನಕಲಿ ಖಾತೆಯನ್ನು ಟ್ಯಾಗ್‌ ಮಾಡಿದ್ದಾರೆ.

ಈ ವಿಚಾರವಾಗಿ ಅನೇಕರು ಟ್ರೋಲ್‌ ಮಾಡಲಾರಂಭಿಸಿದ್ದು, “ಲಲಿತ್‌ ಬಹಳ ಅರ್ಜೆಂಟ್‌ನಲ್ಲಿದ್ದಾರೆ’ ಎಂದು ಕಾಲೆಳೆಯಲಾರಂಭಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next