Advertisement

ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಪುಣ್ಯ ಸ್ಮರಣೆ ಮಾಡಿದ ಗಣ್ಯರು

04:01 PM Jan 11, 2022 | Team Udayavani |

ಬೆಂಗಳೂರು: ಇಂದು ಭಾರತದ ಮಾಜಿ ಪ್ರಧಾನಿ ಲಾಲ್​ ಬಹದ್ದೂರ್ ಶಾಸ್ತ್ರಿಅವರ 56ನೇ ಪುಣ್ಯತಿಥಿ. ಶಾಸ್ತ್ರಿ ಅವರು 1966ರ ಜನವರಿ 11ರಂದು ಉಜ್ಬೆಕಿಸ್ತಾನ್ ​​ದ ತಾಷ್ಕೆಂಟ್​​ನಲ್ಲಿ ನಿಧನರಾಗಿದ್ದರು. ಹಲವು ಗಣ್ಯರು ಲಾಲ್ ಬಹದ್ದೂರ್ ಶಾಸ್ತ್ರಿ ಪುಣ್ಯ ಸ್ಮರಣೆ ಮಾಡಿದ್ದಾರೆ.

Advertisement

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, “ಮಾಜಿ ಪ್ರಧಾನಮಂತ್ರಿ, ಭಾರತರತ್ನ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪುಣ್ಯತಿಥಿಯಂದು ಅವರಿಗೆ ಆದರಪೂರ್ವಕ ನಮನಗಳು. ಅವರ ಆದರ್ಶಗಳು, ಪ್ರಾಮಾಣಿಕ ಜೀವನ, ಸ್ವಾತಂತ್ರ್ಯ ಹೋರಾಟ, ದೇಶಸೇವೆಗಳೆಲ್ಲವೂ ಪ್ರತಿಯೊಬ್ಬ ಭಾರತೀಯನಿಗೆ ನಿರಂತರ ಪ್ರೇರಣೆ ನೀಡುತ್ತಿದೆ” ಎಂದು ಕೂ ಮಾಡಿದ್ದಾರೆ.

Koo App

”ಮಾಜಿ ಪ್ರಧಾನಮಂತ್ರಿ, ಭಾರತರತ್ನ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪುಣ್ಯತಿಥಿಯಂದು ಅವರಿಗೆ ಆದರಪೂರ್ವಕ ನಮನಗಳು. ಅವರ ಆದರ್ಶಗಳು, ಪ್ರಾಮಾಣಿಕ ಜೀವನ, ಸ್ವಾತಂತ್ರ್ಯ ಹೋರಾಟ, ದೇಶಸೇವೆಗಳೆಲ್ಲವೂ ಪ್ರತಿಯೊಬ್ಬ ಭಾರತೀಯನಿಗೆ ನಿರಂತರ ಪ್ರೇರಣೆ ನೀಡುತ್ತಿದೆ” : ಮುಖ್ಯಮಂತ್ರಿ @bsbommai. #LalBahadurShastri

CM of Karnataka (@CMOKarnataka) 11 Jan 2022

Advertisement

ಸ್ವತಂತ್ರ ಭಾರತದ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಿದ ಮಾಜಿ ಪ್ರಧಾನಿ, ಶ್ರೇಷ್ಠ ಸಿದ್ಧಾಂತಗಳ ತಳಹದಿಯಲ್ಲಿ ಜೀವನ ನಡೆಸಿದ ಆದರ್ಶವಾದಿ ನಾಯಕ, ಭಾರತರತ್ನ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಪುಣ್ಯಸ್ಮರಣೆಯಂದು ಗೌರವದ ನಮನಗಳು. ‘ಜೈ ಜವಾನ್ ಜೈ ಕಿಸಾನ್’ಎಂಬ ಅವರ ಘೋಷಣೆಯ ಮೂಲೋದ್ದೇಶವನ್ನು ಸಾಕಾರಗೊಳಿಸೋಣ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಭಾರತದ ಎರಡನೇ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪುಣ್ಯತಿಥಿಯಂದು ಅವರಿಗೆ ನನ್ನ ಗೌರವಪೂರ್ವಕ ನಮನಗಳು. ಅವರದು ಸರಳತೆ ಮತ್ತು ವಿನಯದಿಂದ ಬದುಕಿದ ಅಸಾಧಾರಣ ಜೀವನ. ಅವರು ಭಾರತದ ಸುಧಾರಣೆಗಾಗಿ ಧೈರ್ಯದಿಂದ ಮತ್ತು ಅವಿರತವಾಗಿ ಕೆಲಸ ಮಾಡಿದರು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಕೂ ಮಾಡಿದ್ದಾರೆ.

ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಸಿ.ಎನ್ ಅವರು ಕೂ ಮಾಡಿ, ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಪುಣ್ಯತಿಥಿ ಪ್ರಯುಕ್ತ ವಿಧಾನಸೌಧದ ಆವರಣದಲ್ಲಿ ಅವರ ಪ್ರತಿಮೆಯ ಬಳಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು. ’ಜೈ ಜವಾನ್, ಜೈ ಕಿಸಾನ್’ ತತ್ವದಡಿ ಸಾಗೋಣ. ಅವರ ಸರಳ ವ್ಯಕ್ತಿತ್ವ, ಜನಪರ ಕಾಳಜಿ, ಅಭಿವೃದ್ಧಿಪರ ವಿಚಾರಗಳನ್ನು ಮೈಗೂಡಿಸಿ, ಮುಂದಿನ ಜನಾಂಗಗಳಿಗೂ ತಿಳಿಸೋಣ ಎಂದಿದ್ದಾರೆ.

Koo App

ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಪುಣ್ಯತಿಥಿ ಪ್ರಯುಕ್ತ ವಿಧಾನಸೌಧದ ಆವರಣದಲ್ಲಿ ಅವರ ಪ್ರತಿಮೆಯ ಬಳಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು. ’ಜೈ ಜವಾನ್, ಜೈ ಕಿಸಾನ್’ ತತ್ವದಡಿ ಸಾಗೋಣ. ಅವರ ಸರಳ ವ್ಯಕ್ತಿತ್ವ, ಜನಪರ ಕಾಳಜಿ, ಅಭಿವೃದ್ಧಿಪರ ವಿಚಾರಗಳನ್ನು ಮೈಗೂಡಿಸಿ, ಮುಂದಿನ ಜನಾಂಗಗಳಿಗೂ ತಿಳಿಸೋಣ. #LalBahadurShastri

Dr. Ashwathnarayan C. N. | ಡಾ. ಅಶ್ವಥ್ ನಾರಾಯಣ್ ಸಿ.ಎನ್. (@drashwathnarayan) 11 Jan 2022

Advertisement

Udayavani is now on Telegram. Click here to join our channel and stay updated with the latest news.

Next